ಕೋವಿಡ್-19: ವಿಶ್ವವಿದ್ಯಾನಿಲಯ ಮಟ್ಟದ ಎಲ್ಲಾ ಪರೀಕ್ಷೆಗಳು ರದ್ದು; ದೆಹಲಿ ಡಿಸಿಎಂ ಸಿಸೋಡಿಯಾ ಘೋಷಣೆ

ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದ ಸೆಮಿಸ್ಟರ್ ಮತ್ತು ಅಂತಿಮ ಪರೀಕ್ಷೆಗಳನ್ನು ರದ್ದುಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯದ ಸೆಮಿಸ್ಟರ್ ಮತ್ತು ಅಂತಿಮ ಪರೀಕ್ಷೆಗಳನ್ನು ರದ್ದುಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೊರೋನಾವೈರಸ್ ಪ್ರೇರಿತ ಲಾಕ್‌ಡೌನ್ ಕಾರಣದಿಂದಾಗಿ ಅಂತಿಮ ಪರೀಕ್ಷೆಗಳನ್ನು ನಡೆಸದೆ 10,  12 ನೇ ತರಗತಿ ವಿದ್ಯಾರ್ಥಿಗಳಿಗೆ ಬಡ್ತಿ ನೀಡುವ ನಿರ್ಧಾರವನ್ನು ಈ ಹಿಂದೆಯೇ ತೆಗೆದುಕೊಳ್ಲಲಾಗಿತ್ತು ಎಂದು ಡಿಸಿಎಂ ಈ ವೇಳೆ ಹೇಳಿದ್ದಾರೆ. ಕೊರೋನಾ ಕಾರಣದಿಂದಾಗಿ ತರಗತಿಗಳಲ್ಲಿನ ಅಡೆತಡೆಯಿಂದಾಗಿ ಲ್ಯಾಬ್‌ಗಳು, ಗ್ರಂಥಾಲಯಗಳು, ಪ್ರಾಯೋಗಿಕ ಪರೀಕ್ಷೆಗಳು ಕ್ಷೇತ್ರ ಸಂಶೋಧನೆ ಎಲ್ಲವೂ ನಿಂತುಹೋಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗಿದೆ,  ಹಾಗಾಗಿ ಅಂತಿಮ ವರ್ಷ ಸೇರಿದಂತೆ  ಎಲ್ಲಾ ಟರ್ಮಿನಲ್ ಪರೀಕ್ಷೆಗಳು, ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ."

ಇಲ್ಲಿಯವರೆಗೆ ನಡೆಸಿದ ಮೌಲ್ಯಮಾಪನಗಳ ಆಧಾರದ ಮೇಲೆ ಮುಂದಿನ ವರ್ಷ ಅಥವಾ ಸೆಮಿಸ್ಟರ್‌ಗೆ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲು ಅದಕ್ಕೆ ಅನುಗುಣವಾಗಿ ಪದವಿಗಳನ್ನು ನೀಡಲು ವಿಶ್ವವಿದ್ಯಾಲಯಗಳಿಗೆ ತಿಳಿಸಲಾಗಿದೆ. ಈ ಸಂಕೀರ್ಣ ಕಾಲಘಟ್ಟದಲ್ಲಿ ಪರೀಕ್ಷೆಗಳನ್ನು ನಡೆಸುವುದು ಕಷ್ಟಕರವಾದ ಸಂಗತಿಯಾಗಿದೆ.  ಆದರೆ ಉನ್ನತ ಶಿಕ್ಷಣ ಅಥವಾ ಉದ್ಯೋಗವನ್ನು ಪಡೆಯಲು ಅವರು ತಮ್ಮ ಪದವಿಗಳನ್ನು ಪಡೆಯುವುದು ಸಹ ಕಡ್ಡಾಯವಾಗಿದೆ. 

ದೆಹಲಿ ಸರ್ಕಾರದ ನಿರ್ಧಾರವು ದೆಹಲಿ ವಿಶ್ವವಿದ್ಯಾಲಯ (ಡಿಯು), ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ರಾಷ್ಟ್ರ ರಾಜಧಾನಿಯ ಇತರ ಕೇಂದ್ರ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ. ಇದು ಅಸಾಧಾರಣ ಸಮಯಮತ್ತು ನಾವು ಅಸಾಧಾರಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ" ಸಿಎಂ ಅರವಿಂದ ಕೇಜ್ರಿವಾಲ್ ಅವರ ಹೆಸರು ಉಲ್ಲೇಖಿಸಿ ಸಿಸೋಡಿಯಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com