ಭಾರತದಲ್ಲಿ ವಿದೇಶಿ ಹೂಡಿಕೆಗೆ ಇದು ಸಕಾಲ: ಪ್ರಧಾನಿ ನರೇಂದ್ರ ಮೋದಿ

ಭಾರತದಲ್ಲಿ ಹೂಡಿಕೆ ಮಾಡುವಂತೆ ಅಮೆರಿಕಾಗೆ ಉದ್ಯಮಿಗಳಿಗೆ ಆಹ್ವಾನ ನೀಡಿದ್ದು, ದೇಶದಲ್ಲಿ ಬಂಡವಾಳ ಹೂಡಿಕೆಗೆ ಕಾಲ ಅತ್ಯಂತ ಪರಿಪಕ್ವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಭಾರತದಲ್ಲಿ ಹೂಡಿಕೆ ಮಾಡುವಂತೆ ಅಮೆರಿಕಾಗೆ ಉದ್ಯಮಿಗಳಿಗೆ ಆಹ್ವಾನ ನೀಡಿದ್ದು, ದೇಶದಲ್ಲಿ ಬಂಡವಾಳ ಹೂಡಿಕೆಗೆ ಕಾಲ ಅತ್ಯಂತ ಪರಿಪಕ್ವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ-ಅಮೆರಿಕಾ ಉದ್ಯಮಿ ಮಂಡಳಿ ಆಯೋಜಿಸಿರುವ 2 ದಿನಗಳ ಇಂಡಿಯಾಸ್ ಐಡಿಯಾಸ್ ಸಮ್ಮೇಳನದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ದೇಶದ ಜನತೆಯನ್ನುದ್ದೇಶಿಸಿ ನರೇಂದ್ರ ಮೋದಿ ಅವರು ಮಾತನಾಡಿದರು. 

ಭಾರತದಲ್ಲಿ ಬಂಡವಾಳ ಹೂಡಲು ಸಮಯ ಬಹಳ ಉತ್ತಮವಾಗಿದೆ ಇನ್ನೆಂದು ಇಂತಹ ಒಳ್ಳೆಯ ಸಮಯ ಬರುವುದಿಲ್ಲ ಎಂದು ಮೋದಿ ಒತ್ತಿ ಹೇಳಿದ್ದಾರೆ.

ಕೊರೋನಾವೈರಸ್ ಸವಾಲುಗಳನ್ನು ಎದುರಿಸಿ ಸದೃಢ ಜಗತ್ತನ್ನು ನಾವು ಕಟ್ಟಬೇಕಿದೆ. ವಿಶ್ವ ಕಲ್ಯಾಣಕ್ಕಾಗಿ ಭಾರತ ಮತ್ತು ಅಮೆರಿಕಾ ಈ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಲಿವೆ ಎಂದು ಮೋದಿ ಹೇಳಿದ್ದಾರೆ. 

ಆತ್ಮನಿರ್ಭರ್ ಭಾರತದ ಮೂಲಕ ಭಾರತವು ವಿಶ್ವದ ಏಳಿಗೆ ಮತ್ತು ಸ್ಥಿತಿಸ್ಥಾಪಕತ್ವದೆಡೆಗೆ ಕೊಡುಗೆ ನೀಡುತ್ತಿದೆ. ಅದೇ ರೀತಿ ನಾವು ಅಮೆರಿಕಾದ ಸಹಭಾಗಿತ್ವವನ್ನು ಬಯಸಿದ್ದೇವೆ ಎಂದರು. ಇದೇ ವೇಳೆ ಪ್ರತಿವರ್ಷ ನಾವು ವಿದೇಶಾಂಗ ನೀತಿಯಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದೇವೆ. 

2019-20ರಲ್ಲಿ ಭಾರತದಲ್ಲಿ ಎಫ್ಡಿಐ ಒಳಹರಿವು 74 ಬಿಲಿಯನ್ ಡಾಲರ್ ಆಗಿತ್ತು. ಇದೀಗ ಶೇ. 20ರಷ್ಟು ಏರಿಕೆಯಾಗಿದೆ. ಭಾರತವು ಏಪ್ರಿಲ್-ಜುಲೈ ನಡುವಿನಲ್ಲಿ 20 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆಯನ್ನು ಆಕರ್ಷಿಸಿದೆ. ಮಾರುಕಟ್ಟೆಗಳು ಯಾವಾಗ ತೆರೆದುಕೊಳ್ಳುತ್ತದೆಯೋ ಅವಕಾಶಗಳನ್ನು ಮತ್ತು ಆಯ್ಕೆಗಳು ಹೇರಳವಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com