ಗಡಿಯಲ್ಲಿ ಚೀನಾ ತಂಟೆ: ಕ್ಷಿಪ್ರ ರಾಫೆಲ್ ನಿಯೋಜನೆ ಬಗ್ಗೆ  ಐಎಎಫ್ ಹಿರಿಯ ಅಧಿಕಾರಿಗಳ ಮಹತ್ವದ ಚರ್ಚೆ

ಭಾರತ- ಚೀನಾ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ಲಡಾಖ್ ನ  ಎಲ್ಎಸಿ ಬಳಿ ರಾಫೆಲ್ ನ ಕ್ಷಿಪ್ರ ಕಾರ್ಯಾಚರಣೆ ಸ್ಟೇಷನ್ ನ್ನುನ್ ಸ್ಥಾಪಿಸುವ ಸಂಬಂಧ ಐಎಎಫ್ ನ ಹಿರಿಯ ಅಧಿಕಾರಿಗಳು ಈ ವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ರಫೇಲ್
ರಫೇಲ್

ನವದೆಹಲಿ: ಭಾರತ- ಚೀನಾ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ಲಡಾಖ್ ನ  ಎಲ್ಎಸಿ ಬಳಿ ರಾಫೆಲ್ ನ ಕ್ಷಿಪ್ರ ಕಾರ್ಯಾಚರಣೆ ಸ್ಟೇಷನ್ ನ್ನುನ್ ಸ್ಥಾಪಿಸುವ ಸಂಬಂಧ ಐಎಎಫ್ ನ ಹಿರಿಯ ಅಧಿಕಾರಿಗಳು ಈ ವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. 

ಜು.22 ರಿಂದ 2 ದಿನಗಳು ನಡೆಯಲಿರುವ ಈ ಸಭೆಯಲ್ಲಿ ಕಮಾಂಡರ್ಸ್ ಕಾನ್ಫರೆನ್ಸ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಹಲವು ವಿಷಯಗಳು ಚರ್ಚೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ ತಮ್ಮ 7 ಕಮಾಂಡರ್-ಇನ್-ಚೀಫ್ ಗಳೊಂದಿಗೆ ಚೀನಾ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ತಿಂಗಳಾಂತ್ಯಕ್ಕೆ ಬರಲಿರುವ ರಾಫೆಲ್ ಜೆಟ್ ಗಳ ನಿಯೋಜನೆಯ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. 

ಈಗಾಗಲೇ ಅಡ್ವಾನ್ಸ್ಡ್ ಹಾಗೂ ಫಾರ್ವರ್ಡ್ ಬೇಸ್ ಗಳಲ್ಲಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿರುವ ಮಿರಾಜ್ 2000, ಸುಖೋಯ್-30, ಮಿಗ್-29 ಫೈಟರ್ ಗಳನ್ನು ಭಾರತೀಯ ಸೇನೆ ನಿಯೋಜನೆ ಮಾಡಿದೆ. ಚೀನಾ ಗಡಿ ಭಾಗದಲ್ಲಿರುವ ಫಾರ್ವರ್ಡ್ ಬೇಸ್ ಗಳಲ್ಲಿ ಅತ್ಯಾಧುನಿಕ ಅಪಾಚೆ ಅಟಾಕ್ ಹೆಲಿಕಾಫ್ಟರ್ ಗಳನ್ನೂ ಸಹ ನಿಯೋಜನೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com