ಹಣದ ಆಮಿಷ ಆರೋಪ: ಕಾಂಗ್ರೆಸ್ ಶಾಸಕ ಗಿರಿರಾಜ್ ಮಾಲಿಂಗಗೆ ಲೀಗಲ್ ನೊಟೀಸ್ ಕಳುಹಿಸಿದ ಸಚಿನ್ ಪೈಲಟ್

ಬಿಜೆಪಿಗೆ ಸೇರಲು ಸಚಿನ್ ಪೈಲಟ್ ತಮಗೆ ಹಣದ ಆಮಿಷವೊಡ್ಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರಿಗೆ ಸಚಿನ್ ಪೈಲಟ್ ಲೀಗಲ್ ನೊಟೀಸ್ ಕಳುಹಿಸಿದ್ದಾರೆ.
ಸಚಿನ್ ಪೈಲಟ್
ಸಚಿನ್ ಪೈಲಟ್

ಜೈಪುರ: ಬಿಜೆಪಿಗೆ ಸೇರಲು ಸಚಿನ್ ಪೈಲಟ್ ತಮಗೆ ಹಣದ ಆಮಿಷವೊಡ್ಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಅವರಿಗೆ ಸಚಿನ್ ಪೈಲಟ್ ಲೀಗಲ್ ನೊಟೀಸ್ ಕಳುಹಿಸಿದ್ದಾರೆ.

ಶಾಸಕ ಮಾಲಿಂಗ ಮಾಧ್ಯಮಗಳಿಗೆ ತಪ್ಪು ಮತ್ತು ಸುಳ್ಳು ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಸಚಿನ್ ಪೈಲಟ್ ತಮ್ಮ ವಕೀಲರ ಮೂಲಕ ಲೀಗಲ್ ನೊಟೀಸ್ ಕಳುಹಿಸಿದ್ದಾರೆ ಎಂದು ಮೂಲಗಳಿಂದ ಖಚಿತವಾಗಿ ತಿಳಿದುಬಂದಿದೆ.

ಮೊನ್ನೆ ಸೋಮವಾರ ಜೈಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ, ನಾನು ಸಚಿನ್ ಪೈಲಟ್ ಜೊತೆ ಚರ್ಚೆ ಮಾಡಿದ್ದೆ. ಅವರು ನನ್ನಲ್ಲಿ ನಿನಗೆ ಎಷ್ಟು ಹಣ ಬೇಕು, 35 ಕೋಟಿ ರೂಪಾಯಿ ಕೊಡುತ್ತೇನೆ, ಬಿಜೆಪಿಗೆ ಸೇರಿಬಿಡು ಎಂದಿದ್ದರು. ಕಳೆದ ಡಿಸೆಂಬರ್ ನಿಂದ ಇದು ನಡೆಯುತ್ತಿದೆ. ಇದೇನು ಹೊಸತಲ್ಲ. ಸಚಿನ್ ಪೈಲಟ್ ಹೀಗೆ ಎರಡು ಮೂರು ಬಾರಿ ಕೇಳಿದ್ದರು, ಆಗ ನಾನು ಇಲ್ಲ ಸಾಧ್ಯವಿಲ್ಲ ಎಂದಿದ್ದೆ ಎಂದು ಹೇಳಿದ್ದರು.

ಕಾಂಗ್ರೆಸ್ ಪಕ್ಷದಿಂದ ತಮ್ಮ ವಿರುದ್ಧ ಅನರ್ಹತೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಕಾನೂನಾತ್ಮಕವಾಗಿ ಹೋರಾಟಕ್ಕಿಳಿದಿರುವ ಸಚಿನ್ ಪೈಲಟ್ ಮಾಲಿಂಗ ಅವರ ಆರೋಪವನ್ನು ನಿರಾಕರಿಸಿದ್ದು, ಅವರು ಆಧಾರರಹಿತ ಮತ್ತು ಗೊಂದಲದ ಆರೋಪ ಮಾಡುತ್ತಿದ್ದಾರೆ, ಅವರ ವಿರುದ್ಧ ಕಾನೂನಾತ್ಮಕ ಹೋರಾಟಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com