ವಾಣಿಜ್ಯ, ಕಲಾ ವಿಭಾಗದವರಿಗೂ 'ಗೇಟ್' ಓಪನ್!

ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಬರೆಯಬೇಕಾದ 'ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್'  (ಗೇಟ್) ನಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಬರೆಯಬೇಕಾದ 'ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್'  (ಗೇಟ್) ನಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. 

ಮುಂದಿನ ವರ್ಷದಿಂದ ಗೇಟ್ ನಲ್ಲಿ ಮಾನವಿಕ ವಿಷಯಗಳನ್ನೂ ಸೇರಿಸಲಾಗಿದೆ. ಇದರಿಂದಾಗಿ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಗೇಟ್ ಬರೆಯುವ ಅವಕಾಶ ಲಭಿಸಲಿದೆ. 

ವಿಜ್ಞಾನ,ತಂತ್ರಜ್ಞಾನ ಸ್ನಾತ್ತಕೋತ್ತರ,ಪಿಎಚ್‌ಡಿ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಲು ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಗಳಿಗೆ ಗೇಟ್ ಅಂಕಗಳನ್ನೇ ಮಾನದಂಡವಾಗಿ ಪರಿಗಣಿಸಲಿದ್ದಾರೆ. 

ಮುಂದಿನ ವರ್ಷದ ಫೆಬ್ರವರಿ ೫,೬,೭,೧೨.೧೩ ರಂದು ಈ ಪರೀಕ್ಷೆಗಳನ್ನು ಮುಂಬೈ ಐಐಟಿ ನಡೆಸಲಿದೆ. ಪರಿಸರ ವಿಜ್ಞಾನವನ್ನು ಈ ವರ್ಷ ವಿಷಯ ಪತ್ರಿಕೆಯನ್ನಾಗಿ ಸೇರಿಸಲಾಗಿದ್ದು, ಮಾನವಿಕ ಸಾಮಾಜಿಕ ವಿಜ್ಞಾನ ಸೇರಿಸಿದರೆ ಒಟ್ಟು ವಿಷಯಗಳ ಸಂಖ್ಯೆ ೨೭ಕ್ಕೆ ಏರಲಿದೆ.

ಪ್ರಸ್ತುತ, ಗೇಟ್ ಕನಿಷ್ಟ ಅರ್ಹತೆ ೧೦+೨+೪ ನಿಗದಿಯಿದ್ದು, ಈಗ ೧೦+ ೨+೩ ಆಗಿ ಬದಲಾಯಿಸಲಾಗಿದ್ದು ಈ ಹಿನ್ನಲೆಯಲ್ಲಿ ಅಂಡರ್ ಗ್ರಾಜ್ಯಯೇಟ್ ಮೂರನೇ ವರ್ಷದಲ್ಲಿರುವ ವಿದ್ಯಾರ್ಥಿಗಳು ಕೂಡಾ ಪರೀಕ್ಷೆ ಬರೆಯಲು ಅವಕಾಶವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com