ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶಿಲಾನ್ಯಾಸ(ಭೂಮಿ ಪೂಜೆ)ವನ್ನು ತಡೆಯುವಂತೆ ಕೋರಿ ಸಲ್ಲಿಸಿಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ರಾಮಮಂದಿರ
ರಾಮಮಂದಿರ

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶಿಲಾನ್ಯಾಸ(ಭೂಮಿ ಪೂಜೆ)ವನ್ನು ತಡೆಯುವಂತೆ ಕೋರಿ ಸಲ್ಲಿಸಿಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿರುವ ಈ ಕಾರ್ಯಕ್ರಮವು ಆಗಸ್ಟ್ 5 ರಂದು ನಡೆಯಲಿದ್ದು ಇದನ್ನು ತಡೆಯುವಂತೆ ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಪಿಐಎಲ್ ಸಲ್ಲಿಸಿದ್ದರು. 

'ಭೂಮಿ ಪೂಜೆ' ಕೇಂದ್ರ ಸರ್ಕಾರ ಸೂಚಿಸಿರುವ ಕೋವಿಡ್ -19 ಪ್ರೋಟೋಕಾಲ್ ಉಲ್ಲಂಘನೆಯಾಗಿದೆ ಎಂದು ಸಾಕೇತ್ ಗೋಖಲೆ ಅವರು ತಮ್ಮ ಅರ್ಜಿನಲ್ಲಿ ನಮೂದಿಸಿದ್ದಾರೆ. 

ಕೋವಿಡ್ -19 ವಿರುದ್ಧದ ಹೋರಾಟದ ಮಾರ್ಗಸೂಚಿಯಂತೆ 'ಸಾಮಾಜಿಕ ಅಂತರ ಕಾಯ್ದೆಕೊಳ್ಳಬೇಕಿದೆ. ಆದರೆ ಆಗಸ್ಟ್ 5ರಂದು ಒಂದೇ ಸ್ಥಳದಲ್ಲಿ ಸುಮಾರು ಮುನ್ನೂರು ಜನರನ್ನು ಆಹ್ವಾನಿಸಲಾಗಿದೆ. ಈ ಮೂಲಕ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರವು ಈ ಮಾರ್ಗಸೂಚಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದ್ದಾರೆ. 

ಸಾರ್ವಜನಿಕ ಸಭೆಯನ್ನು ಆಕರ್ಷಿಸುವ ಇಂತಹ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಅನುಮತಿಸಬಾರದು ಎಂದು ಅರ್ಜಿದಾರರು ಹೇಳಿದ್ದರು.

ಈ ಅರ್ಜಿ ಸಂಬಂಧ ಹೈಕೋರ್ಟ್, ಸಂಘಟಕರು ಮತ್ತು ಉತ್ತರ ಪ್ರದೇಶದ ಸರ್ಕಾರವು ಸಾಮಾಜಿಕ ಮತ್ತು ದೈಹಿಕ ದೂರಕ್ಕೆ ಅನ್ವಯವಾಗುವ ಎಲ್ಲಾ ಪ್ರೋಟೋಕಾಲ್ ಗಳನ್ನು ಅನುಸರಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಹೀಗಾಗಿ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಕಾರಣವಿಲ್ಲ ಆದ್ದರಿಂದ ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com