"ಟಿ.ಸಿ ಕೇಳಬೇಡಿ, ಪ್ರವೇಶ ನೀಡಿ", ವಲಸೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕೇಂದ್ರದ ಮಾರ್ಗಸೂಚಿ ಬಿಡುಗಡೆ

ವಲಸಿಗ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಕೋವಿಡ್-19 ಹಿನ್ನೆಲೆಯಲ್ಲಿ ಊರುಗಳಿಗೆ ವಾಪಸ್ಸಾಗಿರುವ ವಲಸಿಗ ಕಾರ್ಮಿಕರ ಮಕ್ಕಳ ಹೆಸರುಗಳನ್ನು ಶಾಲೆಗಳಿಂದ ತೆಗೆದುಹಾಕಬಾರದು ಎಂದು ಸ್ಪಷ್ಟ ಸೂಚನೆ ನೀಡಿದೆ.
ಟಿ.ಸಿ ಕೇಳಬೇಡಿ, ಪ್ರವೇಶ ನೀಡಿ, ವಲಸೆ ಕಾರ್ಮಿಕರ ಮಕ್ಕಳಿಗೆ ಕೇಂದ್ರದ ಮಾರ್ಗಸೂಚಿ ಬಿಡುಗಡೆ
ಟಿ.ಸಿ ಕೇಳಬೇಡಿ, ಪ್ರವೇಶ ನೀಡಿ, ವಲಸೆ ಕಾರ್ಮಿಕರ ಮಕ್ಕಳಿಗೆ ಕೇಂದ್ರದ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ವಲಸಿಗ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಕೋವಿಡ್-19 ಹಿನ್ನೆಲೆಯಲ್ಲಿ ಊರುಗಳಿಗೆ ವಾಪಸ್ಸಾಗಿರುವ ವಲಸಿಗ ಕಾರ್ಮಿಕರ ಮಕ್ಕಳ ಹೆಸರುಗಳನ್ನು ಶಾಲೆಗಳಿಂದ ತೆಗೆದುಹಾಕಬಾರದು ಎಂದು ಸ್ಪಷ್ಟ ಸೂಚನೆ ನೀಡಿದೆ.

ಸ್ಥಳಿಯ ಪ್ರದೇಶಗಳನ್ನು ಬಿಟ್ಟು ಊರಿಗೆ ತೆರಳಿರುವ ವಿದ್ಯಾರ್ಥಿಗಳ ಡಾಟಾಬೇಸ್ ನ್ನು ತಯಾರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ತಮ್ಮ ಊರುಗಳಿಗೆ ತೆರಳಿರುವ ಮಕ್ಕಳನ್ನು ವಲಸಿಗರು ಅಥವಾ ತಾತ್ಕಾಲಿಕವಾಗಿ ಲಭ್ಯವಾಗುತ್ತಿಲ್ಲ ಎಂದು ನಮೂದಿಸಲು ಹೆಚ್ ಆರ್ ಡಿ ಸಚಿವಾಲಯ ಮಾರ್ಗಸೂಚಿಯಲ್ಲಿ ಸ್ಪಷ್ಟ ನಿರ್ದೇಶನ ನೀಡಿದೆ.

ಇದೇ ವೇಳೆ ಐಡಿ ದಾಖಲೆಯನ್ನು ಹೊರತುಪಡಿಸಿ, ಟಿಸಿ(ವರ್ಗಾವಣೆ ಪ್ರಮಾಣಪತ್ರ) ಬೇರೆ ಯಾವುದೇ ದಾಖಲೆಗಳನ್ನೂ ಕೇಳದೇ ಊರಿಗೆ ವಾಪಸ್ಸಾಗಿರುವ ಯಾವುದೇ ವಿದ್ಯಾರ್ಥಿಗಳಿಗೆ ಆ ಊರಿನ ಶಾಲೆಗಳಲ್ಲಿ ಪ್ರವೇಶ, ದಾಖಲಾತಿಗೆ ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com