ಅರೆನಗ್ನ ಪೇಂಟಿಂಗ್: ಹೋರಾಟಗಾರ್ತಿ ರೆಹಾನಾ ಫಾತಿಮಾ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಕೇರಳ ಹೈ ಕೋರ್ಟ್

ಅರೆನಗ್ನವಾಗಿ ಮಕ್ಕಳಿಂದ ದೇಹದ ಮೇಲೆ ಪೇಂಟಿಂಗ್ ಮಾಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆ ವಿವಾದ ಕು'ಖ್ಯಾತಿ'ಯ ಹೋರಾಟಗಾರ್ತಿ ರೆಹಾನಾ ಫಾತಿಮಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈ ಕೋರ್ಟ್ ತಿರಸ್ಕರಿಸಿದೆ.
ರೆಹಾನಾ ಫಾತಿಮಾ (ಸಂಗ್ರಹ ಚಿತ್ರ)
ರೆಹಾನಾ ಫಾತಿಮಾ (ಸಂಗ್ರಹ ಚಿತ್ರ)

ಕೊಚ್ಚಿನ್: ಅರೆನಗ್ನವಾಗಿ ಮಕ್ಕಳಿಂದ ದೇಹದ ಮೇಲೆ ಪೇಂಟಿಂಗ್ ಮಾಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆ ವಿವಾದ ಕು'ಖ್ಯಾತಿ'ಯ ಹೋರಾಟಗಾರ್ತಿ ರೆಹಾನಾ ಫಾತಿಮಾರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈ ಕೋರ್ಟ್ ತಿರಸ್ಕರಿಸಿದೆ.

ಮಕ್ಕಳ ಮುಂದೆ ಅರೆನಗ್ನವಾಗಿ ಪೇಂಟಿಂಗ್‌ ಬಿಡಿಸಲು ನೆರವಾಗಿದ್ದ ಫಾತಿಮಾ ವಿರುದ್ಧ ಕೇರಳ ಪೊಲೀಸರು ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದ ರೆಹಾನಾ ಫಾತಿಮಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿ ಕೇರಳ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.

ಈ ಹಿಂದೆ ಇದೇ ವಿಡಿಯೋ ವಿಚಾರವಾಗಿ ಬಿಎಸ್ಎನ್ಎಲ್ ಗೆ ರೆಹಾನಾ ಫಾತಿಮಾಳಿಂದ ಮುಜುಗರ ಉಂಟಾಗಿತ್ತು. ಪೊಲೀಸರು ಆಕೆಯ ಸರ್ಕಾರಿ ನಿವಾಸದ ಮೇಲೆ ರೇಡ್‌ ಮಾಡಿದ್ದರಿಂದ ಹಾಗೂ ನಿಮ್ಮ ಮೇಲಿನ ಆರೋಪಗಳಿಂದ ಬಿಎಸ್‌ಎನ್‌ಎಲ್‌ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಮುಂದಿನ 30 ದಿನಗಳಲ್ಲಿ ಕೊಚ್ಚಿಯಲ್ಲಿನ ಸರ್ಕಾರಿ ನಿವಾಸ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com