1,048 ಮಂದಿ ಮೇಲೆ 'ಔಷಧಿ ಪ್ರಯೋಗ' ನಡೆಸಿದ ಝೈಡಸ್ ಕ್ಯಾಡಿಲಾ

213 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಔಷಧಿ ಕಂಡು ಹಿಡಿಯುವ ಪ್ರಕ್ರಿಯೆ ಭಾರತದಲ್ಲಿ ನಿರ್ಣಾಯಕ ಹಂತ ತಲುಪಿದ್ದು, ಕೊರೋನಾ ಸೋಂಕಿತರ ಮೇಲೆ ಔಷಧಿ ಪ್ರಯೋಗ ಆರಂಭಿಸಿರುವುದಾಗಿ ಝೈಡಸ್ ಕ್ಯಾಡಿಲಾ ಸಂಸ್ಥೆ ಘೋಷಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 213 ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಔಷಧಿ ಕಂಡು ಹಿಡಿಯುವ ಪ್ರಕ್ರಿಯೆ ಭಾರತದಲ್ಲಿ ನಿರ್ಣಾಯಕ ಹಂತ ತಲುಪಿದ್ದು, ಕೊರೋನಾ ಸೋಂಕಿತರ ಮೇಲೆ ಔಷಧಿ ಪ್ರಯೋಗ ಆರಂಭಿಸಿರುವುದಾಗಿ ಝೈಡಸ್ ಕ್ಯಾಡಿಲಾ ಸಂಸ್ಥೆ ಘೋಷಿಸಿದೆ.

ಕೊರೊನಾ ಸೋಂಕಿಗೆ ಝೋಕೊವ್-ಡಿ ಎಂಬ ಔಷಧಿ ಕಂಡು ಹಿಡಿದಿದ್ದು, ಸೋಂಕಿತರ ಮೇಲೆ ಔಷಧಿ ಪ್ರಯೋಗ ಆರಂಭಿಸಲಾಗಿದೆ ಎಂದು ಝೈಡಸ್ ಕ್ಯಾಡಿಲಾ ಸಂಸ್ಥೆ ಹೇಳಿಕೊಂಡಿದೆ. ಕೊರೊನಾ ಪೀಡಿತರ ಮೇಲೆ ಔಷಧಿ ಪ್ರಯೋಗದ ಅನುಮತಿ ಪಡೆದಿರುವ ಈ ಸಂಸ್ಥೆ, ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿಗೆ ಮದ್ದು ಕಂಡುಹಿಡಿಯುವ ವಿಶ್ವಾಸದಲ್ಲಿದೆ. ಸೋಂಕಿತರ ಮೇಲಿನ ಮೊದಲ ಹಾಗೂ ಎರಡನೇ ಹಂತದ ಪ್ರಯೋಗ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಔಷಧಿ ಈ ನಿಟ್ಟಿನಲ್ಲಿ ಯಶ ಸಾಧಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆಯ ಮೂಲಗಳು ತಿಳಿಸಿರುವಂತೆ ದೇಶದಲ್ಲಿ ಝೈಡಸ್ ಕ್ಯಾಡಿಲಾ ಸಂಸ್ಥೆ, ಕೊರೋನಾ ಔಷಧದ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ನಡೆಸಲಾಗುತ್ತಿದೆ. ಇದಕ್ಕಾಗಿ ದೇಶದಲ್ಲಿ 1,048 ಸ್ವಯಂ ಕಾರ್ಯಕರ್ತರ ಮೇಲೆ 'ಔಷಧಿ ಪ್ರಯೋಗ' ನಡೆಸಲಾಗಿದೆ. ಈ ಪ್ರಯೋಗ ನಡೆಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತಿಂಗಳ ಹಿಂದೆಯೇ ಅನುಮತಿ ನೀಡಿತ್ತು. 

ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ- ಇಂಡಿಯಾ (ಸಿಟಿಆರ್ ಐ) ಇನ್ ಕ್ಲೂಷನ್ ಮತ್ತು ಎಕ್ಸ್ ಕ್ಲೂಷನ್ ಎಂಬ 2 ಹಂತದಲ್ಲಿ ನಡೆಯಲಿದೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com