ಕೊರೋನಾ ಗೆದ್ದು ಬಂದ ವೃದ್ದ ದಂಪತಿಗೆ ಗ್ರಾಮಸ್ಥರ ಭವ್ಯ ಸ್ವಾಗತ 

85 ವರ್ಷದ ಕ್ಯಾನ್ಸರ್ ಪೀಡಿತ ವೃದ್ದ ಹಾಗೂ  ಆತನ 78 ವರ್ಷದ ಪತ್ನಿ ಕೊರೋನಾ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೇಂದ್ರಪಾರ ಪ್ರಾಂತ್ಯದಲ್ಲಿ ಕೋವಿಡ್ ವಿರುದ್ಧ ಗೆದ್ದ ಅತ್ಯಂತ ಹಿರಿಯ ದಂಪತಿಗಳೆನಿಸಿದ್ದಾರೆ.
ಕೊರೋನಾ ವಿರುದ್ಧ ಗೆದ್ದ ದಂಪತಿ
ಕೊರೋನಾ ವಿರುದ್ಧ ಗೆದ್ದ ದಂಪತಿ

ಕೆಂದ್ರಪಾರ: 85 ವರ್ಷದ ಕ್ಯಾನ್ಸರ್ ಪೀಡಿತ ವೃದ್ದ ಹಾಗೂ  ಆತನ 78 ವರ್ಷದ ಪತ್ನಿ ಕೊರೋನಾ ಸೋಂಕಿನಿಂದ ಗುಣಮುಖರಾಗುವ ಮೂಲಕ ಕೇಂದ್ರಪಾರ ಪ್ರಾಂತ್ಯದಲ್ಲಿ ಕೋವಿಡ್ ವಿರುದ್ಧ ಗೆದ್ದ ಅತ್ಯಂತ ಹಿರಿಯ ದಂಪತಿಗಳೆನಿಸಿದ್ದಾರೆ.

ಕಟಕ್‌ನ ಅಶ್ವಿನಿ ಕಾಲೇಜಿನ ವೈದ್ಯವೃಂದ ಈ ಹಿರಿಯ ದಂಪತಿಗಳು ಕೋವಿಡ್ ನಿಂದ ಚೇತರಿಸಿಕೊಂಡ ನಂತರ ಅವರಿಗೆ ಶುಭ ಹಾರೈಸಿದೆ. ಅಲ್ಲದೆ ಈ ಹಿರಿಯ ದಂಪತಿಗಳನ್ನು ಮನೆಗೆ ಕಳಿಸಿಕೊಡುವ ಕ್ಷಣ ಭಾವನಾತ್ಮಕವಾಗಿತ್ತು ಎಂದು ಕೇಂದ್ರಪಾರ ಜಿಲ್ಲಾ ಕೇಂದ್ರ ಆಸ್ಪತ್ರೆಯ ಉಪ ವ್ಯವಸ್ಥಾಪಕ ಕೃಷ್ಣ ಚಂದ್ರ ಲುಹಾ  ಹೇಳಿದ್ದಾರೆ.

ಸುರೇಂದ್ರ ಮತ್ತು ಅವರ ಪತ್ನಿ ಸಾಬಿತ್ರಿ  ಕೇಂದ್ರಪರಾ ಪಟ್ಟಣದ ಹೊರವಲಯದಲ್ಲಿರುವ ಬಾಗಡಾ ಪ್ರದೇಶದ ನಿವಾಸಿಗಳಾಗಿದ್ದು ಸತತ ಎರಡು ಪರೀಕ್ಷೆಗಳಲ್ಲಿ ಅವರ ಪರೀಕ್ಷಾ ವರದಿಗಳು ನೆಗೆಟಿವ್ ಬಂದಿದ್ದವು. ಆಗ ಅವರನ್ನು ಶುಕ್ರವಾರ ಕ್ವಾರಂಟೈನ್  ಕೇಂದ್ರದಿಂದ ಬಿಡುಗಡೆ ಮಾಡಲಾಯಿತು. ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸುಚೇಂದ್ರ ಆಚಾರ್ಯಹರಿಹರ್  ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುದ್ದಾರೆ. ಸಾಬಿತ್ರಿ ಆಸ್ಪತ್ರೆಯಲ್ಲಿಅವರಿಗೆ ನೆರವಾಗುತ್ತಿದ್ದರು. ಜೂನ್ 29 ರಂದು ಇಬ್ಬರೂ ಕೋವಿಡ್ ಗೆ ಧನಾತ್ಮಕ ವರದಿ ಪಡೆದಿದ್ದರು. ಆ ನಂತರ ಅವರನ್ನು ಅಶ್ವಿನಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.

10 ದಿನಗಳ ಸುದೀರ್ಘಹೋರಾಟದ ನಂತರ ಇಬ್ಬರೂ ಚೇತರಿಸಿಕೊಂಡರು, ಇದರೊಡನೆ ಜಿಲ್ಲೆಯಲ್ಲಿ ಕೊರೋನಾದ ವಿರುದ್ಧ ಹೋರಾಡುತ್ತಿರುವವರಲ್ಲಿ ಭರವಸೆ ಮೂಡಿಸಿದ್ದಾರೆ. ದಂಪತಿಗಳು ಹಳ್ಳಿಯ ಕ್ವಾರಂಟೈನ್  ಕೇಂದ್ರದಲ್ಲಿ ಒಂದು ವಾರ ಕಳೆದರು ಮತ್ತು ಶುಕ್ರವಾರ ತಮ್ಮ ಮನೆಗೆ ಮರಳೀದ್ದಾರೆ.  ಅವರನ್ನು ಗ್ರಾಮಸ್ಥರು ಮತ್ತು ಸಂಬಂಧಿಕರು ಸಂಭ್ರಮದ ಸ್ವಾಗತ ಮಾಡಿದ್ದಾರೆ. ಆದರೆ ದಂಪತಿಗಳು ಸಂಪೂರ್ಣ ಚೇತರಿಸಿಕೊಂಡ ನಂತರ ಸಹ  ಒಂದು ವಾರ ಹೋಂ ಕ್ವಾರಂಟೈನ್  ಇರಬೇಕಾಗುವುದು ಎಂದು ಚಂದ್ರ ಲುಹಾಹೇಳಿದ್ದಾರೆ.

"ನಮ್ಮ ಸಂಪೂರ್ಣ ಇಚ್ಚಾಶಕ್ತಿಯಿಂದ ನಾವು ಯುದ್ಧವನ್ನು ಗೆದ್ದಿದ್ದೇವೆ.  ವೈದ್ಯರು ನಮಗೆ "ಎಂದೂ ಭಯಪಡಬೇಡಿ" ಎಂದು ಸೂಚಿಸಿದ್ದರು. ಅದರಂತೆ ನಾವು ಧೈರ್ಯದಿಂದ ಎಲ್ಲವನ್ನೂ ಎದುರಿಸಿದ್ದೆವು. " ಸುರೇಂದ್ರ ಹೇಳಿದ್ದಾರೆ. ಕೇಂದ್ರಪಾರದಲ್ಲಿ 333 ಮಂದಿಗೆ ಕೊರೋನಾ ಸೋಂಕು ತಗುಲಿದ್ದು , ಅದರಲ್ಲಿ 291 ಈಗಾಗಲೇ ಚೇತರಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com