400 ಉದ್ಯೋಗಿಗಳಿಗೆ ವೇತನ ರಹಿತ ರಜೆ ನೀಡಿದ ಟಾಟ್ ಟೆಕ್ ವಿರುದ್ಧ ದೂರು

ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್, ಪ್ರಾಜೆಕ್ಟ್ ಗಳು ಲಭ್ಯವಿಲ್ಲ ಎಂಬ ಕಾರಣ ನೀಡಿ ಸುಮಾರು 400 ಉದ್ಯೋಗಿಗಳಿಗೆ ಡಿಸೆಂಬರ್ 31 ರವರೆಗೆ ವೇತನ ರಹಿತ ರಜೆ ನೀಡಿದ್ದು, ಕಂಪನಿಯ ಈ ಕ್ರಮದ ವಿರುದ್ಧ ರಾಷ್ಟ್ರೀಯ ಐಟಿ ನೌಕರರ ಸೆನೆಟ್(ನೈಟ್ಸ್) ಮಹಾರಾಷ್ಟ್ರ ರಾಜ್ಯ ಕಾರ್ಮಿಕ ಇಲಾಖೆಗೆ ದೂರು ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಟೆಕ್ನಾಲಜೀಸ್, ಪ್ರಾಜೆಕ್ಟ್ ಗಳು ಲಭ್ಯವಿಲ್ಲ ಎಂಬ ಕಾರಣ ನೀಡಿ ಸುಮಾರು 400 ಉದ್ಯೋಗಿಗಳಿಗೆ ಡಿಸೆಂಬರ್ 31 ರವರೆಗೆ ವೇತನ ರಹಿತ ರಜೆ ನೀಡಿದ್ದು, ಕಂಪನಿಯ ಈ ಕ್ರಮದ ವಿರುದ್ಧ ರಾಷ್ಟ್ರೀಯ ಐಟಿ ನೌಕರರ ಸೆನೆಟ್(ನೈಟ್ಸ್) ಮಹಾರಾಷ್ಟ್ರ ರಾಜ್ಯ ಕಾರ್ಮಿಕ ಇಲಾಖೆಗೆ ದೂರು ನೀಡಿದೆ.

ಕಂಪನಿಯ ಈ ನಿರ್ಧಾರವು ಮಹಾರಾಷ್ಟ್ರ ಸರ್ಕಾರ ಮಾರ್ಚ್ 31 ರಂದು ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ಎಂದು ನೈಟ್ಸ್ ಪ್ರಧಾನ ಕಾರ್ಯದರ್ಶಿ ಹರ್ಪ್ರೀತ್ ಸಲೂಜಾ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಕೊವಿಡ್-19 ಸಂದರ್ಭದಲ್ಲಿ ಯಾವುದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಡಿ ಮತ್ತು ವೇತನ ಕಡಿತಗೊಳಿಸಬಾರದು ಎಂದು ಮಹಾ ಸರ್ಕಾರ ಖಾಸಗಿ ಕಂಪನಿಗಳಿಗೆ ಆದೇಶಿಸಿತ್ತು. ಆದರೂ ಟಾಟಾ ಟೆಕ್ 400 ಉದ್ಯೋಗಿಗಳಿಗೆ ವೇತನ ರಹಿತ ರಜೆ ನೀಡಿದೆ. 

ಈ ಸಂಬಂಧ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದು, ಕಾರ್ಮಿಕ ಆಯುಕ್ತರು ಜುಲೈ 28ರಂದು ವಿಚಾರಣೆಗೆ ನಮ್ಮನ್ನು ಮತ್ತು ಸಂತ್ರಸ್ತ ನೌಕರರನ್ನು ಕರೆದಿದ್ದಾರೆ ಎಂದು ಸಲೂಜಾ ತಿಳಿಸಿದ್ದಾರೆ.

ಈ ಸಂಬಂಧ ಟಾಟಾ ಟೆಕ್ ನ ಎಚ್ ಆರ್ ತಂಡ ಉದ್ಯೋಗಿಗಳಿಗೆ ಕಳುಹಿಸಿದ ಇ-ಮೇಲ್ ಪ್ರತಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು, ಅದರಲ್ಲಿ ಪ್ರಸ್ತುತ ಯಾವುದೇ ಪ್ರಾಜೆಕ್ಟ್ ಗಳು ಅಥವಾ ಅಸೈನ್ ಮೆಂಟ್ಸ್ ಗಳು ಇಲ್ಲದಿರುವುದರಿಂದ ಡಿಸೆಂಬರ್ 31, 2020 ರ ವರೆಗೆ ವೇತನ ರಹಿತ ರಜೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com