ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ಸ್ಮಾರ್ಟ್ ಫೋನ್ ಖರೀದಿಸಲು ಜೀವನಾಧಾರವಾಗಿದ್ದ ಹಸು ಮಾರಾಟ

ಬಡ ವ್ಯಕ್ತಿಯೋರ್ವ ತನ್ನ ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ತನ್ನ ಕುಟುಂಬದ ಜೀವನಾಧಾರವಾಗಿದ್ದ ಹಸುವನ್ನು ಮಾರಾಟ ಮಾಡಿ ಸ್ಮಾರ್ಟ್ ಫೋನ್ ಖರೀದಿಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. 
ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ಸ್ಮಾರ್ಟ್ ಫೋನ್ ಖರೀದಿಸಲು ಜೀವನಾಧಾರವಾಗಿದ್ದ ಹಸು ಮಾರಾಟ
ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ಸ್ಮಾರ್ಟ್ ಫೋನ್ ಖರೀದಿಸಲು ಜೀವನಾಧಾರವಾಗಿದ್ದ ಹಸು ಮಾರಾಟ

ನವದೆಹಲಿ: ಬಡ ವ್ಯಕ್ತಿಯೋರ್ವ ತನ್ನ ಮಕ್ಕಳ ಆನ್ ಲೈನ್ ಶಿಕ್ಷಣಕ್ಕಾಗಿ ತನ್ನ ಕುಟುಂಬದ ಜೀವನಾಧಾರವಾಗಿದ್ದ ಹಸುವನ್ನು ಮಾರಾಟ ಮಾಡಿ ಸ್ಮಾರ್ಟ್ ಫೋನ್ ಖರೀದಿಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. 

ಇಬ್ಬರು ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್ ಅಗತ್ಯವಿತ್ತು. ಆದ್ದರಿಂದ 6,000 ರೂಪಾಯಿಗಳಿಗೆ ಹಸುವನ್ನು ಮಾರಾಟ ಮಾಡಿದ್ದಾರೆ ಕುಲ್ದೀಪ್ ಕುಮಾರ್.

ಕುಲ್ದೀಪ್ ಕುಮಾರ್ ಜ್ವಾಲಾಮುಖಿಯ ಗುಮ್ಮೀರ್ ಗ್ರಾಮದ ನಿವಾಸಿಯಾಗಿದ್ದು, ಮಾರ್ಚ್ ತಿಂಗಳಿಂದ ಶಾಲೆಗಳು ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿವೆ. ಕುಲ್ದೀಪ್ ಕುಮಾರ್ ಅವರ ಮಕ್ಕಳಾದ ಅನ್ನು, ದಿಪ್ಪು ಅನುಕ್ರಮವಾಗಿ 4 ಹಾಗೂ 2 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

ಶಾಲೆಗಳು ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸುತ್ತಿದ್ದಂತೆಯೇ ಕುಲ್ದೀಪ್ ಮೇಲೆ ಸ್ಮಾರ್ಟ್ ಫೋನ್ ಖರೀದಿಗೆ ಒತ್ತಡ ಉಂತಾಗಿತ್ತು. ಸತತ ಒಂದು ತಿಂಗಳ ಕಾಲ ಸ್ಮಾರ್ಟ್ ಫೋನ್ ಖರೀದಿಗೆ 6,000 ರೂಪಾಯಿ ಸಾಲ ಪಡೆಯುವುದಕ್ಕೆ ಕುಲ್ದೀಪ್ ಸುತ್ತಿದ್ದಾರೆ. ಆದರೆ ಎಲ್ಲಿಯೂ ಸಾಲ ದೊರೆಯಲಿಲ್ಲ. ಯಾರೂ ಸಹಾಯಕ್ಕೂ ಮುಂದಾಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ತನ್ನ ಜೀವನಾಧಾರವಾಗಿದ್ದ ಹಸುವನ್ನು 6,000 ರೂಪಾಯಿಗಳಿಗೆ ಮಾರಾಟ ಮಾಡಿ ಸ್ಮಾರ್ಟ್ ಫೋನ್ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಮಣ್ಣಿನ ಮನೆಯಲ್ಲಿ ವಾಸಿಸುತ್ತಿರುವ ಕುಲ್ದೀಪ್ ಬಳಿ ಬಿಪಿಎಲ್ ಕಾರ್ಡ್ ಸಹ ಇಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com