ನನ್ನ ನಿಷ್ಠೆ ಕಾಂಗ್ರೆಸ್ ಸಿದ್ಧಾಂತಕ್ಕೆ, ಯಾವುದೇ ವ್ಯಕ್ತಿ, ಕುಟುಂಬಕ್ಕೆ ಅಲ್ಲ: ಗಾಂಧಿ ಕುಟುಂಬದ ವಿರುದ್ಧ ಸಂಜಯ್ ಜಾ ವಾಗ್ದಾಳಿ

ನನ್ನ ನಿಷ್ಠೆ ಕಾಂಗ್ರೆಸ್ ಸಿದ್ಧಾಂತಕ್ಕೆ, ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಅಲ್ಲ ಎಂದು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಾಂಗ್ರೆಸ್ ನಿಂದ ಉಚ್ಟಾಟನೆಗೊಂಡಿರುವ ಸಂಜಯ್ ಜಾ ಅವರು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಜಯ್ ಝಾ
ಸಂಜಯ್ ಝಾ

ಮುಂಬೈ: ನನ್ನ ನಿಷ್ಠೆ ಕಾಂಗ್ರೆಸ್ ಸಿದ್ಧಾಂತಕ್ಕೆ, ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಅಲ್ಲ ಎಂದು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಾಂಗ್ರೆಸ್ ನಿಂದ ಉಚ್ಟಾಟನೆಗೊಂಡಿರುವ ಸಂಜಯ್ ಜಾ ಅವರು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ಬಂಡಾಯವೆದ್ದು ಉಪ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಂಡಿರುವ ಸಚಿನ್ ಪೈಲಟ್ ಶ್ರಮವನ್ನು ಶ್ಲಾಘಿಸಿದ್ದ ಸಂಜಯ್ ಜಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಾಗೂ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಕಾಂಗ್ರೆಸ್ ನಿಂದ ಉಚ್ಚಾಟನೆಗೊಂಡ ನಂತರ ಗಾಂಧಿ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಉದ್ಯಮಿ ಹಾಗೂ ರಾಜಕಾರಣಿ ಸಂಜಯ್ ಜಾ ಅವರು, ಯುದ್ಧ ಈಗ ಆರಂಭವಾಗಿದೆ ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಸಿದ್ಧಾಂತಕ್ಕೆ ನಾನು ನಿಷ್ಠನಾಗಿದ್ದೇನೆ. ನನ್ನ ನಿಷ್ಠೆಯು ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಅಲ್ಲ. ನಾನು ಗಾಂಧಿ-ನೆಹರೂ ಆದರ್ಶವಾದಿಯಾಗಿ ಉಳಿದಿದ್ದೇನೆ.ನನ್ನ ಪಕ್ಷದ ಪುನರುತ್ಥಾನಕ್ಕೆ ಮೂಲಭೂತವಾದ ವಿಷಯಗಳನ್ನು ಪ್ರಸ್ತಾಪಿಸುವುದನ್ನು ನಾನು ಮುಂದುವರಿಸುತ್ತೇನೆ. ಯುದ್ಧ ಈಗ ಪ್ರಾರಂಭವಾಗಿದೆ" ಎಂದು ಸಂಜಯ್ ಜಾ ಇಂದು ಟ್ವೀಟ್ ಮಾಡಿದ್ದಾರೆ.

ಇದಕ್ಕು ಮುನ್ನ "ಐದು ವರ್ಷಗಳ ಕಾಲ ಅಂದರೆ 2013-18ರ ನಡುವೆ ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ರಕ್ತ, ಕಣ್ಣೀರು, ಶ್ರಮ ಮತ್ತು ಬೆವರು ನೀಡಿದ್ದಾರೆ. ಕಾಂಗ್ರೆಸ್ 21 ಸ್ಥಾನಗಳಿಂದ 100 ಕ್ಕೆ ಮರಳಿತು. ನಾವು ಅವರ ಕಾರ್ಯಕ್ಷಮತೆಗೆ ಬೋನಸ್ ನೀಡಿದ್ದೇವೆ. ನಾವು ತುಂಬಾ ಅರ್ಹರು. ನಾವು ತುಂಬಾ ಪಾರದರ್ಶಕವಾಗಿದ್ದೇವೆ. " ಎಂದು ಅಸಮಾಧಾನದಿಂದ ಸಂಜಯ್ ಜಾ ಟ್ವೀಟ್ ಮಾಡಿದ್ದರು.

ಈ ವರ್ಷದ ಜೂನ್‌ನಲ್ಲಿ, ಜಾ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‌ಸಿ)ಯ ಅಧಿಕೃತ ವಕ್ತಾರ ಸ್ಥಾನದಿಂದಲೂ ತೆಗೆದುಹಾಕಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com