‘ನಕಲಿ’ ಎಸ್‌ಬಿಐ ಬ್ಯಾಂಕ್ ಶಾಖೆ ನಡೆಸುತ್ತಿದ್ದ ಮೂವರ ಬಂಧನ

ನಕಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯನ್ನು ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿಯಲ್ಲಿ ನಡೆದಿದೆ.
‘ನಕಲಿ’ ಎಸ್‌ಬಿಐ ಬ್ಯಾಂಕ್ ಶಾಖೆ ನಡೆಸುತ್ತಿದ್ದ ಮೂವರ ಬಂಧನ

ಚೆನ್ನೈ: ನಕಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯನ್ನು ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿಯಲ್ಲಿ ನಡೆದಿದೆ.

ಎಸ್‌ಬಿಐನ ಮಾಜಿ ಉದ್ಯೋಗಿಯೊಬ್ಬನ ಮಗ ಕಮಲ್ ಬಾಬು (19) ತನ್ನ ಸಂಪರ್ಕಗಳ ಮೂಲಕ ಶಾಖೆಯನ್ನು ಸ್ಥಾಪಿಸಲು ಕಂಪ್ಯೂಟರ್, ಲಾಕರ್, ಚಲನ್ ಮತ್ತು ಖೋಟಾ ದಾಖಲೆ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ತಂದಿದ್ದ. ಪನ್ರುತಿ ಬಜಾರ್ ಶಾಖೆಯ ಹೆಸರಿನಲ್ಲಿ ಒಂದು ವೆಬ್‌ಸೈಟ್ ಅನ್ನು ಸಹ ರಚಿಸಿದ್ದಎಂದು ಪೋಲೀಸರು ಹೇಳಿದ್ದಾರೆ.

ಕಮಲ್ ಬಾಬು ಜತೆಗೆ ಎ ಕುಮಾರ್ (42), ಎಂ ಮಾಣಿಕಮ್ (52) ಎಂಬ ಇಬ್ಬರೂ ಸೇರಿದ್ದು ಈ ಇಬ್ಬರೂ ಲಾಕ್ ಡೌನ್ ನಡುವೆ ತಾವು ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂಬ ಖಚಿತತೆಯೊಂದಿಗೆ ಏಪ್ರಿಲ್‌ನಲ್ಲಿ ಶಾಖೆಯನ್ನು ತೆರೆದಿದ್ದರು, 

ಆದಾಗ್ಯೂ ನಾರ್ತ್ ಬಜಾರ್‌ನಲ್ಲಿ ಹೊಸದಾಗಿ ತೆರೆಯಲಾದ ಶಾಖೆಯ ಬಗ್ಗೆ ಎಸ್‌ಬಿಐ ಗ್ರಾಹಕರೊಬ್ಬರು ಪಟ್ಟಣದಲ್ಲಿ ಅಸ್ತಿತ್ವದಲ್ಲಿರುವ ಶಾಖೆಯ ವ್ಯವಸ್ಥಾಪಕರೊಂದಿಗೆ ವಿಚಾರಿಸಿದಾಗ ನಕಲಿ ಶಾಖೆಯ ವಿಚಾರ ಬೆಳಕು ಕಂಡಿದೆ.

ಗ್ರಾಹಕರೊಬ್ಬರು ಅವರು ನಕಲಿ ಶಾಖೆಯಿಂದ ಸ್ವಾಧೀನಪಡಿಸಿಕೊಂಡ ರಶೀದಿಯನ್ನು ತೋರಿಸಿದ ನಂತರ, ವ್ಯವಸ್ಥಾಪಕರು ಮತ್ತು ಇತರ ಅಧಿಕಾರಿಗಳು ನಕಲಿ ಶಾಖೆಗೆ ಭೇಟಿ ನೀಡಿದರು ಮತ್ತು ಅಗತ್ಯವಿರುವ ಎಲ್ಲ ದಾಖಲೆಗಳನ್ನು ಹೊಂದಿರುವ ಮೂಲ ಬ್ಯಾಂಕ್ ಶಾಖೆಯಂತೆಯೇ ಇರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅವರು ಕೂಡಲೇ ಪನ್ರುತಿ ಪೊಲೀಸರಿಗೆ ದೂರು ನೀಡಿದ್ದು, ಈ ಮೂವರನ್ನು ಬಂಧಿಸಿ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 473, 469, 484, 109 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

"ಬಾಬು ತಮ್ಮ ಆರಂಭಿಕ ವರ್ಷಗಳಲ್ಲಿ ಎಲ್ಲಾ ಬ್ಯಾಂಕ್ ಕಾರ್ಯಾಚರಣೆಗಳ ಬಗ್ಗೆ ಅರಿತಿದ್ದ.  ಆದ್ದರಿಂದ ನಕಲಿ ಶಾಖೆಯನ್ನು ತೆರೆಯಲು ಆತನಿಗೆ ಸುಲಭವಾಗಿದೆ. ಬಾಬು ಪೋಷಕರು  ಮಾಜಿ ಎಸ್‌ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದು ಚಿಕ್ಕ ವಯಸ್ಸಿನಿಂದಲೂ, ಅವರು ಬ್ಯಾಂಕಿಗೆ ಭೇಟಿ ನೀಡುತ್ತಿದ್ದರು ಮತ್ತು ಒಂದು ಶಾಖೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಬಲು ಹತ್ತಿರದಿಂಡ ಗಮನಿಸಿದ್ದಾನೆ.ಅವರ ತಂದೆ ಕೆಲವು ವರ್ಷಗಳ ಹಿಂದೆ ನಿಧನರಾದರು ಮತ್ತು ಅವರ ತಾಯಿ  ಸಹ ನಿವೃತ್ತರಾಗಿದ್ದು ತಂದೆಯ ಮರಣದ ನಂತರ ಬಾಬು  ತಮ್ಮ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿ ವಿಳಂಬವಾದ ಬಳಿಕ ಅವನು ದ ಸ್ವತಃ ಬ್ಯಾಂಕ್ ತೆರೆಯಲು ನಿರ್ಧರಿಸಿದರು, ”  ಪನುರ್ತಿ ಇನ್ಸ್‌ಪೆಕ್ಟರ್ ಅಂಬೇಡ್ಕರ್ ಹೇಳಿದ್ದಾರೆ.

“ಇಲ್ಲಿಯವರೆಗೆ, ಗ್ರಾಹಕರು ಈ ಶಾಖೆಯಲ್ಲಿ ಹಣವನ್ನು ಕಳೆದುಕೊಂಡಿದ್ದಾರೆ ಎಂದು ನಮಗೆ ಯಾವುದೇ ದೂರುಗಳು ಬಂದಿಲ್ಲ. ನಾವು ವಿಚಾರಿಸಿದಾಗ, ಬಾಬು ಅವರು ಎಂದಿಗೂ ಜನರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿಲ್ಲ ಆದರೆ ಸ್ವತಃ ಬ್ಯಾಂಕ್ ತೆರೆಯಲು ಬಯಸಿದ್ದರು ಆದಾಗ್ಯೂ, ಅವನ ತಾಯಿಯ ಖಾತೆ ಮತ್ತು ಚಿಕ್ಕಮ್ಮನ ಖಾತೆಯ ನಡುವೆ ಸಾಕಷ್ಟು ವ್ಯವಹಾರಗಳು ನಡೆದಿವೆ. ಆ ಕುರಿತು ತನಿಖೆ ನಡೆಯುತ್ತಿದೆ" ಪೋಲೀಸರು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com