ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣ: ಪ್ರತಿಪಕ್ಷಗಳಿಂದ ಯೋಗಿ ಸರ್ಕಾರದ ವಿರುದ್ಧ ಡೀಪ್ ಸೀಕ್ರೆಟ್ ಆರೋಪ! 

ಉತ್ತರ ಪ್ರದೇಶದ ನಟೋರಿಯಸ್ ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆರೋಪಗಳನ್ನು ಮಾಡಲು ಪ್ರಾರಂಭಿಸಿವೆ.
ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣ: ಯೋಗಿ ಸರ್ಕಾರದ ವಿರುದ್ಧ ಡೀಪ್ ಸೀಕ್ರೆಟ್ ಆರೋಪಕ್ಕೆ ಇಳಿದ ಪ್ರತಿಪಕ್ಷಗಳು!
ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣ: ಯೋಗಿ ಸರ್ಕಾರದ ವಿರುದ್ಧ ಡೀಪ್ ಸೀಕ್ರೆಟ್ ಆರೋಪಕ್ಕೆ ಇಳಿದ ಪ್ರತಿಪಕ್ಷಗಳು!

ನವದೆಹಲಿ: ಉತ್ತರ ಪ್ರದೇಶದ ನಟೋರಿಯಸ್ ರೌಡಿ ಶೀಟರ್ ವಿಕಾಸ್ ದುಬೆ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆರೋಪಗಳನ್ನು ಮಾಡಲು ಪ್ರಾರಂಭಿಸಿವೆ.

ಎನ್ ಕೌಂಟರ್ ಕುರಿತು ಪ್ರತಿಪಕ್ಷಗಳ ನಾಯಕರಾದ ಎಸ್ ಪಿಯ ಅಖಿಲೇಶ್ ಯಾದವ್, ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಯೋಗಿ ಸರ್ಕಾರ ಈ ಎನ್ ಕೌಂಟರ್ ಮೂಲಕ ಏನನ್ನೋ ಮುಚ್ಚಿಡುತ್ತಿದೆ ಎಂದು ಆರೋಪಿಸಿದ್ದಾರೆ. 

ವಿಕಾಸ್ ದುಬೆ ಎನ್ ಕೌಂಟರ್ ಕುರಿತು ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕಾನ್ಪುರ ಎನ್ ಕೌಂಟರ್ ನ ಮುಖ್ಯ ಆರೋಪಿಯಾಗಿದ್ದ ವಿಕಾಸ್ ದುಬೆಯನ್ನು ಎನ್ ಕೌಂಟರ್ ಮಾಡುವ ಮೂಲಕ ಯೋಗಿ ಸರ್ಕಾರ ಡೀಪ್ ಸೀಕ್ರೆಟ್ ನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿದ್ದಾರೆ. ವಿಕಾಸ್ ದುಬೆಯನ್ನು ಕೋರ್ಟ್ ಗೆ ಕರೆದುಕೊಂಡು ಹೋಗುತ್ತಿದ್ದ ಕಾರು ಪಲ್ಟಿಯಾಗಲಿಲ್ಲ. ಆದರೆ ಪಲ್ಟಿಯಾಗುವುದರಿಂದ ಸರ್ಕಾರ ತನ್ನನ್ನು ತಾನು ರಕ್ಷಿಸಿಕೊಂಡಿದೆ. ಕಾರು ಪಲ್ಟಿಯಾಗಿ ಆತ ಪರಾರಿಯಾಗಲು ಯತ್ನಿಸಿದರೆ ಆತ ಪೊಲೀಸರಿಗೇಕೆ ಶರಣಾಗುತ್ತಿದ್ದ? ಇದರಲ್ಲೇನೋ ಗೌಪ್ಯತೆ ಅಡಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸಹ ಪ್ರತಿಕ್ರಿಯೆ ನೀಡಿದ್ದು,  ಎಲ್ಲಾ ಮೂರು ಎನ್ ಕೌಂಟರ್ ಗಳೂ ಏಕೆ ಒಂದೇ ರೀತಿಯಲ್ಲಿವೆ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ದುಬೆಯ ಬಂಧನ ಅಥವಾ ಶರಣಾಗತಿಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಆಗ್ರಹಿಸಿದ್ದಾರೆ.
ದುಬೆಯ ಜೊತೆ ಯಾವ್ಯಾವ ರಾಜಕಾರಣಿ, ಪೊಲೀಸ್ ಅಧಿಕಾರಿಗಳು ಸಂಪರ್ಕದಲ್ಲಿದ್ದರು ಎಂಬ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಶಿವರಾಜ್ ಸಿಂಗ್ ಚೌಹಾಣ್ ರನ್ನು ಕೇಳುತ್ತೇನೆ, ವಿಕಾಸ್ ದುಬೆಯ ಜೊತೆಗಿದ್ದ ಇಬ್ಬರನ್ನೂ ಎನ್ ಕೌಂಟರ್ ಮಾಡಲಾಗಿದೆ. ಮೂರು ಎನ್ ಕೌಂಟರ್ ಗಳೂ ಏಕೆ ಒಂದೇ ಮಾದರಿಯಲ್ಲಿವೆ ಎಂದು ಪ್ರಶ್ನಿಸಿದ್ದಾರೆ.

"ವಿಕಾಸ್ ದುಬೆ ವಿಚಾರಣೆ ನಡೆದರೆ ಅಧಿಕಾರದಲ್ಲಿರುವವರೊಂದಿಗೆ ಆತನ ಸಂಪರ್ಕ ಬಯಲಾಗುತ್ತಿತ್ತು. ಆದರೆ ಎನ್ ಕೌಂಟರ್ ಮೂಲಕ ಇದನ್ನು ಸರ್ಕಾರ ಮುಚ್ಚಿ ಹಾಕಿದೆ" ಎಂದು ಕಾಂಗ್ರೆಸ್ ನ ಮತ್ತೋರ್ವ ನಾಯಕ ಜಿತಿನ್ ಪ್ರಸಾದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com