ರಾಜಸ್ತಾನ ರಾಜಕೀಯ ಬಿಕ್ಕಟ್ಟು: ಇಂದು ನಡೆಯಲಿರುವ ಸಿಎಲ್ ಪಿ ಸಭೆಗೆ ಸಚಿನ್ ಪೈಲಟ್ ಗೈರು ಸಾಧ್ಯತೆ

ಕೊರೋನಾ ಸಂಕಷ್ಟದ ಮಧ್ಯೆ ರಾಜಸ್ತಾನ ರಾಜಕೀಯದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ, ವೈಮನಸ್ಸು ತಾರಕಕ್ಕೇರಿದೆ.
ಸಚಿನ್ ಪೈಲಟ್
ಸಚಿನ್ ಪೈಲಟ್

ಜೈಪುರ್:ಕೊರೋನಾ ಸಂಕಷ್ಟದ ಮಧ್ಯೆ ರಾಜಸ್ತಾನ ರಾಜಕೀಯದಲ್ಲಿ ತೀವ್ರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ, ವೈಮನಸ್ಸು ತಾರಕಕ್ಕೇರಿದೆ.

ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ನಿವಾಸದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಭಾಗವಹಿಸುವುದಿಲ್ಲ. ಸಚಿನ್ ಪೈಲಟ್ ಪರ 30 ಕಾಂಗ್ರೆಸ್ ಶಾಸಕರು ಮತ್ತು ಕೆಲವು ಸ್ವತಂತ್ರ ಶಾಸಕರ ಬೆಂಬಲವಿದ್ದು ಅವರೆಲ್ಲರೂ ಅಶೋಕ್ ಗೆಹ್ಲೊಟ್ ಅವರಿಗೆ ಬೆಂಬಲ ನೀಡದಿದ್ದರೆ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ.

ಈ ಮಧ್ಯೆ ಕಾಂಗ್ರೆಸ್ ನಾಯಕ ಅಜಯ್ ಮಕಾನ್, ಪಕ್ಷದ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ರಾಜ್ಯದ ಪಕ್ಷದ ಉಸ್ತುವಾರಿ ಅವಿನಾಶ್ ಪಾಂಡೆ ಜೈಪುರಕ್ಕೆ ತಲುಪಿದ್ದು ರಾಜಕೀಯ ಬಿಕ್ಕಟ್ಟನ್ನು ಶಮನ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬಿಜೆಪಿಗೆ ಸದ್ಯ ಖುಷಿಪಡುವ ವಿಚಾರವಿಲ್ಲ. ಕಾಂಗ್ರೆಸ್ ನ ಎಲ್ಲಾ ನಾಯಕರು ಒಟ್ಟಾಗಿದ್ದು ಮುಂದೆಯೂ ಒಗ್ಗಟ್ಟಿನಿಂದ ರಾಜಸ್ತಾನ ಜನರ ಸೇವೆ ಸಲ್ಲಿಸಲು ಇರುತ್ತಾರೆ ಎಂದು ಸುರ್ಜೆವಾಲಾ ಜೈಪುರ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com