ಆತ್ಮನಿರ್ಭರ ಭಾರತ ಯೋಜನೆಯ ಪ್ಯಾಕೇಜ್ ಅನುಷ್ಠಾನ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಲಾಕ್‌ ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜಿಡಿಪಿಯ ಶೇ.10ರಷ್ಟು ಮೊತ್ತಕ್ಕೆ ಸಮನಾದ 20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ ಭಾರತ ಪ್ಯಾಕೇಜ್ ಅನುಷ್ಠಾನದ ಕ್ರಮಗಳನ್ನು  ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪರಿಶೀಲನೆ ನಡೆಸಿದರು.

Published: 12th July 2020 07:36 PM  |   Last Updated: 12th July 2020 07:36 PM   |  A+A-


Nirmala Sitharaman

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Posted By : Srinivasamurthy VN
Source : UNI

ನವದೆಹಲಿ: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಲಾಕ್‌ ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜಿಡಿಪಿಯ ಶೇ.10ರಷ್ಟು ಮೊತ್ತಕ್ಕೆ ಸಮನಾದ 20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ ಭಾರತ ಪ್ಯಾಕೇಜ್ ಅನುಷ್ಠಾನದ ಕ್ರಮಗಳನ್ನು  ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪರಿಶೀಲನೆ ನಡೆಸಿದರು.

ಸೀತಾರಾಮನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮೇ 13 ರಿಂದ 17 ರವರೆಗೆ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜ್‌ನ ವಿವರಗಳನ್ನು ಪ್ರಕಟಿಸಿದ್ದರು. ಸ್ವಾವಲಂಬಿ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಐದು ಸ್ತಂಭಗಳಾದ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ರೋಮಾಂಚಕ ಜನಸಂಖ್ಯಾಶಾಸ್ತ್ರ ಮತ್ತು  ಬೇಡಿಕೆಯ ಹೆಚ್ಚಳ ಅತ್ಯಗತ್ಯ ಎಂದಿದ್ದರು.

ಆರ್ಥಿಕ ಪ್ಯಾಕೇಜ್‌ಗಳ ಪ್ರಕಟಣೆಗಳ ಅನುಷ್ಠಾನವನ್ನು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಗಳು ಈಗಾಗಲೇ ಪ್ರಾರಂಭಿಸಿದ್ದು, ಹಣಕಾಸು ಸಚಿವರು ಖುದ್ದಾಗಿ ಆರ್ಥಿಕ ಪ್ಯಾಕೇಜ್ ಅನುಷ್ಠಾನದ ನಿಯಮಿತ ವಿಮರ್ಶೆಗಳು ಮತ್ತು ಮೇಲ್ವಿಚಾರಣೆಯನ್ನು ಪರಿಶೀಲಿಸಲಿದ್ದಾರೆ. ಎಲ್ಲಾ ಕೇಂದ್ರ  ಏಜೆನ್ಸಿಗಳಾದ ರೈಲ್ವೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಸಿಪಿಡಬ್ಲ್ಯುಡಿ ಇಪಿಸಿ ಮತ್ತು ರಿಯಾಯಿತಿ ಒಪ್ಪಂದಗಳಿಗೆ ಸಂಬಂಧಿಸಿದಂತೆ ಒಪ್ಪಂದದ ಕಟ್ಟುಪಾಡುಗಳನ್ನು ಪೂರ್ಣಗೊಳಿಸಲು ನೀಡಿರುವ ಗಡುವನ್ನು 6 ತಿಂಗಳವರೆಗೆ ವಿಸ್ತರಿಸುವುದಾಗಿ ಈ ಹಿಂದೆ ಹಣಕಾಸು ಸಚಿವರು ಘೋಷಿಸಿದರು.

ದೇಶದಲ್ಲಿ ಹಿಂದೆಂದೂ ಸೃಷ್ಟಿಯಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ 2020-21ರ ಅವಧಿಯಲ್ಲಿ ರಾಜ್ಯಗಳ ಸಾಲದ ಮಿತಿಯನ್ನು ಶೇ. 3ರಿಂದ 5 ಕ್ಕೆ ಹೆಚ್ಚಿಸಲು ಕೇಂದ್ರನಿರ್ಧರಿಸಿದೆ ಎಂದು ಹಣಕಾಸು ಸಚಿವರು ಘೋಷಿಸಿದ್ದರು. ಇದು ರಾಜ್ಯಗಳಿಗೆ ರೂ. 4.28 ಲಕ್ಷ ಕೋಟಿ ರೂ. ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಲಿದೆ  ಎಂದು ಅವರು ತಿಳಿಸಿದ್ದರು.

Stay up to date on all the latest ರಾಷ್ಟ್ರೀಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp