ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಆದರೆ ನಾವು ಐದು ವರ್ಷ ಅಧಿಕಾರದಲ್ಲಿ ಮುಂದುವರಿಯುತ್ತೇವೆ: ರಾಜಸ್ಥಾನ ಸಿಎಂ ಗೆಹ್ಲೋಟ್

 ತಮ್ಮ ಶಾಸಕರಿಗೆ ದೊಡ್ಡ ಮೊತ್ತದ ಹಣವನ್ನು ನೀಡುವ ಮೂಲಕ ಪ್ರತಿಪಕ್ಷ ಬಿಜೆಪಿ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅದೇ ವೇಳೆ ತಮ್ಮ ಸರ್ಕಾರ ಸ್ಥಿರವಾಗಿದ್ದು ಐದು ವರ್ಷ ಆಡಳಿತವನ್ನು  ಪೂರ್ಣಗೊಳಿಸುತ್ತದೆ ಎಂದು ಹೇಳಿದರು.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಜೈಪುರ್: ತಮ್ಮ ಶಾಸಕರಿಗೆ ದೊಡ್ಡ ಮೊತ್ತದ ಹಣವನ್ನು ನೀಡುವ ಮೂಲಕ ಪ್ರತಿಪಕ್ಷ ಬಿಜೆಪಿ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅದೇ ವೇಳೆ ತಮ್ಮ ಸರ್ಕಾರ ಸ್ಥಿರವಾಗಿದ್ದು ಐದು ವರ್ಷ ಆಡಳಿತವನ್ನು  ಪೂರ್ಣಗೊಳಿಸುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ನನ್ನ ಅಥವಾ ನಮ್ಮ ಸರ್ಕಾರವದ ನಡೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪಿತೂರಿ ನಡೆಸಿದ್ದಾರೆ ಎಂದು  ಗೆಹ್ಲೋಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಆದರೆ ರಾಜಸ್ಥಾನ ಸಿಎಂ ಗೆಹ್ಲೋಟ್ ಅವರ ಆರೋಪಗಳನ್ನು ತಿರಸ್ಕರಿಸಿದ ಬಿಜೆಪಿಯ ರಾಜ್ಯಾದ್ಯಕ್ಷ ಸತೀಶ್ ಪೂನಿಯಾ, ರಾಜ್ಯದ ರಾಜಕೀಯ ಪರಿಸ್ಥಿತಿ ಕಾಂಗ್ರೆಸ್ನಲ್ಲಿನ ಆಂತರಿಕ ಸಮಸ್ಯೆಯ ಪರಿಣಾಮವಾಗಿದೆ ಮತ್ತು ಮುಖ್ಯಮಂತ್ರಿ ಕೇವಲ ಆಪಾದನೆ ಮಾಡುವುದರಲ್ಲೇ ಕಾಲ ಕಳೆದಿದ್ದಾರೆ ಎಂದರು.

"ಕೇಂದ್ರ ನಾಯಕರ ಆಜ್ಞೆಯ ಮೇರೆಗೆ ಬಿಜೆಪಿ ನಾಯಕರು ಈ ಆಟವನ್ನು ಆಡುತ್ತಿದ್ದಾರೆ. ಶಾಸಕರಿಗೆ 10 ಕೋಟಿ ರೂ. ಮತ್ತು 15 ಕೋಟಿ ರೂ.  ಹಣವನ್ನು ನೀಡಲಾಗುತ್ತದೆ"  ಮುಖ್ಯಮಂತ್ರಿ ಆರೋಪಿಸಿದರು. ಬಿಜೆಪಿ ನಾಯಕರು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದಾರೆ. ಕುರಿ, ಮೇಕೆಗಳ ಮಾರುಕಟ್ಟೆಯಲ್ಲಿ "ಬಕ್ರಾ-ಮಂಡಿ" ಯಂತೆ ರಾಜಕೀಯ ಮಾಡಲು ಬಯಸುತ್ತಾರೆ, ಅಲ್ಲಿ ಆಡು, ಕುರಿಗಳ  ಖರೀದಿ ಮತ್ತು ಮಾರಾಟ. ನಡೆಯುತ್ತದೆ. ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ, ಉಪನಾಯಕ ರಾಜೇಂದ್ರ ರಾಥೋಡ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪೂನಿಯಾ  ಅವರ ಹೆಸರು ಉಲ್ಲೇಖಿಸಿ  ಪಕ್ಷದ ಕೇಂದ್ರ ನಾಯಕತ್ವದ ಕಾರ್ಯಸೂಚಿಯನ್ನು ಈ ಮೂವರೂ ನಡೆಸಿದ್ದಾರೆ ಎಂದು ದೂರಿದ್ದಾರೆ.

"ಮುಖ್ಯಮಂತ್ರಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಾರ್ಕಿಕತೆಯಿಂದ ಮಾತನಾಡಿಲ್ಲ. ಇದು ಅವರ ಸ್ವಂತ  ಅಭಿಪ್ರಾಯ ಅವರು ಬಿಜೆಪಿಯನ್ನು ದೂಷಿಸಲು ಬಯಸುತ್ತಾರೆ. ಅವರು ಕಾಂಗ್ರೆಸ್ ನ ಅನುಭವಿ ನಾಯಕ ಮತ್ತು ಅವರ ನೋವಿಗೆ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.  ಏಕೆಂದರೆ ದೇಶದಲ್ಲಿ ಕಾಂಗ್ರೆಸ್ ಶಾಕ್ತಿ ಕುಂದಿದೆ. " ಎಂದು ಪೂನಿಯಾ ಹೇಳಿದರು

ಇಷ್ಟಾಗಿಯೂ ಗೆಹ್ಲೋಟ್ ತಮ್ಮ ಸರ್ಕಾರವು ಯಾವುದೇ ಬಿಕ್ಕಟ್ಟನ್ನು ಎದುರಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ತಮ್ಮ ಸರ್ಕಾರ  ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು."ರಾಜಸ್ಥಾನದಲ್ಲಿ ಸರ್ಕಾರ ಸ್ಥಿರವಾಗಿದೆ, ಸ್ಥಿರವಾಗಿರುತ್ತದೆ ಮತ್ತು ಐದು ವರ್ಷಗಳ ಅವಧಿ ಪೂರೈಸಲಿದೆದೆ" ಎಂದು ಕಾಂಗ್ರೆಸ್ ಹಿರಿಯ ಮುಖಂಡರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com