ಟೊಮೆಟೊ ಬೆಲೆ ದಿಢೀರ್ ಏರಿಕೆ: ಮಹಾನಗರಗಳಲ್ಲಿ ಕಿಲೋಗೆ 70 ರಿಂದ 80 ರೂ.

ಟೊಮೆಟೊ ಬೆಲೆ ನಗರ ಪ್ರದೇಶಗಳಲ್ಲಿ ಕಿಲೋಗೆ 70ರಿಂದ 80 ರೂಪಾಯಿಗಳವರೆಗೆ ಏರಿಕೆಯಾಗಿದೆ. ಈ ಬಾರಿ ಟೊಮೆಟೊ ಬೆಳೆ ಕಡಿಮೆಯಾಗಿರುವುದರಿಂದ ಮತ್ತು ಮಳೆ ಹೆಚ್ಚಾಗಿ ಕೊಳೆತು ಹೋಗಿ ಬೇಗನೆ ಹಾಳಾಗುವುದರಿಂದ ಬೆಲೆ ಹೆಚ್ಚಳವಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಟೊಮೆಟೊ ಬೆಲೆ ನಗರ ಪ್ರದೇಶಗಳಲ್ಲಿ ಕಿಲೋಗೆ 70ರಿಂದ 80 ರೂಪಾಯಿಗಳವರೆಗೆ ಏರಿಕೆಯಾಗಿದೆ. ಈ ಬಾರಿ ಟೊಮೆಟೊ ಬೆಳೆ ಕಡಿಮೆಯಾಗಿರುವುದರಿಂದ ಮತ್ತು ಮಳೆ ಹೆಚ್ಚಾಗಿ ಕೊಳೆತು ಹೋಗಿ ಬೇಗನೆ ಹಾಳಾಗುವುದರಿಂದ ಬೆಲೆ ಹೆಚ್ಚಳವಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ಸಚಿವಾಲಯದ ಇತ್ತೀಚಿನ ಅಂಕಿಅಂಶ ಪ್ರಕಾರ, ಬಹುತೇಕ ಮಹಾನಗರಗಳಲ್ಲಿ ತಿಂಗಳ ಹಿಂದೆ ಕೆಜಿಗೆ 20 ರೂಪಾಯಿಯಿದ್ದ ಟೊಮೆಟೊ ಬೆಲೆ ಈಗ 60 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಕೆಜಿಗೆ 70ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಗುರ್ಗಾಂವ್, ಗ್ಯಾಂಗ್ ಟಾಕ್, ಸಿಲಿಗುರಿ, ರಾಯ್ ಪುರ್ ಗಳಲ್ಲಿ 70 ರೂಪಾಯಿಗಳಿಗೆ ಏರಿಕೆಯಾದರೆ, ಗೋರಖ್ ಪುರ್, ಕೋಟಾ ಮತ್ತು ದಿಮಪುರ್ ಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಚೊಮೆಟೊ ಬೆಲೆ ಕೆಜಿಗೆ 80ರೂಪಾಯಿಗಳವರೆಗೆ ಹೋಗಿದೆ.

ಇನ್ನು ಟೊಮೆಟೊ ಹೆಚ್ಚಾಗಿ ಬೆಳೆಯುವ ರಾಜ್ಯಗಳಾದ ಹೈದರಾಬಾದ್ ನಲ್ಲಿ ಕೆಜಿ ಟೊಮೆಟೊ ಬೆಲೆ 37 ರೂಪಾಯಿಯಿದ್ದರೆ ಚೆನ್ನೈಯಲ್ಲಿ 40 ರೂಪಾಯಿ, ಬೆಂಗಳೂರಿನಲ್ಲಿ 46 ರೂಪಾಯಿಯಿದೆ.

ಸಾಮಾನ್ಯವಾಗಿ ಜುಲೈಯಿಂದ ಸೆಪ್ಟೆಂಬರ್ ವರೆಗೆ ಟೊಮೆಟೊ ಬೆಲೆ ತೀವ್ರ ಮಳೆಯಿರುವಾಗ ಹೆಚ್ಚಾಗುತ್ತದೆ. ಟೊಮೆಟೊ ಬೇಗನೆ ಹಾಳಾಗುವ ತರಕಾರಿಯಾಗಿರುವುದರಿಂದ ಮಳೆಗೆ ಕೊಳೆತು ಹೋಗುವುದರಿಂದ ಮತ್ತು ಕಡಿಮೆ ಇಳುವರಿಯಾಗುವುದರಿಂದ ಈ ಸಮಯದಲ್ಲಿ ಬೆಲೆ ಹೆಚ್ಚಾಗುತ್ತದೆ ಎಂದರು.

ಮಾರುಕಟ್ಟೆಗೆ ಪೂರೈಕೆ ಹೆಚ್ಚಾದಾಗ ಟೊಮೆಟೊ ಬೆಲೆ ನಿಯಂತ್ರಣಕ್ಕೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com