ವಿಶಾಖಪಟ್ಟಣದಲ್ಲಿ ಮತ್ತೊಂದು ದುರಂತ: ಔಷಧಿ ತಯಾರಿಕಾ ಘಟಕದಲ್ಲಿ ಸ್ಫೋಟ; ಓರ್ವನಿಗೆ ಗಾಯ

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪರವಾಡ ಬಳಿ ಇರುವ ಜೆ.ಎನ್‌ ಫಾರ್ಮಾ ಸಿಟಿಯಲ್ಲಿರುವ ಔಷಧ ತಯಾರಕ ಘಟಕದಲ್ಲಿ ಸೋಮವಾರ ಬೃಹತ್‌ ಸ್ಫೋಟ ಸಂಭವಿಸಿದ್ದು, ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ.

Published: 14th July 2020 08:09 AM  |   Last Updated: 14th July 2020 08:09 AM   |  A+A-


Fire at Visakhapatnam's Pharma City

ಔಷಧ ಕಾರ್ಖಾನೆ ಸ್ಫೋಟ

Posted By : Shilpa D
Source : The New Indian Express

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪರವಾಡ ಬಳಿ ಇರುವ ಜೆ.ಎನ್‌ ಫಾರ್ಮಾ ಸಿಟಿಯಲ್ಲಿರುವ ಔಷಧ ತಯಾರಕ ಘಟಕದಲ್ಲಿ ಸೋಮವಾರ ಬೃಹತ್‌ ಸ್ಫೋಟ ಸಂಭವಿಸಿದ್ದು, ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ.

ಸ್ಫೋಟ ಸಂಭವಿಸಿದಾಗ ಘಟಕದಲ್ಲಿ  ಒಟ್ಟು ಆರು ಕಾರ್ಮಿಕರಿದ್ದು ಉಳಿದ ಐವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಕೆಲ ತಿಂಗಳ ಹಿಂದೆ ಎಲ್‌ಜಿ ಪಾಲಿಮರ್ಸ್ ಕೈಗಾರಿಕೆಯಿಂದ  ವಿಷಾನಿಲ ಸೋರಿಕೆಯಾಗಿ ಹಲವರು ಮೃತಪಟ್ಟ ಘಟನೆ ಹಸಿರಾಗಿರುವಾಗಲೇ ನಡದಿರುವ ಘಟನೆಯು ಪರವಾಡಾ ಪ್ರದೇಶದ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.

ಕೈಗಾರಿಕೆಯಲ್ಲಿ ಮೊದಲು ಸ್ಫೋಟ ಸಂಭವಿಸಿದೆ,  ಸುಮಾರು 15 ಬಾರಿ ಸ್ಫೋಟದ ಸದ್ದು ಕೇಳಿಸಿದೆ. ಸಾಗರ ತ್ಯಾಜ್ಯ ನಿರ್ವಹಣೆ ಮಾಡಲಾಗುವ ರಾಮ್‌ಕಿ ದ್ರಾವಕಗಳ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರಿ ಪ್ರಮಾಣದ ಬೆಂಕಿಯನ್ನು ನಂದಿಸಲು ಮತ್ತು ಸುತ್ತಮುತ್ತಲಿನ ಇತರ ಔಷಧ ಕಾರ್ಖಾನೆಗಳಿಗೆ ಬೆಂಕಿ ಹರಡದಂತೆ ತಡೆಯಲು 10 ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ ವಿನಯ್ ಚಂದ್ ತಿಳಿಸಿದ್ದಾರೆ.

ಪೊಲೀಸರು, ಅಗ್ನಿಶಾಮಕ ಸೇವೆಗಳು ಮತ್ತು ಆರೋಗ್ಯ ಅಧಿಕಾರಿಗಳು ಕಟ್ಟೆಚ್ಚರದಿಂದ ಇರುವಂತೆ ಮತ್ತು ಯಾವುದೇ ಪ್ರಾಣಹಾನಿ ಸಂಭವಿಸದಂತೆ ನೋಡಿಕೊಳ್ಳುವಂತೆ ವಿಶಾಖಪಟ್ಟಣ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಮೀನಾ ಹೇಳಿದ್ದಾರೆ.
 

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp