ಕೊರೋನಾ ಎಫೆಕ್ಟ್: 85ರ ಇಳಿವಯಸ್ಸಿನಲ್ಲೂ ಹೊಟ್ಟೆ ಪಾಡಿಗಾಗಿ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶಿಸುತ್ತಿರುವ ಅಜ್ಜಿ, ವಿಡಿಯೋ ವೈರಲ್

ಹೊಟ್ಟೆಪಾಡು ಎಂತಹವರನ್ನೂ ಎಂತಹುದೇ ಪರಿಸ್ಥಿತಿಯಲ್ಲೂ ಹೋರಾಡುವಂತೆ ಮಾಡುತ್ತದೆ ಎಂಬುದಕ್ಕೆ ಈ 85ರ ಇಳಿವಯಸ್ಸಿನಲ್ಲೂ ಹೊಟ್ಟೆ ಪಾಡಿಗಾಗಿ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶಿಸುತ್ತಿರುವ ಈ ಅಜ್ಜಿಯೇ ಸಾಕ್ಷಿ.
ಸಮರ ಕಲೆ ಪ್ರದರ್ಶಿಸುತ್ತಿರುವ ಅಜ್ಜಿ ಶಾಂತಾಬಾಯಿ ಪವಾರ್
ಸಮರ ಕಲೆ ಪ್ರದರ್ಶಿಸುತ್ತಿರುವ ಅಜ್ಜಿ ಶಾಂತಾಬಾಯಿ ಪವಾರ್

ಪುಣೆ: ಹೊಟ್ಟೆಪಾಡು ಎಂತಹವರನ್ನೂ ಎಂತಹುದೇ ಪರಿಸ್ಥಿತಿಯಲ್ಲೂ ಹೋರಾಡುವಂತೆ ಮಾಡುತ್ತದೆ ಎಂಬುದಕ್ಕೆ ಈ 85ರ ಇಳಿವಯಸ್ಸಿನಲ್ಲೂ ಹೊಟ್ಟೆ ಪಾಡಿಗಾಗಿ ರಸ್ತೆಗಳಲ್ಲಿ 'ಸಮರಕಲೆ' ಪ್ರದರ್ಶಿಸುತ್ತಿರುವ ಈ ಅಜ್ಜಿಯೇ ಸಾಕ್ಷಿ.

ಹೌದು.. ದೇಶಾದ್ಯಂತ ಮಾರಕ ಕೊರೋನಾ ವೈರಸ್ ಹೆಮ್ಮಾರಿಗೆ ಭಯಪಟ್ಟು ಜನ ರಸ್ತಮೇಲೆ ಇಳಿಯಲು ಭಯಪಡುತ್ತಿದ್ದಾರೆ. ಯಾರಿಂದ ಹೇಗೆ ವೈರಸ್ ಸೋಂಕು ಹಬ್ಬುತ್ತದೆಯೋ ತಿಳಿಯುತ್ತಿಲ್ಲ. ಒಂದು ವೇಳೆ ಹಬ್ಬಿದರೂ ಈ ವೈರಸ್ ಗೆ ಸೂಕ್ತ ಲಸಿಕೆ ಸಿದ್ಧವಾಗಿಲ್ಲ ಎಂಬ ಭಯ ಬೇರೆ. ಇದೇ ಕಾರಣಕ್ಕೆ ಜನ ಸಾಮಾನ್ಯರು ಹೊರಗೆ ಬರಲು ಭಯ ಪಡುತ್ತಿರುವ ಈ ಸಂದರ್ಭದಲ್ಲಿ ಹೊಟ್ಟೆ ಪಾಡಿಗಾಗಿ 85 ವರ್ಷದ ಅಜ್ಜಿ ರಸ್ತೆಗಳಿದು 'ಸಮರಕಲೆ' ಪ್ರದರ್ಶಿಸುತ್ತಿದ್ದಾರೆ.

ಮಹಾರಾಷ್ಟ್ರದ ಪುಣೆ ಮೂಲದ ಶಾಂತಾಬಾಯಿ ಪವಾರ್ ಎಂಬ 85 ವರ್ಷದ ಅಜ್ಜಿ ರಸ್ತೆಗಳಿಂದು 'ಲಾಠಿಕಾಠಿ' ಸಮರ ಕಲೆ ಪ್ರದರ್ಶಿಸುತ್ತಿದ್ದಾರೆ. ಇದನ್ನು ನೋಡಿದ ದಾರಿ ಹೋಕರು ಅವರಿಗೆ ತಮ್ಮ ಕೈಲಾದಷ್ಟು ಹಣವನ್ನು ನೀಡುತ್ತಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಅಜ್ಜಿ ಶಾಂತಾಬಾಯಿ ಪವಾರ್ ಅವರು ನಾನು ನನ್ನ 8ನೇ ವಯಸ್ಸಿನಿಂದಲೇ ಈ  'ಲಾಠಿಕಾಠಿ' ಮಾಡುತ್ತಿದ್ದೇನೆ. ನಮ್ಮ ತಂದೆ ನನಗೆ ಈ ವಿದ್ಯೆಯನ್ನು ಹೇಳಿಕೊಟ್ಟಿದ್ದರು. ಕೊರೋನಾ ವೈರಸ್ ನಿಂದಾಗಿ ಜನ ಮನೆಯಲ್ಲೇ ಉಳಿಯುತ್ತಿದ್ದಾರೆ. ಹೀಗಾಗಿ ನಾನು ನನ್ನ ಪ್ರದರ್ಶನದ ಮೂಲಕ ಅವರನ್ನು ಎಚ್ಚರಿಸುತ್ತಿದ್ದೇನೆ. ಅವರ ಕೈಲಾದಷ್ಟು ಹಣವನ್ನು ಅವರು ನೀಡುತ್ತಾರೆ ಎಂದು ಹೇಳಿದ್ದಾರೆ.

ಇತ್ತ ಶಾಂತಾಬಾಯಿ ಅವರ ವಿಡಿಯೋ ವೈರಲ್ ಆಗುತ್ತಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಸೋನು ಸೂದ್ ಅವರು, ನನಗೆ ದಯವಿಟ್ಟು ಈ ಅಜ್ಜಿ ವಿವರ ನೀಡಿ. ನಾನು ಇವರೊಂದಿಗೆ ನಮ್ಮ ದೇಶದ ಹೆಣ್ಣುಮಕ್ಕಳಿಗಾಗಿ ಸ್ವರಕ್ಷಣೆ ತಂತ್ರಗಳ ತರಬೇತಿ ಶಾಲೆ ಆರಂಭಿಸಬೇಕು ಎಂದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com