ಮಧ್ಯಪ್ರದೇಶ ಸಚಿವರಿಗೆ ಕೊರೋನಾ ಪಾಸಿಟಿವ್: ಉಳಿದ ಸಚಿವರಿಗೆ ಹೆಚ್ಚಿದ ಆತಂಕ

ಮಧ್ಯಪ್ರದೇಶ ಸರ್ಕಾರದ ಸಂಪುಟದ ಸಚಿವರೊಬ್ಬರಿಗೆ, ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಸಚಿವ ಸಂಪುಟದಲ್ಲಿರುವ ಉಳಿದ ಸಚಿವರಲ್ಲಿ ಆತಂಕ ಹೆಚ್ಚಾಗುವಂತಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಭೋಪಾಲ್; ಮಧ್ಯಪ್ರದೇಶ ಸರ್ಕಾರದ ಸಂಪುಟದ ಸಚಿವರೊಬ್ಬರಿಗೆ, ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಸಚಿವ ಸಂಪುಟದಲ್ಲಿರುವ ಉಳಿದ ಸಚಿವರಲ್ಲಿ ಆತಂಕ ಹೆಚ್ಚಾಗುವಂತಾಗಿದೆ. 

ಪ್ರಸ್ತುತ ಕೊರೋನಾ ಪಾಸಿಟಿವ್ ಬಂದಿರುವ ಸಚಿವರು ನಿನ್ನೆಯಷ್ಟೇ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನಲೆಯಲ್ಲಿ ಉಳಿತ ಸಚಿವರಿಗೆ ಆತಂಕ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. 

ಇದಲ್ಲದೆ, ಮಧ್ಯಪ್ರದೇಶದ ರಾಜ್ಯಪಾಲರಾಗಿದ್ದ ಲಾಲ್'ಜಿ ಟಂಡನ್ ಅವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ. ಇದೀಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ. 

ಜುಲೈ.2ರಂದು ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಸೋಂಕಿತರ ಸಚಿವರು ಈ ಹಿಂದೆ ಪರೀಕ್ಷೆಗೊಳಗಾಗಿದ್ದರು. ಈ ವೇಳೆ ವೈದ್ಯಕೀಯ ವರದಿಯಲ್ಲಿ ಕೊರೋನಾ ಇಲ್ಲ ಎಂದು ಹೇಳಲಾಗಿತ್ತು. 

ಮಧ್ಯಪ್ರದೇಶದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 24,842ಕ್ಕೆ ಏರಿಕೆಯಾಗಿದ್ದು, ಬುಧವಾರ ಒಂದೇ ದಿನ 747 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, 770 ಮಂದಿ ಬಲಿಯಾಗಿದ್ದಾರೆ. ಪ್ರಮುಖವಾಗಿ ಭೋಪಾಲ್ ಒಂದರಲ್ಲಿಯೇ ನಿನ್ನೆ 215 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದರೊಂದಿಗೆ ಭೋಪಾಲ್ ನಲ್ಲಿ ಈ ವರೆಗೂ 4900 ಪ್ರಕರಣಗಳು ಪತ್ತೆಯಾಗಿದ್ದು 149 ಮಂದಿ ಬಲಿಯಾಗಿದ್ದಾರೆ. 
 
ರಾಜ್ಯದಲ್ಲಿ ಈ ವರೆಗೂ ನಾಲ್ವರು ಬಿಜೆಪಿ ಶಾಸಕರು, ಮೂವರು ಕಾಂಗ್ರೆಸ್ ಶಾಸಕರು, ಓರ್ವ ಮಾಜಿ ಸಚಿವರದಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com