ಅಸ್ಸಾಂನಲ್ಲಿ ಭೀಕರ ಪ್ರವಾಹ: ನೆರವು ನೀಡಲು ಸಿದ್ಧ- ವಿಶ್ವಸಂಸ್ಥೆ

ಅಸ್ಸಾಂ ಭೀಕರ ಪ್ರವಾಹದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅಪಾರ ಮೌಲ್ಯದ ಆಸ್ತಿ ಪಾಸ್ತಿ ಉಂಟಾಗಿದ್ದು, ಅಗತ್ಯ ಬಿದ್ದರೆ ಭಾರತ ಸರ್ಕಾರಕ್ಕೆ ನೆರವು ನೀಡಲು ಸಿದ್ಧವಿರುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಸ್ಸಾಂ ಭೀಕರ ಪ್ರವಾಹದಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅಪಾರ ಮೌಲ್ಯದ ಆಸ್ತಿ ಪಾಸ್ತಿ ಉಂಟಾಗಿದ್ದು, ಅಗತ್ಯ ಬಿದ್ದರೆ ಭಾರತ ಸರ್ಕಾರಕ್ಕೆ ನೆರವು ನೀಡಲು ಸಿದ್ಧವಿರುವುದಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದಾಗಿ ಸುಮಾರು 4 ಮಿಲಿಯನ್ ನಷ್ಟು ಜನರು ಸ್ಥಳಾಂತರವಾಗಿರುವ ಬಗ್ಗೆ ಸಹೋದ್ಯೋಗಿಗಳು ತಿಳಿಸಿದ್ದು, ಅಗತ್ಯವಿದ್ದರೆ ಭಾರತ ಸರ್ಕಾರಕ್ಕೆ ನೆರವು ನೀಡುವಾದಿಗ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರ ಡುಜಾರಿಕ್ ಹೇಳಿದ್ದಾರೆ.

ಅಸ್ಸಾಂನ 24 ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ್ದು, ಸುಮಾರು 24. 3 ಲಕ್ಷ ಜನರ ಮೇಲೆ ತೀವ್ರ ರೀತಿಯ ಪರಿಣಾಮ ಉಂಟಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಭೂಕುಸಿತದಿಂದ 26 ಹಾಗೂ  ಪ್ರವಾಹ ಸಂಬಂಧಿತ ಹಾನಿಯಿಂದಾಗಿ 85 ಜನರು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com