ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಪ್ರಕಟ:ಶೇ.88.78 ವಿದ್ಯಾರ್ಥಿಗಳು ತೇರ್ಗಡೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟಾರೆ ಶೇಕಡಾ 88.78ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

Published: 13th July 2020 01:04 PM  |   Last Updated: 13th July 2020 02:36 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : ANI

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ)ಯ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟಾರೆ ಶೇಕಡಾ 88.78ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ತೇರ್ಗಡೆ ಫಲಿತಾಂಶ ಶೇಕಡಾ 5.38ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಒಟ್ಟಾರೆ ಫಲಿತಾಂಶ ಶೇಕಡಾ 83.40ರಷ್ಟಾಗಿತ್ತು.

ಕೇರಳದ ತಿರುವನಂತಪುರ ವಲಯದಲ್ಲಿ ಅತಿಹೆಚ್ಚು ತೇರ್ಗಡೆ ಫಲಿತಾಂಶ ಶೇಕಡಾ 97.67 ದಾಖಲಾಗಿದೆ. ಪಾಟ್ನಾದಲ್ಲಿ ಅತಿ ಕಡಿಮೆ ಫಲಿತಾಂಶ ಶೇಕಡಾ 74.57 ದಾಖಲಾಗಿದೆ.

ಬೆಂಗಳೂರು ವಲಯದಲ್ಲಿ ಶೇಕಡಾ 97.05ರಷ್ಟು ಫಲಿತಾಂಶ ಬಂದಿದ್ದು ಅದು ದೇಶದ ಒಟ್ಟಾರೆ ಫಲಿತಾಂಶ ಶೇಕಡಾ 88.78ಕ್ಕಿಂತ ಹೆಚ್ಚಾಗಿದೆ. ದೇಶದ ಒಟ್ಟಾರೆ 16 ವಲಯಗಳಲ್ಲಿ ತಿರುವನಂತಪುರದ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಪಶ್ಚಿಮ ಮತ್ತು ಪೂರ್ವ ವಲಯಗಳು ಇವೆ.

ಪ್ರಸಕ್ತ ಸಾಲಿನಲ್ಲಿ 12 ಲಕ್ಷದ 03 ಸಾವಿರದ 595 ಮಂದಿ ಪರೀಕ್ಷೆಗೆ ದಾಖಲಾತಿ ಪಡೆದುಕೊಂಡು 11 ಲಕ್ಷದ 92 ಸಾವಿರದ 961 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ವಿದೇಶದ ಶಾಲೆಗಳಲ್ಲಿ ಫಲಿತಾಂಶ ಕುಸಿತ:ಸಿಬಿಎಸ್ ಇಗೆ ಸೇರಿದ ವಿದೇಶಿ ಶಾಲೆಗಳಲ್ಲಿ ಈ ವರ್ಷ 12ನೇ ತರಗತಿ ಫಲಿತಾಂಶ ಶೇಕಡಾ 94.26ರಷ್ಟು ದಾಖಲಾಗಿದೆ. 2018-19ರಲ್ಲಿ ಅದು ಶೇಕಡಾ 95.43ರಷ್ಟಾಗಿತ್ತು. ವಿದೇಶಗಳಲ್ಲಿ ಪರೀಕ್ಷೆ ಬರೆದ 38 ಸಾವಿರದ 686 ಮಂದಿಯಲ್ಲಿ ಶೇಕಡಾ 95ರಷ್ಟು ಫಲಿತಾಂಶ ಬಂದಿದೆ.

ಸಿಬಿಎಸ್ ಇ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿರುತ್ತದೆ. ಈ ಹಿಂದೆ ಸೋಷಿಯಲ್ ಮೀಡಿಯಾಗಳಲ್ಲಿ ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಜುಲೈ 11ರಂದು ಮತ್ತು 10ನೇ ತರಗತಿ ಫಲಿತಾಂಶ ಜುಲೈ 13ರಂದು ಪ್ರಕಟಗೊಳ್ಳಲಿದೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು.

Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp