ರಾಜಧಾನಿ ದೆಹಲಿಯಲ್ಲಿ ತಗ್ಗಿದ ಕೊರೋನಾ ಅಬ್ಬರ, ಇಂದು 1075 ಹೊಸ ಪಾಸಿಟಿವ್ ಕೇಸ್ ದಾಖಲು

ರಾಷ್ಟ್ರ ರಾಜಧಾನಿ ದೆಹಲಿ ಕೊರೋನಾವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವತ್ತ ದಾಪುಗಾಲಿರಿಸಿದ್ದು, ದೆಹಲಿಯಲ್ಲಿ ಇಂದು ಹೊಸದಾಗಿ 1075 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.
ಕೊರೋನಾ ವೈರಸ್
ಕೊರೋನಾ ವೈರಸ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಕೊರೋನಾವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವತ್ತ ದಾಪುಗಾಲಿರಿಸಿದ್ದು, ದೆಹಲಿಯಲ್ಲಿ ಇಂದು ಹೊಸದಾಗಿ 1075 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

ಅಂತೆಯೇ ದೆಹಲಿಯಲ್ಲಿ ತಾರಕಕ್ಕೇರಿದ್ದ ಕೊರೋನಾ ಸೋಂಕಿತರ ಮರಣ ಸಂಖ್ಯೆ ಕೂಡ ಗಣನೀಯವಾಗಿ ಕುಸಿದಿದ್ದು, ಇಂದು ದೆಹಲಿಯಲ್ಲಿ 21 ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ದೆಹಲಿಯಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3827ಕ್ಕೆ ಏರಿಕೆಯಾಗಿದೆ.

ಕೊರೋನಾ ಗುಣಮುಖರ ಪ್ರಮಾಣ ಶೇ.87ಕ್ಕೆ ಏರಿಕೆ
ಇನ್ನು ಕೊರೋನಾ ಸೋಂಕಿತರ ಗುಣಮುಖರ ಪ್ರಮಾಣ ಕೂಡ ಗಣನೀಯವಾಗಿ ಏರಿಕೆಯಾಗಿದ್ದು, ದೆಹಲಿಯಲ್ಲಿ ಪ್ರಸ್ತುತ ಗುಣಮುಖರ ಪ್ರಮಾಣ ಶೇ.87ರಷ್ಟಿದೆ. ಈ ಬಗ್ಗೆ ದೆಹಲಿ ಆರೋಗ್ಯ ಇಲಾಖೆ ಇಂದು ಮಾಹಿತಿ ನೀಡಿದ್ದು, ದೆಹಲಿಯಲ್ಲಿ ಭಾನುವಾರ ಕೊರೋನಾ ಸೋಂಕಿತರ ಗುಣಮುಖರ ಪ್ರಮಾಣ ಶೇ.87.29ಕ್ಕೆ  ಏರಿಕೆಯಾಗಿದೆ. ದೆಹಲಿಯಲ್ಲಿ ಇಂದು 1075 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ದೆಹಲಿಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,30,606ಕ್ಕೆ ಏರಿಕೆಯಾಗಿದೆ. ಅಂತೆಯೇ ದೇಹಲಿಯಲ್ಲಿ ಇಂದು ಒಂದೇ ದಿನ 21 ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೆಹಲಿಯಲ್ಲಿ ಕೊರೋನಾ ಸಾವಿನ  ಸಂಖ್ಯೆ 3827 ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಒಟ್ಟಾರೆ 1,30,606 ಪ್ರಕರಣಗಳ ಪೈಕಿ ಈ ವರೆಗೂ 87.29 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ 1,14,875 ಸೋಂಕಿತರು ಗುಣಮುಖರಾಗಿದ್ದು, 11904 ಸೋಂಕಿತರು ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com