ಕುಖ್ಯಾತ ರೌಡಿ ವಿಕಾಸ್ ದುಬೆ ತಮ್ಮ ಮಗನೆಂದು ಒಪ್ಪಿಕೊಳ್ಳದ ಪೋಷಕರು: ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು!

ಪೊಲೀಸ್ ಎನ್ ಕೌಂಟರ್ ನಲ್ಲಿ ಕುಖ್ಯಾತ ರೌಡಿ ವಿಕಾಸ್ ದುಬೆ ಮೃತಪಡುವುದರೊಂದಿಗೆ ಬಿಕ್ರೂ ಗ್ರಾಮದಲ್ಲಿ ಭಯೋತ್ಪಾದನೆ ಯುಗ ಅಂತ್ಯಗೊಂಡಿದೆ. ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದಾಗಿ ದರೋಡೆಕೋರನ ಕೈಯಲ್ಲಿ ಜೀವ ಭಯದಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ವಿಕಾಸ್ ದುಬೆ ಮನೆ ಮುಂಭಾಗದಲ್ಲಿನ ಚಿತ್ರ
ವಿಕಾಸ್ ದುಬೆ ಮನೆ ಮುಂಭಾಗದಲ್ಲಿನ ಚಿತ್ರ

ಲಖೌನೌ: ಪೊಲೀಸ್ ಎನ್ ಕೌಂಟರ್ ನಲ್ಲಿ ಕುಖ್ಯಾತ ರೌಡಿ ವಿಕಾಸ್ ದುಬೆ ಮೃತಪಡುವುದರೊಂದಿಗೆ ಬಿಕ್ರೂ ಗ್ರಾಮದಲ್ಲಿ ಭಯೋತ್ಪಾದನೆ ಯುಗ ಅಂತ್ಯಗೊಂಡಿದೆ. ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವುದಾಗಿ ದರೋಡೆಕೋರನ ಕೈಯಲ್ಲಿ ಜೀವ ಭಯದಲ್ಲಿ ವಾಸಿಸುತ್ತಿದ್ದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ವಿಕಾಸ್ ದುಬೆ ಮೃತದೇಹವನ್ನು ಪಡೆಯಲು ಯಾರೊಬ್ಬ ಕುಟುಂಬ ಸದಸ್ಯರು ಮುಂದೆ ಬಂದಿಲ್ಲ.ಮೃತ ಮಗನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ತಂದೆ ರಾಮ್ ಕುಮಾರ್ ನಿರಾಕರಿಸಿದ್ದಾರೆ. 
ವಿಕಾಸ್ ಗೂ ತಮ್ಮಗೂ ಯಾವುದೇ ಸಂಬಂಧ ಇಲ್ಲ ಎಂದು ಆತನ ತಾಯಿ ಸರ್ಲಾ ದುಬೆ ಹೇಳಿದ್ದಾರೆ.

ವಿಕಾಸ್ ದುಬೆಗೆ ತಕ್ಕಾ ಶಾಸ್ತ್ರಿ ಮಾಡಲಾಗಿದೆ. ಇಂತಹ ಪಾತಕಿಗಳನ್ನು ಮಟ್ಟ ಹಾಕದಿದ್ದರೆ ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮುಂದುವರೆಯುತ್ತವೆ ಎಂದು ರಾಮ್ ಕುಮಾರ್ ಹೇಳಿದ್ದಾರೆ. ವಿಕಾಸ್ ಗ್ರಾಮದಲ್ಲಿದ್ದ ತನಕ, ಅವನ ತಂದೆ ಅವನೊಂದಿಗೆ ವಾಸಿಸುತ್ತಿದ್ದರು. ಆದಾಗ್ಯೂ, ಅವರ ಪತ್ನಿ ರಿಚಾ ಮತ್ತು ಮಗ ಸೇರಿದಂತೆ ಅವರ ಇಡೀ ಕುಟುಂಬ ಲಖನೌದಲ್ಲಿ ವಾಸಿಸುತ್ತಿದೆ.ವಿಕಾಸ್ ತನ್ನ ಸಾಮ್ರಾಜ್ಯವನ್ನು ಬಿಕ್ರೂನಲ್ಲಿ ಹೊಂದಿದ್ದನು, ಅಲ್ಲಿ ಅವನು ತನ್ನ ಸಹಾಯಕರೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದನು.

ವಿಕಾಸ್ ದುಬೆ ತಂಗಿ ಮತ್ತು ಆಕೆ ಪತಿ ಕೂಡಾ ಮೃತದೇಹವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ವಿಕಾಸ್ ದುಬೆ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಬಿಕ್ರೂ ಸುತ್ತಮುತ್ತಲಿನ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈಗ ಭಯವಿಲ್ಲದೆ ಬದುಕುವಂತಾಗಿದೆ ಎಂದು 55 ವರ್ಷದ ರಾಮ್ ಪಾಲ್ ಎಂಬವರು ಹೇಳಿದ್ದಾರೆ.

ವಿಕಾಸ್ ದುಬೆ ಹಾಗೂ ಆತನ ಬೆಂಬಲಿಗರು ನಮ್ಮ ಮುಂದೆ ಹಾದು ಹೋಗುವಾಗ ತಲೆ ಎತ್ತುವಂತಿರಲಿಲ್ಲ. ನಮಸ್ತೆ ಎಂದು ಗೌರವ ಕೊಡಬೇಕಿತ್ತು. ಅದನ್ನು ಮಾಡದಿದ್ದರೆ ಮನಬಂದಂತೆ ಥಳಿಸಲಾಗುತಿತ್ತು. ಇಂದು ಕಡೆಗೂ ದೇವರಿಗೆ ನಮ್ಮ ಪ್ರಾರ್ಥನೆ ಮುಟ್ಟಿದೆ ಎಂದು ನೆರೆಹೊರೆಯವರು ವಿಕಾಸ್ ದುಬೆ ಸಾವಿಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com