ಫೇಸ್‌ಬುಕ್ ಪರಿಚಯ: ಪಾಕಿಸ್ತಾನಿ ಗೆಳತಿಗಾಗಿ ಗಡಿ ದಾಟಲು ಮುಂದಾದ ಭೂಪನ ಬಂಧನ!

ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹ ಬೆಳೆಸಿಕೊಂಡಿದ್ದ ತನ್ನ ಪಾಕಿಸ್ತಾನಿ ಗೆಳತಿಯ ಭೇಟಿಗಾಗಿ ಗುಜರಾತ್‌ನ ಕಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸುತ್ತಿದ್ದ ಮಹಾರಾಷ್ಟ್ರದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಗಡಿ ಭದ್ರತಾ ಪಡೆ ಬಂಧಿಸಿದೆ.

Published: 17th July 2020 03:39 PM  |   Last Updated: 17th July 2020 03:39 PM   |  A+A-


BSF

ಬಿಎಸ್ಎಫ್

Posted By : Vishwanath S
Source : UNI

ಭುಜ್: ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹ ಬೆಳೆಸಿಕೊಂಡಿದ್ದ ತನ್ನ ಪಾಕಿಸ್ತಾನಿ ಗೆಳತಿಯ ಭೇಟಿಗಾಗಿ ಗುಜರಾತ್‌ನ ಕಚ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸುತ್ತಿದ್ದ ಮಹಾರಾಷ್ಟ್ರದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಗಡಿ ಭದ್ರತಾ ಪಡೆ ಬಂಧಿಸಿದೆ.

ನೆರೆಯ ಮಹಾರಾಷ್ಟ್ರದ ಉಸ್ಮಾನಾಬಾದ್ ನಗರದ ನಿವಾಸಿ ಜೆಶಾನುದ್ದೀನ್ ಎಸ್ ಸಿದ್ದಿಕಿ ಈ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದರು ಎಂದು ಪೊಲೀಸ್ ಮೂಲಗಳು ಶುಕ್ರವಾರ ತಿಳಿಸಿವೆ. ಈ ಸಂಬಂಧ ಅವರ ಕುಟುಂಬ ಸದಸ್ಯರು ಕೂಡ ಪೊಲೀಸರಿಗೆ ದೂರು ನೀಡಿದ್ದರು. ಕಚ್‌ನ ಖಬ್ಡಾ ಪ್ರದೇಶದ ಕಂಧ್ವಾಂಧ್‌ನ ಗಡಿಯ ಸಮೀಪದಿಂದ ಬಿಎಸ್‌ಎಫ್ ಅವರನ್ನು ಗುರುವಾರ ಬಂಧಿಸಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆತ ಪಾಕಿಸ್ತಾನದ ಹುಡುಗಿಯನ್ನು ಭೇಟಿಯಾಗಲು ಒಂದು ವಾರದ ಹಿಂದೆ ಮೋಟಾರ್ ಸೈಕಲ್‌ನಲ್ಲಿ ತನ್ನ ಮನೆಯಿಂದ ಹೊರಟಿದ್ದ. ಸಾಮಾಜಿಕ ಮಾಧ್ಯಮಗಳ ಮೂಲಕ ಆಕೆಯೊಂದಿ ಸ್ನೇಹ ಬೆಳೆಸಿ ದೂರವಾಣಿಯಲ್ಲಿ ಮಾತನಾಡುತ್ತಿದ್ದನು. ಕಳೆದ ಕೆಲವು ದಿನಗಳಿಂದ ಅವರು ಕಚ್ ಜಿಲ್ಲೆಯ ಗಡಿಯಲ್ಲಿರುವ ಖಬ್ಡಾ ತಾಲ್ಲೂಕಿನಲ್ಲಿ ಸುತ್ತಾಡುತ್ತಿದ್ದರು. ಕೆಲವು ಸ್ಥಳೀಯರಿಂದ ಪಾಕಿಸ್ತಾನ ಗಡಿಗೆ ಹೋಗುವ ಮಾರ್ಗದ ಬಗ್ಗೆಯೂ ಅವರು ವಿಚಾರಿಸಿದ್ದರು ಎನ್ನಲಾಗಿದೆ. 

ಹುಡುಗಿಯನ್ನು ಭೇಟಿಯಾಗದೆ ಹತಾಶನಾಗಿದ್ದ ಅವನ ಮೋಟಾರ್ ಸೈಕಲ್ ಕಚ್ ನ ರಾನ್ ಪ್ರದೇಶದಲ್ಲಿ ಮಿಡ್ವೇನಲ್ಲಿ ಮಳೆ ನೀರಿನಿಂದ ಉಂಟಾದ ಮಣ್ಣಿನಲ್ಲಿ ಸಿಲುಕಿಕೊಂಡಿತ್ತು. ಹೀಗಾಗಿ ಆತ ಕಾಲ್ನಡಿಗೆಯಲ್ಲಿ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾಗ ಅವರ ಪಾದದ ಗುರುತುಗಳನ್ನು ಪತ್ತೆಹಚ್ಚುವ ಮೂಲಕ ಬಿಎಸ್ಎಫ್ ಗೆ ಸಿಕ್ಕಿಬಿದ್ದಿದ್ದಾರೆ.

ಈತ ಪಾಕಿಸ್ತಾನದ ಗುಪ್ತಚರ ಒಳಗೊಳ್ಳುವಿಕೆ ಮತ್ತು ಹನಿಟ್ರಾಪ್ ಗೆ ಸಿಲುಕಿರುವ ಸಾಧ್ಯತೆಗಳ ಬಗ್ಗೆಯೂ ಸಹ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp