ಕೋವಿಡ್-19 ಲಸಿಕೆಗಾಗಿ ಭಾರತದ 7 ಫಾರ್ಮಾ ಸಂಸ್ಥೆಗಳ ನಡುವೆ ಪೈಪೋಟಿ

ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಲು ಜಾಗತಿಕವಾಗಿ ಫಾರ್ಮಾ ಸಂಸ್ಥೆಗಳು ಯತ್ನಿಸುತ್ತಿದ್ದು, ಭಾರತದ 7 ಫಾರ್ಮಾ ಸಂಸ್ಥೆಗಳೂ ಸಹ ಪೈಪೋಟಿಯಲ್ಲಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಲು ಜಾಗತಿಕವಾಗಿ ಫಾರ್ಮಾ ಸಂಸ್ಥೆಗಳು ಯತ್ನಿಸುತ್ತಿದ್ದು, ಭಾರತದ 7 ಫಾರ್ಮಾ ಸಂಸ್ಥೆಗಳೂ ಸಹ ಪೈಪೋಟಿಯಲ್ಲಿವೆ.

ಜಾಗತಿಕ ಮಟ್ಟದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಭಾರತ್ ಬಯೋಟೆಕ್, ಸೆರಮ್ ಇನ್ಸ್ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪ್ಯಾನೇಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನೊಲಾಜಿಕಲ್ಸ್, ಮೈನ್ವಾಕ್ಸ್ ಹಾಗೂ ಬಯೋಲಾಜಿಕಲ್ ಇ ಮುಂತಾದ ಭಾರತೀಯ ಫಾರ್ಮಾ ಸಂಸ್ಥೆಗಳು ಕೊರೋನಾ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ.

ಸಾಮಾನ್ಯವಾಗಿ ಯಾವುದೇ ಲಸಿಕೆಯ ಪರೀಕ್ಷೆಗೆ ಒಂದು ವರ್ಷ ಸಮಯಾವಕಾಶ ಹಾಗೂ ಹೆಚ್ಚುವರಿ ಸಮಯ ಅದನ್ನ ಬೃಹತ್ ಪ್ರಮಾಣದಲ್ಲಿ ತಯಾರಿಸಲು ಬೇಕಾಗುತ್ತದೆ. ಆದರೆ ಈಗ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫಾರ್ಮಾ ಸಂಸ್ಥೆಗಳು ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ.

ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಕ್ಯಾಂಡಿಡೇಟ್ ಕೋವಾಕ್ಸಿನ್ ನ ಮೊದಲ ಹಾಗೂ 2 ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ನೀಡಲಾಗಿದೆ. ಕಳೆದ ವಾರ ಮನುಷ್ಯರ ಮೇಲಿನ ಕ್ಲಿನಿಕಲ್ ಟ್ರಯಲ್ಸ್ ನ್ನೂ ಪ್ರಾರಂಭಿಸಿದೆ. ಸೆರಮ್ ಇನ್ಶ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ತಯಾರಿಕೆ ಬಗ್ಗೆ ಮಾಹಿತಿ ನೀಡಿದ್ದು ಕೋವಿಡ್-19 ಗೆ ವರ್ಷಾಂತ್ಯದ ವೇಳೆಗೆ ಲಸಿಕೆ ಕಂಡುಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದೆ.

ಅಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ಲಸಿಕೆಯ ಮೇಲೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದ್ದೇವೆ. ಇದರ ಜೊತೆಗೆ ಆಗಸ್ಟ್ 2020 ರ ವೇಳೆಗೆ ಭಾರತದಲ್ಲಿ ಮನುಷ್ಯರ ಮೇಲೂ ಈ ಲಸಿಕೆಯ ಪ್ರಯೋಗ ನಡೆಯಲಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ನ ಸಿಇಒ ಅದಾರ್ ಪೂನಾವಾಲ ತಿಳಿಸಿದ್ದಾರೆ.

ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಕೊಡಜೆನಿಕ್ಸ್ ಜೊತೆಗೂಡಿ ಲೈವ್ ಅಟೆನ್ಯುವೇಟೆಡ್ ಲಸಿಕೆಯನ್ನೂ ಈ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆ. ಈ ಸಂಸ್ಥೆಗಳು ತಯಾರಿಸುತ್ತಿರುವ ಲಸಿಕೆ ಭಾರತ ಹಾಗೂ ಮಧ್ಯಮ, ಕಡಿಮೆ ಆದಾಯ ಹೊಂದಿರುವ ದೇಶಗಳಿಗೆ ಸಹಕಾರಿ ಎಂದು ಪೂನಾವಾಲ ತಿಳಿಸಿದ್ದಾರೆ. ಇನ್ನು ಝೈಡಸ್ ಕ್ಯಾಡಿಲಾ ಸಂಸ್ಥೆ ಕ್ಯಾಂಡಿಡೇಟ್ ಝೈಕೋವಿ-ಡಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ನ್ನು 7 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com