ಕುಖ್ಯಾತ ದಂತಚೋರ ವೀರಪ್ಪನ್ ಪುತ್ರಿಗೆ ಉನ್ನತ ಹುದ್ದೆ ನೀಡಿದ ಬಿಜೆಪಿ!

ಕುಖ್ಯಾತ ದಂತಚೋರ, ಚಂದನ ಕಳ್ಳಸಾಗಣೆದಾರ ವೀರಪ್ಪನ್ ಅವರ ಪುತ್ರಿ ವಿದ್ಯಾ ರಾಣಿ, ದಿವಂಗತ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಸಂಬಂಧಿಗಳಿಗೆ ತಮಿಳುನಾಡಿನ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ವಿವಿಧ ವಿಭಾಗಗಳಲ್ಲಿ ಮುಖ್ಯ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.

Published: 16th July 2020 11:51 AM  |   Last Updated: 16th July 2020 12:19 PM   |  A+A-


Posted By : Raghavendra Adiga
Source : Online Desk

ಚೆನ್ನೈ: ಕುಖ್ಯಾತ ದಂತಚೋರ, ಚಂದನ ಕಳ್ಳಸಾಗಣೆದಾರ ವೀರಪ್ಪನ್ ಅವರ ಪುತ್ರಿ ವಿದ್ಯಾ ರಾಣಿ, ದಿವಂಗತ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಸಂಬಂಧಿಗಳಿಗೆ ತಮಿಳುನಾಡಿನ ರಾಜ್ಯ ಕಾರ್ಯಕಾರಿ ಸಮಿತಿ ಮತ್ತು ವಿವಿಧ ವಿಭಾಗಗಳಲ್ಲಿ ಮುಖ್ಯ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ, ಕಾರ್ಯಕಾರಿ ಸಮಿತಿ ಮತ್ತು ರಾಜ್ಯದ ವಿವಿಧ ವಿಭಾಗಗಳಲ್ಲಿ ಬುಧವಾರ ಅನೇಕ ಸಿನಿಮಾ ಹಿನ್ನೆಲೆ ವ್ಯಕ್ತಿಗಳನ್ನು ನೇಮಿಸಲಾಗಿದೆ. ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ಬಗ್ಗೆ ವಿವರಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಪಕ್ಷ ಸೇರಿದ್ದವೀರಪ್ಪನ್ ಪುತ್ರಿ ವಿದ್ಯಾರಾಣಿಯವರನ್ನು ಪಕ್ಷದ ಯುವ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ವರ್ಷದ ಮಾರ್ಚ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಲ್.ಮುರುಗನ್ ಅವರು ಪಕ್ಷವನ್ನು ರಾಜ್ಯದಲ್ಲಿ ಹೆಚ್ಚು ವಿಸ್ತರಿಸುವ ಬಗ್ಗೆ ಯೋಚಿಸಿದ್ದು ಈ ನಿಟ್ಟಿನಲ್ಲಿ ಈ ನೇಮಕಾತಿಗಳು ನಡೆದಿದೆ ಎಂದು ತಿಳಿದುಬಂದಿದೆ.

ಅದೇ ಸಮಯದಲ್ಲಿ, 2017 ರಲ್ಲಿ ಬಿಜೆಪಿಗೆ ಸೇರಿದ ಎಐಎಡಿಎಂಕೆ ಸಂಸ್ಥಾಪಕ ರಾಮಚಂದ್ರನ್ (ಎಂಜಿಆರ್)ದತ್ತು ಪುತ್ರಿ ಗೀತಾ ಮತ್ತು ಎಂಸಿ ಚಕ್ರಪಾಣಿ(ರಾಮಚಂದ್ರನ್ ಅವರ ಸಹೋದರ) ಅವರ ಮೊಮ್ಮಗ ಆರ್.ಪ್ರವೀಣ್ ಮತ್ತು ನಟಿ ರಾಧಾ ರವಿ ಅವರನ್ನು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ.

2004 ರಲ್ಲಿ ಕುಖ್ಯಾತ ಚಂದನ ಕಳ್ಳಸಾಗಣೆದಾರ, ದಂತಚೋರನಾಗಿದ್ದ ವೀರಪ್ಪನ್ ಪೊಲೀಸ್ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದ. ವೀರಪ್ಪನ್ 2000 ರಲ್ಲಿ ಕನ್ನಡ ನಟ ರಾಜ್‌ಕುಮಾರ್ ಮತ್ತು ಕರ್ನಾಟಕದ ಮಾಜಿ ಸಚಿವ ಎಚ್.ನಾಗಪ್ಪ ಅವರನ್ನು ಅಪಹರಿಸಿದ್ದ. ಒಟ್ಟು೧೦೮ ದಿನಗಳ ನಂತರ ವರನಟ ಡಾ. ರಾಜ್ ಬಿಡುಗಡೆಯಾಗಿತ್ತು.

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp