ಮಾಸ್ಕ್ ಧರಿಸದ್ದಕ್ಕೆ ಮೇಕೆಯ ಬಂಧನ!

ಮಾಸ್ಕ್ ಧರಿಸದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಮೇಕೆಯನ್ನು ಕಾನ್ಪುರ ಪೊಲೀಸರು ಬಂಧಿಸಿರುವ ವಿಲಕ್ಷಣ ಘಟನೆ ನಡೆದಿದೆ. 
ಮಾಸ್ಕ್ ಧರಿಸದ್ದಕ್ಕೆ ಮೇಕೆಯ ಬಂಧನ!
ಮಾಸ್ಕ್ ಧರಿಸದ್ದಕ್ಕೆ ಮೇಕೆಯ ಬಂಧನ!

ಕಾನ್ಪುರ: ಮಾಸ್ಕ್ ಧರಿಸದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಮೇಕೆಯನ್ನು ಕಾನ್ಪುರ ಪೊಲೀಸರು ಬಂಧಿಸಿರುವ ವಿಲಕ್ಷಣ ಘಟನೆ ನಡೆದಿದೆ. 

ಬೆಕೋನ್ ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಮೇಕೆಯನ್ನು ಜೀಪಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಮೇಕೆಯ ಮಾಲಿಕ ಸೈಫುದ್ದೀನ್ ಬೇಗ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಮನವಿ ಮಾಡಿ ತನ್ನ ಮೇಕೆಯನ್ನು ವಾಪಸ್ ಪಡೆದಿದ್ದಾನೆ. 

"ಕೊರೋನಾ ಬಂದ ನಂತರ ಜನರು ತಮ್ಮ ನಾಯಿಗಳಿಗೂ ಮಾಸ್ಕ್ ಧರಿಸುತ್ತಿದ್ದಾರೆ ಹಾಗಿದ್ದಾಗ ಮೇಕೆಗೆ ಏಕೆ ಮಾಸ್ಕ್ ಹಾಕಿಲ್ಲ?" ಎಂದು ಓರ್ವ ಪೊಲೀಸ್ ಸಿಬ್ಬಂದಿ ಪ್ರಶ್ನಿಸಿರುವುದು ವರದಿಯಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಹಾಸ್ಯಕ್ಕೆ ಗುರಿಯಾಗುತ್ತಿದ್ದಂತೆಯೇ ಪೊಲೀಸರು ಘಟನೆಯ ಬಗ್ಗೆ ಬೇರೆಯದ್ದೇ ರೀತಿ ಹೇಳಲು ಪ್ರಾರಂಭಿಸಿದ್ದಾರೆ. 

"ರಸ್ತೆಯಲ್ಲಿ ಓರ್ವ ಯುವಕ ಮಾಸ್ಕ್ ಧರಿಸದೇ ಮೇಕೆಯನ್ನು ಕರೆದೊಯ್ಯುತ್ತಿದ್ದ, ಪೊಲೀಸರನ್ನು ಕಂಡೊಡನೆಯೇ ಆತ ಮೇಕೆಯನ್ನು ಬಿಟ್ಟು ಪರಾರಿಯಾದ, ಮೇಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅದನ್ನು ಮಾಲಿಕನಿಗೆ ತಲುಪಿಸಲಾಗಿದೆ" ಎಂದು ಪೊಲೀಸರು ಹೇಳುತ್ತಿದ್ದು, ಮೇಕೆಯನ್ನು ರಸ್ತೆಯಲ್ಲಿ ಅಡ್ಡಾಡಲು ಬಿಡದಂತೆ ಮಾಲಿಕನಿಗೆ ಎಚ್ಚರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com