ಕೋವಿಡ್ ಲಸಿಕೆ: ಮಾನವ ಪ್ರಯೋಗವನ್ನು ಆರಂಭಿಸಿದ ಭಾರತ!

ಭಾರತ್ ಬಯೋಟಿಕ್ ಕಂಡುಹಿಡಿದಿರುವ ಕೋವಿಡ್-19 ಲಸಿಕೆ 'ಕೋವಾಕ್ಸಿನ್'ನ ಮಾನವ ಪ್ರಯೋಗವನ್ನು ರೊಹ್ಟಕ್ ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಪ್ರಾರಂಭಿಸಲಾಯಿತು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜಿ ಟ್ವೀಟ್ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ್ ಬಯೋಟಿಕ್ ಕಂಡುಹಿಡಿದಿರುವ ಕೋವಿಡ್-19 ಲಸಿಕೆ 'ಕೋವಾಕ್ಸಿನ್'ನ ಮಾನವ ಪ್ರಯೋಗವನ್ನು ರೊಹ್ಟಕ್ ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಪ್ರಾರಂಭಿಸಲಾಯಿತು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜಿ ಟ್ವೀಟ್ ಮಾಡಿದ್ದಾರೆ.

ಮೂರು ವಿಷಯಗಳು ಇಂದು ದಾಖಲಾಗಿವೆ. ಲಸಿಕೆ ಅತ್ಯುತ್ತಮವಾಗಿದ್ದು ಎಲ್ಲರೂ ಸಹಿಸಿಕೊಂಡಿದ್ದಾರೆ.ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಹರಿಯಾಣ ಗೃಹ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವರೂ ಆಗಿರುವ ಅನಿಲ್ ವಿಜಿ ತಿಳಿಸಿದ್ದಾರೆ.

ಕೊರೋನಾ ಲಸಿಕೆ ಕೋವಾಕ್ಸಿನ್ ನ ಕ್ಲಿನಿಕಲ್ ಪ್ರಯೋಗ ಆರಂಭಕ್ಕೆ ಇತ್ತೀಚಿಗೆ ದೇಶದ ಔಷಧ ನಿಯಂತ್ರಕರಿಂದ ಭಾರತ್ ಬಯೋಟೆಕ್ ಅನುಮೋದನೆ ಪಡೆದುಕೊಂಡಿತ್ತು.

ದೇಶದಲ್ಲಿ ಏಳು ಕೊರೋನಾ ವಿರುದ್ಧದ ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತಗಳಿದ್ದು, ಮಾನವ ಪ್ರಯೋಗಕ್ಕಾಗಿ ಎರಡು ಲಸಿಕೆಗಳು ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದುಕೊಂಡಿವೆ.

ಈ ತಿಂಗಳ ಆರಂಭದಲ್ಲಿ ಜಿಡಾಸ್ ಕಂಪನಿ, ಕೋವಿಡ್ -19 ಲಸಿಕೆ ಮಾನವ ಮೇಲಿನ ಪ್ರಯೋಗಕ್ಕಾಗಿ ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದುಕೊಂಡಿರುವುದಾಗಿ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com