ಕೋವಿಡ್ ಸಂಕಷ್ಟವನ್ನು ಲಾಭವಾಗಿ ಪರಿವರ್ತಿಸಿಕೊಂಡಿದೆ, ಇದು ಬಡಜನ ವಿರೋಧಿ ಸರ್ಕಾರ: ರಾಹುಲ್‌ ಟೀಕೆ

ಕೇಂದ್ರ ಸರ್ಕಾರದ ವಿರುದ್ಧ ಹೊಸ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಾಗರಿಕರ ವೆಚ್ವದಲ್ಲಿ ಸರ್ಕಾರ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಹೊಸ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ, ಕೋವಿಡ್‌ ಸಂಕಷ್ಟದ ಸಮಯದಲ್ಲಿ ನಾಗರಿಕರ ವೆಚ್ವದಲ್ಲಿ ಸರ್ಕಾರ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, "ದೇಶದಲ್ಲಿ ಆಗಸದಲ್ಲಿ ತುಂಬಿರುವ ಮೋಡಗಳಂತೆ ಕಾಯಿಲೆಗಳಿವೆ, ಜನರು ಕಷ್ಟದಲ್ಲಿದ್ದಾರೆ. ಆದರೆ, ಬಡಜನ ವಿರೋಧಿ ಸರ್ಕಾರ ಈ ಸಂಕಷ್ಟವನ್ನು ಲಾಭ ಮಾಡಿಕೊಳ್ಳುವ ಅವಕಾಶವನ್ನಾಗಿ ಬದಲಾಯಿಸಿ ಆದಾಯ ಪಡೆದುಕೊಳ್ಳುತ್ತಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಶ್ರಮಿಕ ವಿಶೇಷ ರೈಲುಗಳ ಮೂಲಕ ರೈಲ್ವೆ 428 ಕೋಟಿ ರೂ. ಆದಾಯ ಗಳಿಸಿದೆ ಎಂಬ ವರದಿಯನ್ನು ರಾಹುಲ್‌ ತಮ್ಮ ಟ್ವಿಟರ್‌ ಖಾತೆಯೊಂದಿಗೆ ಲಗತ್ತಿಸಿದ್ದಾರೆ. 

ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷ ಮೊದಲಿನಿಂದಲೂ ಕೇಂದ್ರ ಸರ್ಕಾರ ಕೋವಿಡ್‌ ದುರಂತವನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com