ಧಾರಾವಿಯಲ್ಲಿ ಕೊರೋನಾ ನಿಯಂತ್ರಣ: ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆ ಶ್ಲಾಘನೆ

ಮಾರಕ ಕೊರೋನಾ ವೈರಸ್ ಮಹಾರಾಷ್ಟ್ರದಲ್ಲಿ ಅರ್ಭಟ ಜೋರಾಗಿದೆಯಾದರೂ ಏಷ್ಯಾದ ಅತೀ ದೊಡ್ಡ ಸ್ಲಂ ಎಂದೇ ಖ್ಯಾತಿ ಗಳಿಸಿರುವ ಧಾರಾವಿಯಲ್ಲಿ ಮಾತ್ರ ಕೊರೋನಾವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ. ಮಹಾರಾಷ್ಟ್ರ ಸರ್ಕಾರದ ಈ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ.
ಧಾರಾವಿಯಲ್ಲಿ ಸ್ಕ್ರೀನಿಂಗ್ (ಏಪಿ ಚಿತ್ರ)
ಧಾರಾವಿಯಲ್ಲಿ ಸ್ಕ್ರೀನಿಂಗ್ (ಏಪಿ ಚಿತ್ರ)

ಮುಂಬೈ: ಮಾರಕ ಕೊರೋನಾ ವೈರಸ್ ಮಹಾರಾಷ್ಟ್ರದಲ್ಲಿ ಅರ್ಭಟ ಜೋರಾಗಿದೆಯಾದರೂ ಏಷ್ಯಾದ ಅತೀ ದೊಡ್ಡ ಸ್ಲಂ ಎಂದೇ ಖ್ಯಾತಿ ಗಳಿಸಿರುವ ಧಾರಾವಿಯಲ್ಲಿ ಮಾತ್ರ ಕೊರೋನಾವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ. ಮಹಾರಾಷ್ಟ್ರ ಸರ್ಕಾರದ ಈ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ.

ದೇಶದ ಮಹಾನ್ ನಗರಗಳಾದ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಇನ್ನಿತರ ರಾಜ್ಯಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ವಿಪರೀತ ಹೆಚ್ಚಾಗುತ್ತಲೆ ಇದ್ದು ಇದು ಸರ್ಕಾರದ ನಿದ್ದೆಗೆಡಿಸಿದೆ. ಈ ಹಿಂದೆ ಕೊರೋನಾ ದೇಶದ ಅತಿ ದೊಡ್ಡ ಕೊಳೆಗೇರಿ ಪ್ರದೇಶ ಮುಂಬೈನ ಧಾರಾವಿಯಲ್ಲಿ ಸ್ಫೋಟಗೊಂಡರೆ ನಿಯಂತ್ರಣ ಕಷ್ಟ ಎಂದು ಹೇಳಲಾಗಿತ್ತು. ಅದಕ್ಕೆ ಇಂಬು ನೀಡುವಂತೆ ಆರಂಭದ ಕೆಲದಿನಗಳಲ್ಲಿ ಧಾರಾವಿಯಲ್ಲಿ ಗಣನೀಯವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗಿತ್ತು.

ಆದರೆ ಬಿಎಂಸಿ ಮತ್ತು ಮಹಾರಾಷ್ಟ್ರ ಸರ್ಕಾರ ಕೈಗೊಂಡ ಮುಂಜಾಗ್ರತಾಕ್ರಮಗಳಿಂದಾಗಿ ಧಾರಾವಿಯಲ್ಲಿ ಕೊರೋನಾ ಇದೀಗ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಸ್ವತಃ ಈ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO) ಬಹಿರಂಗ ಪಡಿಸುವುದರ ಜೊತೆಗೆ ಕೊರೋನಾ ನಿಯಂತ್ರಣಕ್ಕೆ ತರುವಲ್ಲಿ ಸಹಕರಿಸಿದ ಧಾರಾವಿಯ ನಿವಾಸಿಗಳು ಹಾಗು ಮುಂಬೈ ಸ್ಥಳೀಯ ಆಡಳಿತದ ಕಾರ್ಯ ವೈಖರಿಯನ್ನು ಶ್ಲಾಘಿಸಿದೆ. 

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿಕೆ ನೀಡಿದ್ದು, ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್, ನ್ಯೂಜಿಲೆಂಡ್, ಇಟಲಿ, ಸ್ಪೇನ್, ದಕ್ಷಿಣ ಕೊರಿಯಾದಲ್ಲಿ ಸೋಂಕು ಪ್ರಸರಣವನ್ನು ನಿಯಂತ್ರಿಸಲಾಗಿದೆ. ಅಲ್ಲದೆ ಭಾರತದ ಅತೀ ದೊಡ್ಡ ಸ್ಲಂ ಧಾರಾವಿಯಲ್ಲೂ ಸೋಂಕು ನಿಯಂತ್ರಣಕ್ಕೆ ತರಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಹೇಳಿದ್ದಾರೆ.

ಜೊತೆಗೆ ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವಾರದ ಆದಿತ್ಯ ಠಾಕ್ರೆ ಅವರು ವಿಶ್ವ ಆರೋಗ್ಯ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ, ಈ ಯಶಸ್ಸಿಗೆ ಕಾರಣರಾದ ಮಹಾರಾಷ್ಟ್ರದ ಚುನಾಯಿತ ಪ್ರತಿನಿಧಿಗಳು, ವಿವಿಧ ಸರ್ಕಾರೇತರ ಸಂಸ್ಥೆಗಳು (NGO) ಹಾಗೂ ಧಾರಾವಿಯ ನಿವಾಸಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಏಷ್ಯಾದಲ್ಲೇ ಅತಿ ದೊಡ್ಡ ಸ್ಲಂ ಎನಿಸಿಕೊಂಡಿರುವ ಧಾರಾವಿಯಲ್ಲಿ ಸುಮಾರು 6.5 ಲಕ್ಷ ಮಂದಿ ವಾಸವಿದ್ದು ಮೂಲ ಸೌಕರ್ಯದ ಕೊರತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಕೊರೊನಾ ಕಾಣಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಕೊರೋನಾಗೆ ಅತಿ ಹೆಚ್ಚು ತುತ್ತಾದ ಪ್ರದೇಶಗಳಲ್ಲಿ ಧಾರಾವಿ ಮೊದಲನೇ ಸಾಲಿನಲ್ಲಿ ನಿಲ್ಲುತ್ತದೆ. ಆದರೆ ಈಗ ಕೊರೊನಾವನ್ನು ನಿಯಂತ್ರಣಕ್ಕೆ ತಂದ ವಿಚಾರದಲ್ಲಿಯೂ ಸಹ ಇದೀಗ ಧಾರಾವಿ ಮೊದಲ ಸ್ಥಾನಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com