ತಾಯಿಗೆ ಕೋವಿಡ್-19 ನೆಗೆಟಿವ್, ನವಜಾತ ಶಿಶುವಿಗೆ ಸೋಂಕು ದೃಢ!: ಭ್ರೂಣದಲ್ಲೇ ಸೋಂಕು ತಗುಲಿದ ವಿಶ್ವದ ಮೊದಲ ಪ್ರಕರಣ!

ತಾಯಿಗೆ ಕೋವಿಡ್-19 ಸೋಂಕು ಪರೀಕ್ಷೆ ನೆಗೆಟೀವ್ ಬಂದಿದ್ದರೂ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವರದಿಯಾಗಿದೆ. 

Published: 11th July 2020 10:34 AM  |   Last Updated: 11th July 2020 12:31 PM   |  A+A-


Baby born to COVID-19 negative mother at Delhi's RML hospital tests positive

ತಾಯಿಗೆ ಕೋವಿಡ್-19 ನೆಗೆಟೀವ್ ನವಜಾತ ಶಿಶುವಿಗೆ ಸೋಂಕು ದೃಢ!: ಭ್ರೂಣದಲ್ಲೇ ಸೋಂಕು ತಗುಲಿದ ವಿಶ್ವದ ಮೊದಲ ಪ್ರಕರಣ!

Posted By : Srinivas Rao BV
Source : Online Desk

ದೆಹಲಿ: ತಾಯಿಗೆ ಕೋವಿಡ್-19 ಸೋಂಕು ಪರೀಕ್ಷೆ ನೆಗೆಟೀವ್ ಬಂದಿದ್ದರೂ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವರದಿಯಾಗಿದೆ. 

ಮಗುವಿನ ತಾಯಿಗೆ ಹೆರಿಗೆಗೂ ಮುನ್ನ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಈ ವರದಿಯಲ್ಲಿ ಆಕೆಗೆ ಕೋವಿಡ್-19 ನೆಗೆಟೀವ್ ಬಂದಿತ್ತು. ಆದರೆ ಹೆರಿಗೆಯಾದ 6 ಗಂಟೆಗಳ ನಂತರ ಮಗುವಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು ಸೋಂಕು ದೃಢಪಟ್ಟಿದೆ. 

ವೈದ್ಯರು ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು ಭ್ರೂಣದಲ್ಲಿ ಕೋವಿಡ್-19 ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದು ಎಂದು ಹೇಳಿದ್ದಾರೆ. ಕೋವಿಡ್-19 ಸೋಂಕು ತಗುಲಿದ್ದರೂ ನವಜಾತ ಶಿಶುವಿಗೆ ರೋಗಲಕ್ಷಣಗಳು ಕಂಡಿಬಂದಿಲ್ಲ. ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮಗುವಿನ ತಾಯಿಗೆ ಜೂ.11 ರಂದು ಕೋವಿಡ್-19 ಸೋಂಕು ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿತ್ತು. ಜೂ.27 ರಂದು ಎರಡನೇ ಬಾರಿಗೂ ಸೋಂಕು ದೃಢಪಟ್ಟಿತ್ತು. ಆದರೆ ಜು.7 ರಂದು ಆಕೆಗೆ ಕೊರೋನಾ ಸೋಂಕು ಪರೀಕ್ಷೆ ವರದಿ ನೆಗೆಟೀವ್ ಬಂದಿದ್ದು ಜು.08 ರಂದು ಹೆರಿಗೆಯಾಗಿತ್ತು, ಮಗುವಿಗೆ 48 ಗಂಟೆಗಳ ನಂತರ ಮತ್ತೊಂದು ಬಾರಿ ಟೆಸ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರಾದ ಡಾ. ರಾಹುಲ್ ಚೌಧರಿ ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp