ರಾಜಸ್ಥಾನ ಬಿಕ್ಕಟ್ಟು, ಮ.ಪ್ರ ಕಾಂಗ್ರೆಸ್ ಸರ್ಕಾರ ಪತನ, ಚೀನಾ ಸಮರ್ಥನೆ, ರಾಹುಲ್ ಸಾಧನೆಗಳಾಗಿವೆ: ಜಾವಡೇಕರ್ ಟೀಕೆ

ಭಾರತ -ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಭಾರತ -ಚೀನಾ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ತಿರುಗೇಟು ನೀಡಿದ್ದಾರೆ.

ರಾಜಸ್ಥಾನದಲ್ಲಿ ಸದ್ಯದ ರಾಜಕೀಯ ಬಿಕ್ಕಟ್ಟು ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನವು ಕಾಂಗ್ರೆಸ್ ಮಾಜಿ ಅಧ್ಯಕ್ಷರ ಸಾಧನೆಗಳಾಗಿವೆ ಎಂದು ಟೀಕಿಸಿದ್ದಾರೆ.

ರಾಹುಲ್‌ಗಾಂಧಿ ಸಾಧನೆಗಳಲ್ಲಿ ಶಹೀನ್ ಬಾಗ್ ಗಲಭೆಗಳು, ಜೋತಿರಾಧಿತ್ಯ ಮತ್ತು ಮಧ್ಯಪ್ರದೇಶವನ್ನು ಕಳೆದುಕೊಂಡಿರುವುದು, ಚೀನಾವನ್ನು ಸಮರ್ಥಿಸಿಕೊಂಡಿರುವುದೂ ಸೇರಿವೆ ಎಂದು ಜಾವಡೇಕರ್ ದೂರಿದ್ದಾರೆ. 

ಸರಣಿ ಟ್ವೀಟ್‌ಗಳನ್ನು ಮಾಡಿರುವ ಜಾವಡೇಕರ್‌, ಕಳೆದ 6 ತಿಂಗಳಲ್ಲಿ ರಾಹುಲ್‌ ಸಾಧನೆಗಳನ್ನು ಗಮನಿಸುವುದಾದರೆ, ಫೆಬ್ರವರಿಯಲ್ಲಿ ಶಾಹೀನ್ ಬಾಗ್ ಮತ್ತು ಗಲಭೆಗಳು, ಮಾರ್ಚ್‌ ನಲ್ಲಿ ಜ್ಯೋತಿರಾಧಿತ್ಯ ಮತ್ತು ಮಧ್ಯಪ್ರದೇಶವನ್ನು ಕಳೆದುಕೊಂಡಿರುವುದು, ಏಪ್ರಿಲ್ ನಲ್ಲಿ ವಲಸೆ ಕಾರ್ಮಿಕರನ್ನು ಪ್ರಚೋದಿಸಿರುವುದು, ಮೇ ನಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಸೋಲಿನ 6ನೇ ವಾರ್ಷಿಕೋತ್ಸವ, ಜೂನ್ ನಲ್ಲಿ ಚೀನಾವನ್ನು ಸಮರ್ಥಿಸಿಕೊಂಡಿರುವುದು, ಜುಲೈನಲ್ಲಿ ಕಾಂಗ್ರೆಸ್ ರಾಜಸ್ಥಾನದಲ್ಲಿ ಪತನದತ್ತ ಸಾಗಿರುವುದಾಗಿದೆ ಎಂದು ಪಟ್ಟಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com