ಕೋವಿಡ್-19 ರೋಗಿಗಳಿಗೆ ಸೋರಿಯಾಸಿಸ್ ಇಂಜೆಕ್ಷನ್ ಗೆ ಅನುಮತಿ

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಸೋರಿಯಾಸಿಸ್ ಇಂಜೆಕ್ಷನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಕ ಅನುಮತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಸೋರಿಯಾಸಿಸ್ ಇಂಜೆಕ್ಷನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಕ ಅನುಮತಿ ನೀಡಿದೆ. 

ಚರ್ಮದ ಸಮಸ್ಯೆಯಾದ ಸೋರಿಯಾಸಿಸ್ ಚಿಕಿತ್ಸೆಗೆ ಇಟೋಲಿಜುಮ್ಯಾಬ್ ಎಂಬ ಔಷಧವನ್ನು ಬಳಕೆ ಮಾಡಲಾಗುತ್ತಿದೆ. ಇದೇ ಔಷಧವನ್ನು ಕೋವಿಡ್-19 ಸೋಂಕಿನಿಂದ ಗಂಭೀರವಾಗಿ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ತುರ್ತು ಪರಿಸ್ಥಿತಿಗಳಲ್ಲಿ ಸೀಮಿತವಾಗಿ ಬಳಕೆ ಮಾಡಲು ಭಾರತೀಯ ಔಷಧ ನಿಯಂತ್ರಕ ಅನುಮತಿ ನೀಡಿದೆ.

ಕೋವಿಡ್-19 ರ ವೈದ್ಯಕೀಯ ಅಗತ್ಯತೆಗಳನ್ನು ಪರಿಗಣಿಸಿ ಸೋರಿಯಾಸಿಸ್ ಗೆ ಬಳಕೆ ಮಾಡಲಾಗುವ ಇಟೋಲಿಜುಮ್ಯಾಬ್ ನ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಡಾ.ವಿ.ಜಿ ಸೋಮನಿ ಹೇಳಿದ್ದಾರೆ.

ಕೋವಿಡ್-19 ರೋಗಿಗಳ ಮೇಲೆ ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಿದ ಬಳಿಕ ಈ ಔಷಧ ಬಳಕೆಗೆ ಅನುಮತಿ ನೀಡಲಾಗಿದೆ. ಶ್ವಾಸಕೋಶಶಾಸ್ತ್ರಜ್ಞರು, ಔಷಧಶಾಸ್ತ್ರಜ್ಞರು ಮತ್ತು ಏಮ್ಸ್ ನ ತಜ್ಞರು ಈ ಔಷಧ ಬಳಕೆಯಿಂದ ಸಕಾರಾತ್ಮಕ ಪರಿಣಾಮಗಳನ್ನು ಪರಿಗಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಔಷಧ ಬಳಕೆಗೂ ಮುನ್ನ ರೋಗಿ ಅಥವಾ ಕುಟುಂಬ ಸದಸ್ಯರು ಅನುಮತಿ ನೀಡಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com