ಫ್ರಾನ್ಸ್'ನಿಂದ ಭಾರತಕ್ಕೆ ಹೊರಟ 5 ರಫೇಲ್ ಯುದ್ಧ ವಿಮಾನಗಳು: ಜು.29ಕ್ಕೆ ಅಂಬಾಲ ವಾಯುನೆಲೆಗೆ ಆಗಮನ

ಮೊದಲ ಹಂತಹ 5 ರಫೇಲ್ ಯುದ್ಧ ವಿಮಾನಗಳು ಸೋಮವಾರ ಫ್ರಾನ್ಸ್'ನಿಂದ ಭಾರತಕ್ಕೆ ಆಗಮಿಸಲಿದ್ದು, ಜು.29ರಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. 
ಭಾರತಕ್ಕೆ ಹೊರಟ ರಫೇಲ್ ಯುದ್ಧ ವಿಮಾನ
ಭಾರತಕ್ಕೆ ಹೊರಟ ರಫೇಲ್ ಯುದ್ಧ ವಿಮಾನ

ಪ್ಯಾರಿಸ್: ಮೊದಲ ಹಂತಹ 5 ರಫೇಲ್ ಯುದ್ಧ ವಿಮಾನಗಳು ಸೋಮವಾರ ಫ್ರಾನ್ಸ್'ನಿಂದ ಭಾರತಕ್ಕೆ ಆಗಮಿಸಲಿದ್ದು, ಜು.29ರಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ. 

ಭಾರತಕ್ಕೆ ಆಗಮಿಸಲಿರುವ ಈ ಐದು ಯುದ್ಧ ವಿಮಾನಗಳು ಯುಎಇಯಲ್ಲಿರುವ ಫ್ರಾನ್ಸ್'ನ ವಾಯುನೆಲೆಯಲ್ಲಿ ಇಂಧನ ತುಂಬಿಸಿಕೊಳ್ಳಲಿವೆ. ಬಹುತೇಕ ಜು.29 ರಂದು ಹರಿಯಾಣದ ಅಂಬಾಲ ವಾಯುನೆಲೆಗೆ ವಿಮಾನಗಳು ಆಗಮಿಸುವ ನಿರೀಕ್ಷೆಗಳಿದ್ದು, ಅಂದು ಅಧಿಕೃತವಾಗಿ ಭಾರತೀಯ ವಾಯುಪಡೆಯನ್ನು ಸೇರ್ಪಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. 

ಈ ಕುರಿತು ಟ್ವೀಟ್ ಮಾಡಿರುವ ಫ್ರಾನ್ಸ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಭಾರತದ ವಾಯುಪಡೆ ಸೇರಲಿರುವ ಮೊದಲ ಹಂತದ 5 ರಫೇಲ್ ಯುದ್ಧ ವಿಮಾನಗಳು ಇಂದು ಫ್ರಾನ್ಸ್'ನಿಂದ ಭಾರತಕ್ಕೆ ಹೊರಡಲಿವೆ ಎಂದು ಹೇಳಿದೆ. 

2016ರಲ್ಲಿ ಒಟ್ಟು 36 ಯುದ್ಧ ವಿಮಾನಗಳ ಖರೀದಿಗೆ ಭಾರತ ಫ್ರಾನ್ಸ್'ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಮೊದಲ ಭಾಗವಾಗಿ 5 ಯುದ್ಧ ವಿಮಾನಗಳು ಭಾರತಕ್ಕೆ ರವಾನೆಯಾಗುತ್ತಿವೆ. ಯುದ್ಧ ವಿಮಾನಗಳು ಭಾರತಕ್ಕೆ ಹೊರಡುವುದಕ್ಕೂ ಮುನ್ನ ಫ್ರಾನ್ಸ್'ನ ಭಾರತ ರಾಯಭಾರಿ, ಭಾರತೀಯ ಪೈಲಟ್'ಗಳೊಂದಿಗೆ ಸಮಾಲೋಚನೆ ನಡೆಸಿತು ಎಂದು ವರದಿಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com