ಪೂರ್ವ ಲಡಾಖ್‌ನಿಂದ ಸೈನ್ಯವನ್ನು 'ತ್ವರಿತ ಮತ್ತು ಸಂಪೂರ್ಣ' ಹಿಂತೆಗೆತಕ್ಕೆ ಭಾರತ, ಚೀನಾ ಒಪ್ಪಿಗೆ

ಪೂರ್ವ ಲಡಾಖ್‌ನ ಘರ್ಷಣೆಯ ಸ್ಥಳಗಳಿಂದ ಸೈನ್ಯವನ್ನು "ತ್ವರಿತ ಮತ್ತು ಸಂಪೂರ್ಣ" ವಿಸರ್ಜನೆಗೆ ಭಾರತ ಮತ್ತು ಚೀನಾ ಶುಕ್ರವಾರ ಒಪ್ಪಿಗೆ ಸೂಚಿಸಿದ್ದು, ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಅಭಿವೃದ್ಧಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆ ಅಗತ್ಯವಾಗಿದೆ.
ಚೀನಾ-ಭಾರತ ಯೋಧರು
ಚೀನಾ-ಭಾರತ ಯೋಧರು

ನವದೆಹಲಿ: ಪೂರ್ವ ಲಡಾಖ್‌ನ ಘರ್ಷಣೆಯ ಸ್ಥಳಗಳಿಂದ ಸೈನ್ಯವನ್ನು "ತ್ವರಿತ ಮತ್ತು ಸಂಪೂರ್ಣ" ವಿಸರ್ಜನೆಗೆ ಭಾರತ ಮತ್ತು ಚೀನಾ ಶುಕ್ರವಾರ ಒಪ್ಪಿಗೆ ಸೂಚಿಸಿದ್ದು, ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಅಭಿವೃದ್ಧಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆ ಅಗತ್ಯವಾಗಿದೆ.

ಗಡಿ ವ್ಯವಹಾರಗಳ ಕುರಿತು ವರ್ಕಿಂಗ್ ಮೆಕ್ಯಾನಿಸಮ್ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಷನ್ (ಡಬ್ಲ್ಯುಎಂಸಿಸಿ) ಚೌಕಟ್ಟಿನಡಿಯಲ್ಲಿ ಹೊಸ ಸುತ್ತಿನ ರಾಜತಾಂತ್ರಿಕ ಮಾತುಕತೆಯ ಸಂದರ್ಭದಲ್ಲಿ ಉಭಯ ದೇಶಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ. 

ಜುಲೈ 14ರಂದು ನಡೆದ ಕೊನೆಯ ಸುತ್ತಿನ ಮ್ಯಾರಥಾನ್ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯ ನಂತರ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ನಿರೀಕ್ಷೆಯಂತೆ ಮುಂದುವರಿಯಲಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದೀಗ ಮತ್ತೊಂದು ಸುತ್ತಿನ ಮಾತುಕತೆ ನಡೆದಿವೆ.

ವಿದೇಶಾಂಗ ಸಚಿವಾಲಯವು(ಎಂಇಎ) ಶುಕ್ರವಾರ ಮಾತುಕತೆಗೆ ಒಪ್ಪಿಕೊಂಡಿದ್ದು, ತಮ್ಮ ಹಿರಿಯ ಸೇನಾ ಕಮಾಂಡರ್‌ಗಳ ಮತ್ತೊಂದು ಸಭೆ ಶೀಘ್ರದಲ್ಲೇ ನಡೆಯಲಿದ್ದು, ಸಂಪೂರ್ಣ ನಿಷ್ಕ್ರಿಯತೆಯನ್ನು "ಶೀಘ್ರವಾಗಿ" ಖಚಿತಪಡಿಸಿಕೊಳ್ಳಲು ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು.

"ದ್ವಿಪಕ್ಷೀಯ ಒಪ್ಪಂದ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ನೈಜ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಸೈನಿಕರ ತ್ವರಿತ ಮತ್ತು ಸಂಪೂರ್ಣ ನಿಷ್ಕ್ರಿಯತೆ, ಭಾರತ-ಚೀನಾ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳುವುದು, ಒಟ್ಟಾರೆ ಸುಗಮತೆಗೆ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆ ಅಗತ್ಯವೆಂದು ಒಪ್ಪಿಕೊಂಡರು ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜುಲೈ 5 ರಂದು ಸುಮಾರು ಎರಡು ಗಂಟೆಗಳ ಕಾಲ ದೂರವಾಣಿ ಸಂಭಾಷಣೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com