ದಿಗ್ವಿಜಯ್ ಸಿಂಗ್, ಸಚಿನ್ ಪೈಲಟ್
ದಿಗ್ವಿಜಯ್ ಸಿಂಗ್, ಸಚಿನ್ ಪೈಲಟ್

ಸಚಿನ್ ಪೈಲಟ್ ಸಿಂಧಿಯಾ ಹಾದಿಯಲ್ಲಿ ಹೋಗಬಾರದು- ದಿಗ್ವಿಜಯ್ ಸಿಂಗ್ 

ರಾಜಸ್ಥಾನದಲ್ಲಿನ ರಾಜಕೀಯ ಡ್ರಾಮಕ್ಕೆ ಬಿಜೆಪಿಯನ್ನು ದೂಷಿರುವ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್  ಸಿಂಗ್, ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷವನ್ನು ತೊರೆಯದಂತೆ ಕೇಳಿಕೊಂಡಿದ್ದಾರೆ.

ಭೂಪಾಲ್: ರಾಜಸ್ಥಾನದಲ್ಲಿನ ರಾಜಕೀಯ ಡ್ರಾಮಕ್ಕೆ ಬಿಜೆಪಿಯನ್ನು ದೂಷಿರುವ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್  ಸಿಂಗ್, ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷವನ್ನು ತೊರೆಯದಂತೆ ಕೇಳಿಕೊಂಡಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದಿಗ್ವಿಜಯ್ ಸಿಂಗ್, ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿದಂತೆ ಸಚಿನ್ ಪೈಲಟ್ ಬಿಜೆಪಿ ಸೇರಬಾರದು,ಕಾಂಗ್ರೆಸ್ ನಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ 18 ಶಾಸಕರ ಬಹಿರಂಗ ಬಂಡಾಯದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದರು.ಸಚಿನ್ ಪೈಲಟ್ ಜೊತೆಗೆ ಮಾತನಾಡಲು ಯತ್ನಿಸುತ್ತಿದ್ದರೂ ಕರೆ ಸ್ವೀಕರಿಸುತ್ತಿಲ್ಲ, ಮೆಸೇಜ್ ಗೂ ಯಾವುದೇ ರೀತಿಯ ಪ್ರತಿಕ್ರಿಯೆ ಬರುತ್ತಿಲ್ಲ ಎಂದರು.

ವಯಸ್ಸು ನಿಮ್ಮ ಕಡೆ ಇದೆ. ಅಶೋಕ್ ಗೆಹ್ಲೋಟ್  ಅಪರಾಧ ಮಾಡಿರಬಹುದು, ಆದರೆ ಅಂತಹ ಎಲ್ಲಾ ಸಮಸ್ಯೆಗಳನ್ನು ಉತ್ತಮ
ರೀತಿಯಲ್ಲಿ ಸೌಹಾರ್ದಯುತವಾಗಿ ಪರಿಹರಿಸಲಾಗುತ್ತದೆ. ಸಿಂಧಿಯಾ ಮಾಡಿದ ತಪ್ಪನ್ನು ಮಾಡಬೇಡಿ. ಬಿಜೆಪಿ ವಿಶ್ವಾಸಾರ್ಹವಲ್ಲ.
ಬೇರೆ ಯಾವುದೇ ಪಕ್ಷದಿಂದ ಬಿಜೆಪಿ ಸೇರಿದ ಯಾರೂ ಕೂಡಾ ಯಶಸ್ವಿಯಾಗಿಲ್ಲ ಎಂದು ಸಿಂಗ್ ಹೇಳಿದರು.

ಇದೇ ಮೊದಲ ಬಾರಿಗೆ ಸಚಿನ್ ಪೈಲಟ್ ತಮ್ಮಗೆ ಪ್ರತಿಕ್ರಿಯಿಸುತ್ತಿಲ್ಲ. ಆತ ನನ್ನ ಮಗನಿದ್ದಂತೆ, ಆತ ಕೂಡಾ  ಅಷ್ಟೇ ಗೌರವದಿಂದ
ಕಾಣುತ್ತಿದ್ದ.ಮೂರ್ನಾಲ್ಕು ಬಾರಿ ಕರೆ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮಹತ್ವಕಾಂಕ್ಷೆ ಒಳ್ಳೆಯದು, ಮಹತ್ವಾಕಾಂಕ್ಷೆ ಇಲ್ಲದೆ ಬೆಳೆಯಲು ಸಾಧ್ಯವಿಲ್ಲ, ಆದರೆ, ಮಹತ್ವಾಕಾಂಕ್ಷೆಯೊಂದಿಗೆ ಸಂಸ್ಥೆ, ತತ್ವ ಮತ್ತು ದೇಶದೊಂದಿಗೆ ಬದ್ಧತೆ ಹೊಂದಿರಬೇಕು ಎಂದರು.

ಸಚಿನ್ ಪೈಲಟ್ ನೂತನ ಪಕ್ಷ ಕಟ್ಟುವ ಬಗ್ಗೆ ಕೇಳಿದ್ದೇನೆ. ಆದರೆ, ಅದಕ್ಕೆ ಏನು ಅಗತ್ಯವಿದೆ. ಕಾಂಗ್ರೆಸ್ ಪಕ್ಷ  ಅವರಿಗೆ ಏನು ನೀಡಲ್ಲವೇ ?ಎಂದು ಪ್ರಶ್ನಿಸಿದ ಅವರು, 26 ವರ್ಷಕ್ಕೆ ಸಂಸದ, 32 ವರ್ಷಕ್ಕೆ ಕೇಂದ್ರ ಸಚಿವ, 34ನೇ ವರ್ಷಕ್ಕೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ, 38 ವರ್ಷಕ್ಕೆ ಉಪ ಮುಖ್ಯಮಂತ್ರಿ ಮಾಡಲಾಗಿದೆ. ಇನ್ನು ಏನು ಬೇಕು? ಸಚಿನ್ ಪೈಲಟ್ ಗೆ ಇನ್ನೂ ಸಾಕಷ್ಟು ಅವಕಾಶವಿದೆ ಎಂದು ಸಿಂಗ್ ಹೇಳಿದ್ದಾರೆ.

ಒಂದು ವೇಳೆ ಯಾವುದೇ ವಿವಾದ ಇದ್ದಲ್ಲಿ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾಗಿ ಸಭೆ ಕರೆದು, ಈ ವಿಚಾರದ ಬಗ್ಗೆ ಮಾತನಾಡಲಿ. ರಾಜಸ್ಥಾನ ಉಸ್ತುವಾರಿ ಅವಿನಾಶ್ ಪಾಂಡೆ ಮತ್ತು ಗೆಹ್ಲೋಟ್ ಜೊತೆಗೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಿ. ನಿಮ್ಮ ಶಾಸಕರ ಬಗ್ಗೆ ನಂಬಿಕೆ ಇದ್ದರೆ ಏಕೆ 18-19 ಶಾಸಕರನ್ನು ಹರಿಯಾಣದ ಐಟಿಸಿ ಗ್ರ್ಯಾಂಡ್ ಹೋಟೆಲ್ ನಲ್ಲಿ ಇಟ್ಟಿದ್ದೀರಿ? ಎಂದು ಪ್ರಶ್ನಿಸಿದ ಸಿಂಗ್, ಇದೇ ಹೊಟೇಲ್ ನಲ್ಲಿ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶದ ಶಾಸಕರನ್ನು ಬಿಜೆಪಿ ಇಟ್ಟಿತ್ತು ಎಂದು ಹೇಳಿದರು.

ಏನು ನಡೆದಿದ್ದೇಯೊ ಅದೆಲ್ಲವನ್ನು ಸಚಿನ್ ಪೈಲಟ್ ಮರೆತು, ಕೂಡಲೇ ಬಂದು ಎಲ್ಲರೊಂದಿಗೆ ಕುಳಿತು ಹೇಗೆ ಪಕ್ಷವನ್ನು ಬೆಳೆಸಬೇಕೆಂಬ ಚರ್ಚಿಸಲಿ ಎಂದು ದಿಗ್ವಿಜಯ್ ಸಿಂಗ್ ಕಿವಿಮಾತು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com