ಐಐಟಿ-ದೆಹಲಿಯಿಂದ ಎನ್-95 ಮಾಸ್ಕ್ ಗಳನ್ನು 95 ನಿಮಿಷಗಳಲ್ಲಿ ಸೋಂಕು ನಿವಾರಕ ಉಪಕರಣ

ಎನ್-95 ಮಾಸ್ಕ್ ಗಳನ್ನು ಮರುಬಳಕೆ ಮಾಡಲು ಸಾಧ್ಯವಾಗುವ, ಸೋಂಕು ನಿವಾರಕ ಉಪಕರಣವನ್ನು ಐಐಟಿ-ದೆಹಲಿ ತಯಾರಿಸಿದೆ. 
ಐಐಟಿ-ದೆಹಲಿಯಿಂದ ಎನ್-95 ಮಾಸ್ಕ್ ಗಳನ್ನು 95 ನಿಮಿಷಗಳಲ್ಲಿ ಸೋಂಕು ನಿವಾರಕ ಉಪಕರಣ
ಐಐಟಿ-ದೆಹಲಿಯಿಂದ ಎನ್-95 ಮಾಸ್ಕ್ ಗಳನ್ನು 95 ನಿಮಿಷಗಳಲ್ಲಿ ಸೋಂಕು ನಿವಾರಕ ಉಪಕರಣ

ನವದೆಹಲಿ: ಎನ್-95 ಮಾಸ್ಕ್ ಗಳನ್ನು ಮರುಬಳಕೆ ಮಾಡಲು ಸಾಧ್ಯವಾಗುವ, ಸೋಂಕು ನಿವಾರಕ ಉಪಕರಣವನ್ನು ಐಐಟಿ-ದೆಹಲಿ ತಯಾರಿಸಿದೆ. 

ಕೇವಲ 95 ನಿಮಿಷಗಳಲ್ಲಿ ಎನ್-95 ಮಾಸ್ಕ್ ಗಳನ್ನು ಸೋಂಕು ರಹಿತಗೊಳಿಸಬಹುದಾಗಿದೆ. ಓಜೋನ್ ಬೇಸ್ಡ್ ಡಿ-ಕಂಟಾಮಿನೇಷನ್ ಉಪಕರಣ ಇದಾಗಿದ್ದು. ಬಯೋ-ಮೆಡಿಕಲ್ ತ್ಯಾಜ್ಯವನ್ನು ಕಡಿಮೆ ಮಾಡಿ ಎನ್-95 ಮಾಸ್ಕ್ ಗಳನ್ನು ಬಳಕೆ ಮಾಡಬಹುದಾಗಿದೆ. ಈ ಉಪಕರಣಕ್ಕೆ ಚಕ್ರ್ ಡಿಕೋವ್ ಎಂಬ ನಾಮಕರಣ ಮಾಡಲಾಗಿದ್ದು, 10 ಬಾರಿವರೆಗೂ ಮರುಬಳಕೆ ಮಾಡಬಹುದಾಗಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉಪಕರಣವನ್ನು ಬಿಡುಗಡೆ ಮಾಡಿದ್ದಾರೆ. ಐಐಟಿ ಸ್ಟಾರ್ಟ್ ಅಪ್- ಚಕ್ರ ಇನ್ನೋವೇಷನ್ ನಿಂದ ಈ ಕಾರ್ಯವಿಧಾನವನ್ನು ತಯಾರಿಸಲಾಗಿದ್ದು ಭಾರತೀಯ ವೈದ್ಯಕೀಯ ಪರಿಷತ್ ವೈರಾಲಜಿ ವಿಭಾಗದಿಂದ ಇದನ್ನು ಅನುಮೋದಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com