ರಾಜಧಾನಿ ದೆಹಲಿಯಲ್ಲಿ ಶೇ.80ರಷ್ಟು ಕೊರೋನಾ ಸೋಂಕಿತರು ಗುಣಮುಖ

ರಾಷ್ಟ್ರ ರಾಜಧಾನಿ ದೆಹಲಿ ಕೊರೋನಾವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವತ್ತ ದಾಪುಗಾಲಿರಿಸಿದ್ದು, ದೆಹಲಿಯಲ್ಲಿ ಕೊರೋನಾ ಗುಣಮುಖರ ಪ್ರಮಾಣ ಶೇ.80ಕ್ಕೆ ಏರಿಕೆಯಾಗಿದೆ.
ದೆಹಲಿ ಸಿಎಂ ಕೇಜ್ರಿವಾಲ್
ದೆಹಲಿ ಸಿಎಂ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಕೊರೋನಾವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವತ್ತ ದಾಪುಗಾಲಿರಿಸಿದ್ದು, ದೆಹಲಿಯಲ್ಲಿ ಕೊರೋನಾ ಗುಣಮುಖರ ಪ್ರಮಾಣ ಶೇ.80ಕ್ಕೆ ಏರಿಕೆಯಾಗಿದೆ.

ಹೌದು.. ಈ ಬಗ್ಗೆ ದೆಹಲಿ ಆರೋಗ್ಯ ಇಲಾಖೆ ಇಂದು ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಭಾನುವಾರ ಕೊರೋನಾ ಸೋಂಕಿತರ ಗುಣಮುಖರ ಪ್ರಮಾಣ ಶೇ.79.97ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಇಂದು 1,573 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ದೆಹಲಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,12,494ಕ್ಕೆ ಏರಿಕೆಯಾಗಿದೆ. ಅಂತೆಯೇ ದೇಹಲಿಯಲ್ಲಿ ಇಂದು ಒಂದೇ ದಿನ 37 ಹೊಸ ಕೊವಿಡ್-19 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೆಹಲಿಯಲ್ಲಿ ಕೊರೋನಾ ಸಾವಿನ ಸಂಖ್ಯೆ 3,371 ಕ್ಕೆ ಏರಿಕೆಯಾಗಿದೆ.

ಶೇ.80ರಷ್ಟು ಸೋಂಕಿತರು ಗುಣಮುಖ
ಕೋವಿಡ್ ಪರೀಕ್ಷೆಯಲ್ಲಿ ತೀವ್ರ ಏರಿಕೆಯ ಹೊರತಾಗಿಯೂ ದೆಹಲಿಯ ದೈನಂದಿನ ಕೋವಿಡ್ ಪ್ರಕರಣಗಳಲ್ಲಿನ ಇತ್ತೀಚಿನ ದಿನಗಳಲ್ಲಿ ಕುಸಿತ ಕಂಡಿದೆ. ದೆಹಲಿಯಲ್ಲಿ ಒಟ್ಟಾರೆ 1,12,494 ಪ್ರಕರಣಗಳ ಪೈಕಿ ಈ ವರೆಗೂ 79.97 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ 89,968 ಸೋಂಕಿತರು ಗುಣಮುಖರಾಗಿದ್ದು, 19,155 ಸೋಂಕಿತರು ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com