ಭಾರತದಲ್ಲಿ ಮುಂದುವರಿದ ಕೊರೋನಾ ಸೋಂಕಿತರ ಸಂಖ್ಯೆ: ಒಂದೇ ದಿನ 28,701ಹೊಸ ಪ್ರಕರಣಗಳು,500 ಮಂದಿ ಸಾವು 

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ಬೆಳಗಿನ ಹೊತ್ತಿಗೆ 28 ಸಾವಿರದ 701 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 500 ಮಂದಿ ಮೃತಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಮವಾರ ಬೆಳಗಿನ ಹೊತ್ತಿಗೆ 28 ಸಾವಿರದ 701 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು 500 ಮಂದಿ ಮೃತಪಟ್ಟಿದ್ದಾರೆ.

ಇದುವರೆಗೆ ದೇಶದಲ್ಲಿ 8 ಲಕ್ಷದ 78 ಸಾವಿರದ 254 ಪಾಸಿಟಿವ್ ಕೇಸುಗಳು ವರದಿಯಾಗಿದ್ದು ಅವರಲ್ಲಿ 3 ಲಕ್ಷದ 1 ಸಾವಿರದ 609 ಸಕ್ರಿಯ ಕೇಸುಗಳು, 5 ಲಕ್ಷದ 53 ಸಾವಿರದ 471 ಗುಣಮುಖ ಹೊಂದಿದ/ಆಸ್ಪತ್ರೆಯಿಂದ ಬಿಡುಗಡೆಯಾದ/ವಲಸೆ ಹೋದ ಕೇಸುಗಳಾಗಿವೆ. ಇದುವರೆಗೆ ದೇಶದಲ್ಲಿ ಕೊರೋನಾ ಸೋಂಕಿಗೆ 23 ಸಾವಿರದ 174 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶ ಹೇಳಿದೆ.

ಈ ಮಧ್ಯೆ, ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರಿಗೆ ಹಂತ ಹಂತವಾಗಿ ಪ್ರವಾಸಕ್ಕೆ ನಾಳೆಯಿಂದ ಮುಕ್ತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ದಕ್ಷಿಣ ಭಾರತದಲ್ಲಿ ನೋಡುವುದಾದರೆ, ಕೋವಿಡ್-19 ಕೇಸುಗಳಲ್ಲಿ ತಮಿಳು ನಾಡಿನಲ್ಲಿ ನಿನ್ನೆ 4 ಸಾವಿರದ 244 ಹೊಸ ಕೇಸುಗಳು 68 ಮಂದಿ ನಿನ್ನೆ ಮೃತಪಟ್ಟಿದ್ದಾರೆ. ಒಟ್ಟಾರೆ 1 ಲಕ್ಷದ 38 ಸಾವಿರದ 470 ಮಂದಿಗೆ ಸೋಂಕು ತಗುಲಿದೆ. ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 2,627 ಹೊಸ ಕೇಸುಗಳು ಪತ್ತೆಯಾಗಿವೆ.

ಚೆನ್ನೈ ನಗರದಲ್ಲಿ ಲಾಕ್ ಡೌನ್ ನಿಂದಾಗಿ ಕೊರೋನಾ ಸೋಂಕಿತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಅಂಕಿಅಂಶದಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com