ಕಾಂಗ್ರೆಸ್ ಒಳಗಿನ ಭಿನ್ನಾಭಿಪ್ರಾಯಕ್ಕೆ ಜನರು ಬೆಲೆ ತೆರುತ್ತಿದ್ದಾರೆ: ವಸುಂಧರಾ ರಾಜೆ ಗಂಭೀರ ಆರೋಪ

ರಾಜಸ್ಥಾನದ ಮಾಜಿ ಸಿಎಂ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟಿನ ಬಗೆಗೆ ಮೌನ ಮುರಿದಿದ್ದಾರೆ.
ಕಾಂಗ್ರೆಸ್ ಒಳಗಿನ ಭಿನ್ನಾಭಿಪ್ರಾಯಕ್ಕೆ ಜನರು ಬೆಲೆ ತೆರುತ್ತಿದ್ದಾರೆ: ವಸುಂಧರಾ ರಾಜೆ ಗಂಭೀರ ಆರೋಪ

ಜೈಪುರ್: ರಾಜಸ್ಥಾನದ ಮಾಜಿ ಸಿಎಂ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿನ ರಾಜಕೀಯ ಬಿಕ್ಕಟ್ಟಿನ ಬಗೆಗೆ ಮೌನ ಮುರಿದಿದ್ದಾರೆ.

ಕಾಂಗ್ರೆಸ್ ಒಳಗಿನ  ಭಿನ್ನಾಭಿಪ್ರಾಯಕ್ಕೆ ರಾಜಸ್ಥಾನದ ಜನರು ಬೆಲೆ ತೆರುತ್ತಿರುವುದು ದುರದೃಷ್ಟಕರ ಎಂದು ಶನಿವಾರ ಟ್ವೀಟ್ ಮೂಲಕ  ರಾಜೇ ಹೇಳಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ, ಮಹಿಳೆಯರ ಮೇಲಿನ ಅಪರಾಧ, ಮಿಡತೆ ದಾಳಿಗಳು, ವಿದ್ಯುತ್ ಸರಬರಾಜಿನಲ್ಲಿನ ಸಮಸ್ಯೆ ಎಲ್ಲದರ ಬಗ್ಗೆ ಅವರು ಪ್ರಸ್ತಾಪಿಸಿದರು.

"ಬಿಜೆಪಿ ಮತ್ತು ಬಿಜೆಪಿ ನಾಯಕರ ಹೆಸರನ್ನು ಸುಖಾಸುಮ್ಮನೆ ಎಳೆದು ತರಲು ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲ! ನಮ್ಮ ಜನರ ಹಿತಾಸಕ್ತಿ ಅತ್ಯಂತ ಮುಖ್ಯವಾಗಿರಬೇಕು" ಎಂದು ವಸುಂಧರಾ ರಾಜೆ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com