ಬಿಹಾರ: ಲಾಕ್ ಡೌನ್ ಸಮಯದಲ್ಲಿ ಆಟೋ ಓಡಿಸಿ ಕುಟುಂಬಕ್ಕೆ ಹೆಗಲಾಗಿರುವ 14 ವರ್ಷದ ಬಾಲಕಿ

ಲಾಕ್ ಡೌನ್ ಸಮಯದಲ್ಲಿ ಆಟೋ ರಿಕ್ಷಾ ಓಡಿಸಿ ತನ್ನ ಕುಟುಂಬದ ಆರ್ಥಿಕ ಅಗತ್ಯಗಳನ್ನು ಬಿಹಾರದ ಸಸರಮ್ ಜಿಲ್ಲೆಯ 14 ವರ್ಷದ ಬಾಲಕಿಯೊಬ್ಬಳು ಈಡೇರಿಸುತ್ತಿದ್ದಾಳೆ.

Published: 27th July 2020 01:25 PM  |   Last Updated: 27th July 2020 01:25 PM   |  A+A-


Nandini Kumari says women prefer to hire her for rickshaw rides.

ಆಟೋ ಚಲಾಯಿಸುತ್ತಿರುವ ನಂದಿನಿ

Posted By : Sumana Upadhyaya
Source : The New Indian Express

ಪಾಟ್ನಾ: ಲಾಕ್ ಡೌನ್ ಸಮಯದಲ್ಲಿ ಆಟೋ ರಿಕ್ಷಾ ಓಡಿಸಿ ತನ್ನ ಕುಟುಂಬದ ಆರ್ಥಿಕ ಅಗತ್ಯಗಳನ್ನು ಬಿಹಾರದ ಸಸರಮ್ ಜಿಲ್ಲೆಯ 14 ವರ್ಷದ ಬಾಲಕಿಯೊಬ್ಬಳು ಈಡೇರಿಸುತ್ತಿದ್ದಾಳೆ.

ತಂದೆಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದಿರುವಾಗ ಬಾಡಿಗೆ ರಿಕ್ಷಾ ಚಲಾಯಿಸಿ ಲಾಕ್ ಡೌನ್ ಸಮಯದಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾಳೆ ನಂದಿನಿ ಕುಮಾರಿ.

ಲಾಕ್ ಡೌನ್ ಸಮಯದಲ್ಲಿ ಪೊಲೀಸರಿಗೆ ಹೆದರಿ ನನ್ನ ತಂದೆ ರಿಕ್ಷಾ ಚಲಾಯಿಸುತ್ತಿರಲಿಲ್ಲ. ಹೀಗಾಗಿ ಕಳೆದ ಒಂದು ತಿಂಗಳಿನಿಂದ ನಾನು ಆಟೋ ಓಡಿಸುತ್ತಿದ್ದೇನೆ ಎನ್ನುತ್ತಾಳೆ ನಂದಿನಿ. ಆಕೆಯ ತಂದೆ ಈಗ ಕೂಲಿ ಕೆಲಸ ಮಾಡಲು ಹೋಗುತ್ತಿದ್ದಾರೆ.

ದಿನಕ್ಕೆ 12 ಗಂಟೆ ಆಟೋ ಚಲಾಯಿಸಿ 100ರಿಂದ 200 ರೂಪಾಯಿಯಷ್ಟು ಗಳಿಸುತ್ತಾಳೆ. ಅಷ್ಟೊಂದು ಓದಿಲ್ಲದಿದ್ದರೂ ಆಟೋ ಓಡಿಸುವಾಗ ನಂದಿನಿ ಸಂಚಾರ ನಿಯಮವನ್ನು ಪಾಲಿಸುತ್ತಾಳೆ. ನಿಯಮ ಪಾಲಿಸಿ ಜಾಗರೂಕತೆಯಿಂದ ಓಡಿಸುವುದರಿಂದ ಪ್ರಯಾಣಿಕರಿಗೆ ಭಯವಾಗುವುದಿಲ್ಲ.

ಕುಟುಂಬ ಕಷ್ಟದಲ್ಲಿರುವಾಗ ಹೆಣ್ಣು ಮಕ್ಕಳು ಯಾವ ರೀತಿ ಹೆಗಲು ನೀಡಬಹುದು ಎಂಬುದಕ್ಕೆ ನಂದಿನಿ ಉತ್ತಮ ಉದಾಹರಣೆ ಎನ್ನುತ್ತಾರೆ ಆಕೆಯ ಆಟೋದಲ್ಲಿ ಓಡಾಡುತ್ತಿರುವ ನಿರ್ಮಲಾ ದೇವಿ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp