ಕೋವಿಡ್ ಲಾಕ್ ಡೌನ್: ಆಡಿ ಅಮಾವಾಸ್ಯೆಯಂದು ಅಗ್ನಿ ತೀರ್ಥ ನಿರ್ಜನ

ಕೋವಿಡ್ ನಿಯಂತ್ರಿಸಲು ಲಾಕ್ ಡೌನ್ ಹೇರಿರುವ ಪರಿಣಾಮ, ಆಡಿ ಅಮಾವಾಸ್ಯೆಯ ದಿನ ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ಅಗ್ನಿ ತೀರ್ಥ ಸಮುದ್ರ ನಿರ್ಜನವಾಗಿತ್ತು.
ಕೋವಿಡ್ ಲಾಕ್ ಡೌನ್: ಆಡಿ ಅಮಾವಾಸ್ಯೆಯಂದು ಅಗ್ನಿ ತೀರ್ಥ ನಿರ್ಜನ
ಕೋವಿಡ್ ಲಾಕ್ ಡೌನ್: ಆಡಿ ಅಮಾವಾಸ್ಯೆಯಂದು ಅಗ್ನಿ ತೀರ್ಥ ನಿರ್ಜನ

ರಾಮೇಶ್ವರಂ: ಕೋವಿಡ್ ನಿಯಂತ್ರಿಸಲು ಲಾಕ್ ಡೌನ್ ಹೇರಿರುವ ಪರಿಣಾಮ, ಆಡಿ ಅಮಾವಾಸ್ಯೆಯ ದಿನ ತಮಿಳುನಾಡಿನ ರಾಮೇಶ್ವರಂ ನಲ್ಲಿರುವ ಅಗ್ನಿ ತೀರ್ಥ ಸಮುದ್ರ ನಿರ್ಜನವಾಗಿತ್ತು.

ಸಾಮಾನ್ಯವಾಗಿ ಪ್ರತಿವರ್ಷ ರಾಮೇಶ್ವರಂನಲ್ಲಿ, ಲಕ್ಷಾಂತರ ಭಕ್ತರು ಸಾಮಾನ್ಯವಾಗಿ ಆಡಿ ಅಮಾವಾಸ್ಯ ಸಂದರ್ಭದಲ್ಲಿ ಪಿತೃ ತರ್ಪಣ ನೀಡುವ ಮೊದಲು ಪವಿತ್ರ ಸ್ನಾನ ಮಾಡುತ್ತಿದ್ದರು.  ಆದರೆ ಈ ಬಾರಿ ಲಾಕ್ ಡೌನ್ ಪರಿಣಾಮ ಜನರು ಆಗಮಿಸಿರಲಿಲ್ಲ.

ಆಡಿ ಅಮಾವಾಸ್ಯೆಯಯನ್ನು ಪೂರ್ವಜರಿಗೆ ಶ್ರಾದ್ಧ ಮಾಡಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ.  ರಾಮೇಶ್ವರಂನಲ್ಲಿ ಈ ದಿನವು ಬಹಳ ಮಹತ್ವದ್ದಾಗಿದೆ, ಅಲ್ಲಿ ದೇಶದ ವಿವಿಧ ಭಾಗಗಳಿಂದ ಐದು ಲಕ್ಷಕ್ಕೂ ಹೆಚ್ಚು ಧರ್ಮನಿಷ್ಠ ಹಿಂದೂ ಜನರು ಸಮುದ್ರ ತೀರದಲ್ಲಿ ಒಟ್ಟುಗೂಡುತ್ತಾರೆ ಮತ್ತು ಆಚರಣೆಗಳನ್ನು ಮಾಡುತ್ತಾರೆ.

ಆದರೆ ಈ ಬಾರಿ ಶ್ರೀ ರಾಮನಾಥಸ್ವಾಮಿ ದೇವಸ್ಥಾನವನ್ನು ಸಾರ್ವಜನಿಕ ದರ್ಶನಕ್ಕಾಗಿ ಈಗಾಗಲೇ ಮುಚ್ಚಲಾಗಿತ್ತು. ಅತ್ಯಧಿಕ ಜನಸಂದಣಿಗೆ ಕಾರಣವಾಗುವ ಯಾವುದೇ ಹಬ್ಬಗಳು ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರವು ನಿಷೇಧಿಸಿರುವ ​​ಕಾರಣ, ಇತರ ಭಾಗಗಳಿಂದ ರಾಮೇಶ್ವರಕ್ಕೆ ಭಕ್ತರು ಪ್ರವೇಶಿಸುವುದನ್ನು ತಡೆಯಲು ಪೊಲೀಸ್ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.

ಅಂತೆಯೇ, ರಾಮನಾಥಪುರಂ ಜಿಲ್ಲೆಯ ಧನುಷ್ಕೋಡಿ, ಮುಹುಂತರಾಯಚತ್ರಂ, ಸೇತುಕರೈ ಮತ್ತು ದೇವಿಪಟ್ಟಣಂನಂತಹ ಪವಿತ್ರ ಸ್ಥಳಗಳಲ್ಲಿ ಶ್ರಾದ್ಧ ಮಾಡಲು ಜನರು ಸೇರುವುದನ್ನು ನಿಷೇಧಿಸಲಗಿದೆ.

ಅಂತೆಯೇ, ಕನ್ಯಾಕುಮಾರಿಯ ಪ್ರಸಿದ್ಧ ತ್ರಿವೇಣಿ ಸಂಗಮ, ತೂತುಕುಡಿಯ ತಿರುಚೆಂದೂರು, ಪ್ರಸಿದ್ಧ ಜಲಮೂಲಗಳು, ವಿವಿಧ ನದಿಗಳ ಘಟ್ಟಗಳು, ವಿಶೇಷವಾಗಿ ಕಾವೇರಿ ನದಿಯ ದಂಡೆಯುದ್ದಕ್ಕೂ ರಾಜ್ಯದಾದ್ಯಂತ ಹಲವಾರು ಜಿಲ್ಲೆಗಳಲ್ಲಿ  ಲಾಕ್ ಡೌನ್ ಮತ್ತು ಸಂಚಾರ ನಿರ್ಬಂಧ ಹೇರಿಕೆ ಹಿನ್ನೆಲೆಯಲ್ಲಿ ನಿರ್ಜನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com