ನೆರೆಮನೆಯ ಬಾಗಿಲ ಬಳಿ ಮೂತ್ರ ವಿಸರ್ಜನೆ: ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ದೂರು ದಾಖಲು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಷ್ಟ್ರೀಯ ಅಧ್ಯಕ್ಷ ಡಾ. ಡಾ.ಸುಬ್ಬಯ್ಯ ಷಣ್ಮುಗಂ ವಿರುದ್ಧಶನಿವಾರ ಕೇಸ್ ವೊಂದು ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಷ್ಟ್ರೀಯ ಅಧ್ಯಕ್ಷ ಡಾ. ಡಾ.ಸುಬ್ಬಯ್ಯ ಷಣ್ಮುಗಂ ವಿರುದ್ಧ
ಶನಿವಾರ ಕೇಸ್ ವೊಂದು ದಾಖಲಾಗಿದೆ.

ಮನೆ ಬಾಗಿಲ ಬಳಿ ಮೂತ್ರ ವಿಸರ್ಜನೆ ಮಾಡಿ, ಬಳಸಿದ ಮಾಸ್ಕ್ ಗಳನ್ನು ಎಸೆಯುವ ಮೂಲಕ ಕಿರುಕುಳ ನೀಡಲಾಗುತ್ತಿದೆ
ಎಂಬ ನೆರೆಮನೆಯ 62 ವರ್ಷದ ವೃದ್ಧೆಯೊಬ್ಬರು ಡಾ. ಸುಬ್ಬಯ್ಯ ಷಣ್ಮುಗಂ ವಿರುದ್ಧ ಆರೋಪಿಸಿದ ಬಳಿಕ ಆಡಂಬಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಹುಶಃ ಡಾ. ಸುಬ್ಬಯ್ಯ ರೀತಿಯ ನೀಲಿ ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬರು ಮನೆ ಬಾಗಿಲ ಬಳಿ ಮೂತ್ರ ವಿಸರ್ಜಿಸುವ
ಪೋಟೋವಿರುವ ಸಿಸಿಟಿವಿ ಪೂಟೇಜ್ ನ್ನು ಆ ಮಹಿಳೆ ಪೊಲೀಸರಿಗೆ ಸಲ್ಲಿಸಿದ್ದಾರೆ.

ಬಳಸಿದ ಸರ್ಜಿಕಲ್ ಮಾಸ್ಕ್ ಗಳು, ತ್ಯಾಜಗಳನ್ನು ಮನೆ ಬಾಗಿಲಿಗೆ ಎಸೆಯಲಾಗುತ್ತಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜುಲೈ 5ರಂದು ಮನೆ ಬಾಗಿಲ ಬಳಿ ಆಕೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಜುಲೈ 10 ರಾತ್ರಿ 9.11ರ ಸುಮಾರಿನಲ್ಲಿ ವ್ಯಕ್ತಿಯೊಬ್ಬರು ಆಕೆಯ ಮನೆಯ ಬಾಗಿಲ ಬಳಿ ನಿಂತು ಮೂತ್ರ ವಿಸರ್ಜನೆ ಮಾಡುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಡಾ. ಸುಬ್ಬಯ್ಯ ಷಣ್ಮುಗಂ  ಸರ್ಕಾರಿ ರಾಯಪೆಟ್ಟ ಆಸ್ಪತ್ರೆ ಮತ್ತು ಕಿಲ್ಪಾಕ್ ವೈದ್ಯಕೀಯ ಕಾಲೇಜಿನ ಗ್ರಂಥಿ ವಿಜ್ಞಾನ ವಿಭಾಗದ
ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆಗಿದ್ದಾರೆ. ಅಲ್ಲದೇ ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಘಟನೆ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಐಪಿಸಿ ಸೆಕ್ಷನ್ 271, 427 ಮತ್ತು ತಮಿಳುನಾಡು 
ಮಹಿಳೆಯರ  ಮೇಲಿನ ಕಿರುಕುಳ ತಡೆ ಕಾಯ್ದೆ ಅನುಸಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com