100 ರೂಪಾಯಿ ಲಂಚಕ್ಕಾಗಿ ಬಾಲಕನ ಮೊಟ್ಟೆ ಗಾಡಿ ಉರುಳಿಸಿದ ಅಧಿಕಾರಿಗಳು

ಕೇವಲ 100 ರೂಪಾಯಿ ಲಂಚಕ್ಕಾಗಿ ಅಧಿಕಾರಿಗಳೇ ಮೊಟ್ಟೆ ಮಾರಾಟಗಾರನ ಗಾಡಿಯನ್ನೇ ಉರುಳಿಸಿ ಕಿಡಿಗೇಡಿ ಕೃತ್ಯವೆಸಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದನ್ನು ಎನ್ ಡಿ ಟಿವಿ ವರದಿ ಮಾಡಿದೆ. 
100 ರೂಪಾಯಿ ಲಂಚಕ್ಕಾಗಿ ಬಾಲಕನ ಮೊಟ್ಟೆ ಗಾಡಿ ಉರುಳಿಸಿದ ಅಧಿಕಾರಿಗಳು
100 ರೂಪಾಯಿ ಲಂಚಕ್ಕಾಗಿ ಬಾಲಕನ ಮೊಟ್ಟೆ ಗಾಡಿ ಉರುಳಿಸಿದ ಅಧಿಕಾರಿಗಳು

ಇಂದೋರ್: ಕೇವಲ 100 ರೂಪಾಯಿ ಲಂಚಕ್ಕಾಗಿ ಅಧಿಕಾರಿಗಳೇ ಮೊಟ್ಟೆ ಮಾರಾಟಗಾರನ ಗಾಡಿಯನ್ನೇ ಉರುಳಿಸಿ ಕಿಡಿಗೇಡಿ ಕೃತ್ಯವೆಸಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದನ್ನು ಎನ್ ಡಿ ಟಿವಿ ವರದಿ ಮಾಡಿದೆ. 

ಮೊಟ್ಟೆ ಗಾಡಿಯನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ 14 ವರ್ಷದ ಬಾಲಕನಿಗೆ 100 ರೂಪಾಯಿ ಲಂಚ ಕೊಡು ಇಲ್ಲದೇ ಇದ್ದಲ್ಲಿ ಗಾಡಿ ತೆಗೆ ಎಂದು ಅಧಿಕಾರಿಗಳೇ ಧಮ್ಕಿ ಹಾಕಿದ್ದರು. ಸ್ವತಃ ಬಾಲಕ ಈ ಅಧಿಕಾರಿಗಳ ವರ್ತನೆ ಬಗ್ಗೆ ಆರೋಪಿಸಿದ್ದು ಈ ವಿಡಿಯೋ ಈಗ ವೈರಲ್ ಆಗತೊಡಗಿದೆ.

ಕೊರೋನಾದ ನಡುವೆ ಎಂದಿನ ವ್ಯಾಪಾರವೇ ಮಂಕಾಗಿತ್ತು. ಈಗ ಅಧಿಕಾರಿಗಳು ತನ್ನ ಗಾಡಿಯಲ್ಲಿದ್ದ ಸರಕನ್ನು ನಾಶ ಮಾಡಿರುವುದರಿಂದ ತನ್ನ ಮೇಲೆ ಹೆಚ್ಚಿನ ಹಣಕಾಸು ಹೊರೆ ಬೀಳಲಿದೆ ಎಂದು ಬಾಲಕ ಕಣ್ಣೀರಿಟ್ಟಿದ್ದಾನೆ. ನಗರಸಭೆ ಅಧಿಕಾರಿಗಳೆಂದು ಹೇಳಲಾಗುತ್ತಿರುವ ವ್ಯಕ್ತಿಗಳು ಲಂಚ ನೀಡದೇ ಇರುವುದಕ್ಕೆ ಈ ಬಾಲಕನ ಮೊಟ್ಟೆ ಗಾಡಿಯನ್ನು ಉರುಳಿಸುತ್ತಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com