ಸೆಪ್ಟೆಂಬರ್ ಮಧ್ಯದಲ್ಲಿ ಭಾರತದಲ್ಲಿ ಗರಿಷ್ಠ ಮಟ್ಟದಲ್ಲಿ ಕೋವಿಡ್: ತಜ್ಞರು

 ಸೆಪ್ಟೆಂಬರ್ ಮಧ್ಯಭಾಗದಲ್ಲಿ ಭಾರತದಲ್ಲಿ ಕೋವಿಡ್ 19 ಪ್ರಕರಣಗಳು ತನ್ನ ಅತ್ಯುನ್ನತ ಮಟ್ಟ ತಲುಪಲಿದೆ ಎಂದು ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಕೆ.ಶ್ರೀನಾಥ್ ರೆಡ್ಡಿ ಹೇಳಿದ್ದಾರೆ. 
ಸೆಪ್ಟೆಂಬರ್ ಮಧ್ಯದಲ್ಲಿ ಭಾರತದಲ್ಲಿ ಗರಿಷ್ಠ ಮಟ್ಟದಲ್ಲಿ ಕೋವಿಡ್: ತಜ್ಞರು

ಬೆಂಗಳೂರು: ಸೆಪ್ಟೆಂಬರ್ ಮಧ್ಯಭಾಗದಲ್ಲಿ ಭಾರತದಲ್ಲಿ ಕೋವಿಡ್ 19 ಪ್ರಕರಣಗಳು ತನ್ನ ಅತ್ಯುನ್ನತ ಮಟ್ಟ ತಲುಪಲಿದೆ ಎಂದು ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಕೆ.ಶ್ರೀನಾಥ್ ರೆಡ್ಡಿ ಹೇಳಿದ್ದಾರೆ. 

ಪಿಟಿಐ ಜೊತೆ ಮಾತನಾಡಿದ ಅವರು, ಈ ವಾರದ ಆರಂಭದಲ್ಲಿ ಭಾರತದಲ್ಲಿ ಸೋಂಕು ಮತ್ತು ಸಾವುಗಳು ಕ್ರಮವಾಗಿ ಒಂದು ಮಿಲಿಯನ್ ಮತ್ತು 25,000  ದಾಟಿರುವ ಕಾರಣ ವೈರಸ್ ಇನ್ನಷ್ಟು ಶಕ್ತಿಯುತವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. "ತಾತ್ತ್ವಿಕವಾಗಿ ನಾವು ಅದರ ಬೆಳವಣುಗೆ ತಡೆದು  ಅದು ಈ ಮಟ್ಟವನ್ನು ತಲುಪುವುದನ್ನು ತಡೆಯಬೇಕಾಗಿತ್ತು, ಆದರೆ ಈಗಲೂ ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡದೆ ಹೋದಲ್ಲಿ ಮುಂದೆ ಇನ್ನಷ್ಟು ಕೆಡುಕಾಗಲಿದೆ ಹಾಗಾಗಿ ಅದನ್ನು ಆದಷ್ಟು ಬೇಗನೆ ನಿಯಂತ್ರಿಸಬೇಕು."ತಜ್ಞರು ಹೇಳಿದರು.

"ವಿವಿಧ ರಾಜ್ಯಗಳಲ್ಲಿ ವೈರಸ್ ಸೋಂಕು ಬೇರೆ ಬೇರೆ ಸಮಯದಲ್ಲಿ ತನ್ನ ಗರಿಷ್ಠ ಮಟ್ಟ ತಲುಪುತ್ತದೆ," ರೆಡ್ಡಿ ಹೇಳಿದ್ದಾರೆ.ಆದಾಗ್ಯೂ, ಬಲವಾದ ಸಾರ್ವಜನಿಕ ಆರೋಗ್ಯ ಕ್ರಮಗಳು ಇದ್ದಲ್ಲಿ ಎರಡು ತಿಂಗಳ ಹಿಂದೆಯೇ ಭಾರತವು  ಈ ಉತ್ತುಂಗವನ್ನು ದೇಶ ಕಾಣಬಹುದಾಗಿದೆ.  ಮತ್ತು ಜನರು ಮಾಸ್ಕ್ ಧರಿಸುವುದು ಮತ್ತು ದೈಹಿಕ  ಅಂತರ ಕಾಪಾಡಿಕೊಳ್ಳುವ್ವುದುಮುಂತಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು."ಪ್ರತಿಯೊಬ್ಬರೂ ಮಾಡಬೇಕಾದದ್ದನ್ನು ಮಾಡಿದರೆ", ಎರಡು ತಿಂಗಳಲ್ಲಿ ಪ್ರಕರಣಗಳು ಕಡಿಮೆಯಾಗುತ್ತದೆಯೆ ಎಂದು ಕೇಳಿದಾಗ "ಇದು ಸಾರ್ವಜನಿಕರು ಹಾಗೂ  ಸರ್ಕಾರದ ಕ್ರಮವನ್ನು ಅವಲಂಬಿಸಿರುತ್ತದೆ.  ಎಂದಿದ್ದಾರೆ. 

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೃದ್ರೋಗ ವಿಭಾಗದ ಮಾಜಿ  ಮುಖ್ಯಸ್ಥರಾಗಿರುವ ರೆಡ್ಡಿ,  ಎರಡನೇ ಹಂತದ ಲಾಕ್‌ಡೌನ್ ವರೆಗೆ, ಭಾರತವು ವೈರಸ್ ಹರಡುವಿಕೆಯನ್ನು  ನಿಯಂತ್ರಿಸಲು ಪ್ರಯತ್ನಿಸುತ್ತಿದ್ದ ಕಾರಣ ನಿಯಂತ್ರಣ ಕ್ರಮಗಳು ತುಂಬಾ ಕಟ್ಟುನಿಟ್ಟಾಗಿದ್ದವು. ಆದರೆ ತರುವಾಯ ಮೇ 3 ರ ನಂತರ ಲಾಕ್ ಡೌನ್ ಸಡಿಲವಾದಾಗ ಆರ್ಥಿಕ ಚಟುವಟಿಕೆಗಳ ಪುನರಾರಂಭವು ಮುಖ್ಯವಾಗಿತ್ತು - ರೋಗಲಕ್ಷಣಗಳು, ತ್ವರಿತ ಪರೀಕ್ಷೆ ಮತ್ತು ಪ್ರತ್ಯೇಕತೆ ಮತ್ತುಸಂಪರ್ಕ ಪತ್ತೆಹಚ್ಚುವಿಕೆ ಮುಂತಾದ ಯಾವುದೇ ಪ್ರಕರಣಗಳಿಗೆ ಮನೆಯ ಸಮೀಕ್ಷೆಯಂತಹ ಸಾರ್ವಜನಿಕ ಆರೋಗ್ಯ ಚಟುವಟಿಕೆಗಳ ನಿರ್ವಹಿಸಲಾಗಿದೆ, ಎಂದು ಅವರು ಹೇಳಿದರು.

"ಆ ಎಲ್ಲಾ ಮುನ್ನೆಚ್ಚರಿಕೆಗಳು. ಸಾರ್ವಜನಿಕ ಆರೋಗ್ಯ ಕ್ರಮಗಳು, ಮತ್ತು ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬ ವಿಷಯದಲ್ಲಿ ವೈಯಕ್ತಿಕ ಎಚ್ಚರಿಕೆಯ ಕ್ರಮಗಳು, ಅಂದಿನಿಂದ ಜಾರಿಯಾಗುವುದು ಕಡಿಮೆಯಾಗಿದ್ದವು. ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ ನಂತರ ಮತ್ತಷ್ಟು  ಎಚ್ಚರಿಕೆ ಕ್ರಮಗಳು ಕಡಿಮೆಯಾದವು. ಆದ ಕಾರಣ ನಾವೀಗ ವೈರಸ್ ನ ಹಠಾತ್ ಏರುವಿಕೆ ವಿದ್ಯಮಾನದಲ್ಲಿ ನಾವಿದ್ದೇವೆ. ಎಂದು ತೋರುತ್ತಿದೆ.

ಫಲಿತಾಂಶಗಳು ಕೆಲವು ತಿಂಗಳುಗಳಷ್ಟು ದೂರದಲ್ಲಿದ್ದರೂ ಸಹ, ಶಾಲಾ ಪರೀಕ್ಷೆಯ ನಂತರ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಂತೆ ನಾವು ಸಂಭ್ರಮಿಸಿದ್ದೆವು, ಪ್ರಸ್ತುತ ಹಾರ್ವರ್ಡ್ ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರೆಡ್ಡಿ  ಹೇಳಿದ್ದಾರೆ.

ಇದೀಗ ಸಾರ್ವಜನಿಕ ಸಭೆಗಳಲ್ಲಿ ಮತ್ತು ಸಾರ್ವಜನಿಕ ಆರೋಗ್ಯ ಚಟುವಟಿಕೆಗಳಲ್ಲಿ ಅಗತ್ಯವಾದ ಎಚ್ಚರಿಕೆಗಳನ್ನು ಜಾರಿಗೊಳಿಸಲಾಗುತ್ತಿದೆ. ನಾವು ಆಸ್ಪತ್ರೆಯ ಹಾಸಿಗೆಯ ಸಾಮರ್ಥ್ಯದ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ. ಅದು ಸಹ ಅಗತ್ಯವಿದೆ. ಆದರೆ ಸಂಪರ್ಕ ಪತ್ತೆಹಚ್ಚುವಿಕೆಯ ಸಂಪೂರ್ಣ ಪ್ರದೇಶವು ಸಾರ್ವಜನಿಕ ಆರೋಗ್ಯ ಕಾರ್ಯವೆಂದು ಪರಿಗಣಿಸುವುದಕ್ಕಿಂತ ಹೆಚ್ಚಾಗಿ ಪೊಲೀಸರ ಜವಾಬ್ದಾರಿ ಎಂದು ಭಾವಿಸಲಾಗಿದೆ.ಬಲವಾದ ಸಂಪರ್ಕ ಪತ್ತೆಹಚ್ಚುವಿಕೆ, ರೋಗಲಕ್ಷಣಗಳನ್ನು ಹೊಂದಿರುವ ಜನರ ಮನೆಯ ಕಣ್ಗಾವಲು, ಅವುಗಳನ್ನು ತ್ವರಿತವಾಗಿ ಪರೀಕ್ಷಿಸುವುದು, ಈ ಎಲ್ಲಾ ಕ್ರಮಗಳನ್ನು ಹೆಚ್ಚು ಹೆಚ್ಚು ಮಾಡಬೇಕಾಗಿತ್ತು ಎಂದು ರೆಡ್ಡಿ ಹೇಳಿದ್ದಾರೆ.

ಬಲವಾದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅನುಸರಿಸದಿರುವುದು ಮತ್ತು ಸಾರ್ವಜನಿಕರಲ್ಲಿ ಎಚ್ಚರಿಕೆಯ ನಡವಳಿಕೆಯ ದೌರ್ಬಲ್ಯ  ವೈರಸ್ ಶೀಘ್ರವಾಗಿ ಹರಡಲು ಕಾರಣವಾಗಿದೆ ಎಂದು ಕಾರ್ಡಿಯಾಲಜಿ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ತರಬೇತಿ ಪಡೆದ ಹಲವಾರು ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಅಧ್ಯಯನಗಳಲ್ಲಿ ತೊಡಗಿಸಿಕೊಂಡಿರುವ ರೆಡ್ಡಿ ಹೇಳಿದ್ದಾರೆ.

"ಈಗ ನಮ್ಮ ಮುಖ್ಯ ಗಮನವೆಂದರೆ ಗ್ರಾಮೀಣ ಭಾರತಕ್ಕೆ ವೈರಸ್ ದಾಳಿಯಾಗದಂತೆ ತಡೆಯುವುದು ಮುಖ್ಯ ಸಣ್ಣ ಪಟ್ಟಣಗಳು ​​ಮತ್ತು ಗ್ರಾಮೀಣ ಪ್ರದೇಶಗಳನ್ನು ಸಾಧ್ಯವಾದಷ್ಟು ರಕ್ಷಿಸಬೇಕು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಏಕೆಂದರೆ ಅಲ್ಲಿಯೇ ಭಾರತದ ಮೂರನೇ ಎರಡರಷ್ಟು ಜನರು ಇದ್ದಾರೆ. ನಾವು ಅದನ್ನು ತಡೆಯಲು ಸಾಧ್ಯವಾದರೆ, ನಾವು ಇನ್ನೂ ಹೆಚ್ಚು ಹಾನಿಯಾಗುವುದನ್ನು ತಡೆಯಬಹುದು,"ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com