'ಅಪ್ರತಿಮ ಗ್ರಾಮ'ವಾಗಿ ಕಂಗೊಳಿಸಲಿದೆ ಭಾರತ-ಚೀನಾ ಗಡಿಯ ಉತ್ತರಾಖಂಡ್ ನ ಕೊನೆಯ ಗ್ರಾಮ 'ಮನ'

ಉತ್ತರಾಖಂಡ್ ನ ಕೊನೆಯ ಮತ್ತು ಚಮೊಲಿ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿರುವ ಮನ ಎಂಬ ಗ್ರಾಮ ಬದರಿನಾಥದಲ್ಲಿ ಖ್ಯಾತ ಪ್ರವಾಸಿ ಸ್ಥಳ. ಈ ಗ್ರಾಮವನ್ನು ಸಾಂಪ್ರದಾಯಿಕ ವಿಶೇಷ ಹೆಗ್ಗುರುತಿನ ಸ್ಥಳವನ್ನಾಗಿ ಅಭಿವೃದ್ದಿಪಡಿಸಲು ಸರ್ಕಾರ ಮುಂದಾಗಿದೆ.
ಮನ ಗ್ರಾಮದಲ್ಲಿನ ಟೀ ಅಂಗಡಿ
ಮನ ಗ್ರಾಮದಲ್ಲಿನ ಟೀ ಅಂಗಡಿ

ಡೆಹ್ರಾಡೂನ್: ಉತ್ತರಾಖಂಡ್ ನ ಕೊನೆಯ ಮತ್ತು ಚಮೊಲಿ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿರುವ ಮನ ಎಂಬ ಗ್ರಾಮ ಬದರಿನಾಥದಲ್ಲಿ ಖ್ಯಾತ ಪ್ರವಾಸಿ ಸ್ಥಳ. ಈ ಗ್ರಾಮವನ್ನು ಸಾಂಪ್ರದಾಯಿಕ ವಿಶೇಷ ಹೆಗ್ಗುರುತಿನ ಸ್ಥಳವನ್ನಾಗಿ ಅಭಿವೃದ್ದಿಪಡಿಸಲು ಸರ್ಕಾರ ಮುಂದಾಗಿದೆ.

ಈ ಕಾರ್ಯಕ್ಕೆ ಈಗಾಗಲೇ 7 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು ಪ್ರತಿವರ್ಷವೂ ಸಾವಿರಾರು ಜನರನ್ನು ಆಕರ್ಷಿಸುವ ಈ ಗ್ರಾಮವನ್ನು ಇನ್ನಷ್ಟು ವಿಶೇಷವಾಗಿ ಕಾಣುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಚಮೊಲಿ ಜಿಲ್ಲೆಯ ಮುಖ್ಯ ಅಭಿವೃದ್ಧಿ ಅಧಿಕಾರಿ ಹಂಸದತ್ ಪಾಂಡೆ ತಿಳಿಸಿದ್ದಾರೆ.

ಸಮುದ್ರ ಮಟ್ಟದಿಂದ 10 ಸಾವಿರದ 500 ಅಡಿ ಎತ್ತರದಲ್ಲಿರುವ ಈ ಗ್ರಾಮ ಭಾರತ-ಚೀನಾ ಗಡಿಯಲ್ಲಿ ಸುಮಾರು 24 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ.ಸಾಂಪ್ರದಾಯಿಕ ಪರ್ವತ ವಾಸ್ತುಶಿಲ್ಪದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.ಹಳೆಯ ಕಾಲದ ರಸ್ತೆಗಳು, ಸಭಾಂಗಣ, ಪ್ರವೇಶ ದ್ವಾರದಂತಹ ನಿರ್ಮಾಣ ಯೋಜನೆಗಳನ್ನು ಒಳಗೊಂಡಿರುತ್ತದೆ.

ಪ್ರವಾಸಿಗರಿಗೆ ಇಲ್ಲಿ ಪ್ರಯಾಣಕ್ಕೆ ಅನುಕೂಲವಾಗಲು ಇ-ರಿಕ್ಷಾಗಳು ಅಥವಾ ಹಗುರ ಪರಿಸರಸ್ನೇಹಿ ವಾಹನಗಳನ್ನು ಏರ್ಪಡಿಸಲಾಗುತ್ತದೆ. ಇಲ್ಲಿ ಭದ್ರತೆ ಮತ್ತು ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಪ್ರವಾಸಿಗರ ವಾಹನಗಳನ್ನು ಒಳಗೆ ಬಿಡುವುದಿಲ್ಲ. ಈ ಗ್ರಾಮ ಈಗಾಗಲೇ ಸಾಕಷ್ಟು ಪ್ರಸಿದ್ಧಿಯಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು. ಆರ್ಥಿಕತೆ ವೃದ್ಧಿಗೂ ಅನುಕೂಲವಾಗುತ್ತದೆ ಎಂದು ಗ್ರಾಮದ ನಿವಾಸಿ ಭಗವತ್ ಮೆಹ್ತಾ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com