ಲಡಾಖ್ ಗಡಿಯಲ್ಲಿ ಚೀನಾ ಕ್ಯಾತೆ ನಡುವೆಯೇ ಜುಲೈ 27ಕ್ಕೆ ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ

ಇತ್ತ ಎಲ್ಒಸಿಯಲ್ಲಿ ಪಾಕಿಸ್ತಾನ, ಅತ್ತ ಎಲ್ಎಸಿಯಲ್ಲಿ ಚೀನಾ ತಂಟೆಗಳೆರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಆನೆ ಬಲ ದೊರೆತಿದ್ದು, ಇದೇ ಜುಲೈ 27ರಂದು ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಆಗಮಿಸಲಿದೆ.
ರಫೆಲ್ ಯುದ್ಧ ವಿಮಾನ
ರಫೆಲ್ ಯುದ್ಧ ವಿಮಾನ

ನವದೆಹಲಿ: ಇತ್ತ ಎಲ್ಒಸಿಯಲ್ಲಿ ಪಾಕಿಸ್ತಾನ, ಅತ್ತ ಎಲ್ಎಸಿಯಲ್ಲಿ ಚೀನಾ ತಂಟೆಗಳೆರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಆನೆ ಬಲ ದೊರೆತಿದ್ದು, ಇದೇ ಜುಲೈ 27ರಂದು ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಆಗಮಿಸಲಿದೆ.

ಮೂಲಗಳ ಪ್ರಕಾರ ಇದೇ ಜುಲೈ 27ರಂದು ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲಿದ್ದು, ಫ್ರಾನ್ಸ್ ನ ಇಸ್ಟ್ರೆಸ್ ನಿಂದ ರಫೇಲ್ ಯುದ್ಧ ವಿಮಾನಗಳು ಟೇಕ್ ಆಫ್ ಆಗಲಿದೆ. ಫ್ರಾನ್ಸ್ ನ ಟ್ಯಾಂಕರ್ ವಾಹಕದ ಮೂಲಕ ಭಾರತಕ್ಕೆ ಆಗಮಿಸುತ್ತಿವೆ. ಟ್ಯಾಂಕರ್ ವಾಹಕ ಪ್ರಯಾಣದ ನಡುವೆ ಯುಎಇಯ ಅಬುದಾಬಿಯ ಅಲ್ ಧಫ್ರಾ ಏರ್ ಬೇಸ್ ನಲ್ಲಿ ಇಂಧನಕ್ಕಾಗಿ ಇಳಿಯಲಿದೆ. ಬಳಿಕ ಜುಲೈ 27ರಂದು ಹರ್ಯಾಣದ ಅಂಬಾಲಾ ಏರ್ ಬೇಸ್ ನಲ್ಲಿ ಲ್ಯಾಂಡ್ ಆಗಲಿವೆ. ಬಳಿಕ ಜುಲೈ 29ರಂದು ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಲಿವೆ. ಹವಾಮಾನ ಸಹಕರಿಸಿದರೆ ಜುಲೈ 29ರಂದು ಹರಿಯಾಣದ ಅಂಬಾಲಾ ವಾಯು ನೆಲೆಯಲ್ಲಿ ಅವುಗಳ ಹಾರಾಟ ಪರೀಕ್ಷೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಬರುವ ಮತ್ತೊಂದು ಸ್ಕ್ವಾಡ್ರನ್‌ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತ ಮತ್ತು ಫ್ರಾನ್ಸ್ ದೇಶಗಳು ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಪೈಕಿ ಮೊದಲ ಹಂತದಲ್ಲಿ ಐದು ವಿಮಾನಗಳು ಮಾತ್ರ ವಾಯುಪಡೆ ಸೇರಲಿವೆ. ಈ ಬಗ್ಗೆ ಮಾಹಿತಿ ನೀಡಿರುವ ವಿಂಗ್‌ ಕಮಾಂಡರ್‌ ಇಂದ್ರಾನಿಲ್‌ ನಂದಿ ಅವರು, 'ಐಎಎಫ್‌ನ ವಾಯು ಮತ್ತು ನಿಲ್ದಾಣದ ಸಿಬ್ಬಂದಿಗೆ ರಫೇಲ್‌ನ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅವರಿಗೆ ಸಮಗ್ರ ತರಬೇತಿ ಕೂಡ ನೀಡಲಾಗುವುದು. ಮೊದಲ ಹಂತದಲ್ಲಿ ತ್ವರಿತವಾಗಿ ಅದರ ಹಾರಾಟ ತರಬೇತಿಗೆ ವ್ಯವಸ್ಥೆ ಮಾಡಲಾಗುತ್ತಿದೆ' ಎಂದು  ತಿಳಿಸಿದ್ದಾರೆ.

ಹರಿಯಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ರಫೆಲ್ ಯುದ್ಧ ವಿಮಾನಗಳು ನಿಯೋಜನೆಗೊಳ್ಳುವುದರಿಂದ ಕಾರ್ಯತಂತ್ರವಾಗಿಯೂ ಭಾರತಕ್ಕೆ ಗೆಲವು ಸಿಗಲಿದೆ. ಯಾಕೆಂದರೆ ಅತ್ತ ಚೀನಾ ಹಾಗೂ ಪಾಕಿಸ್ತಾನಕ್ಕೆ ಹತ್ತಿರವಾಗುವ ವಾಯುನೆಲೆಯಲ್ಲೇ ರಫೆಲ್‌ ಇರಲಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com